AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ; ರೈಲಿನೊಳಗೆ ಮಕ್ಕಳ ಜೊತೆ ಸಂವಾದ

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ; ರೈಲಿನೊಳಗೆ ಮಕ್ಕಳ ಜೊತೆ ಸಂವಾದ

ಸುಷ್ಮಾ ಚಕ್ರೆ
|

Updated on:Sep 05, 2026 | 7:54 PM

Share

ಮೆಟ್ರೋ ರೈಲಿನಲ್ಲಿ ತಮ್ಮ ಜೊತೆ ಪ್ರಯಾಣಿಸುತ್ತಿದ್ದ ಯುವಜನತೆ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸುದೀರ್ಘವಾಗಿ ಹರಟಿದರು. ಅವರ ಶಿಕ್ಷಣ, ಭವಿಷ್ಯದ ಕನಸುಗಳು ಹಾಗೂ ತಂತ್ರಜ್ಞಾನದ ಬಳಕೆಯ ಕುರಿತು ಪ್ರಧಾನಿ ಮುಕ್ತವಾಗಿ ಚರ್ಚಿಸಿದರು. ಬಿಗಿ ಭದ್ರತೆಯ ನಡುವೆಯೂ ಪ್ರಧಾನಿ ಮೋದಿ ಸ್ವತಃ ತಮ್ಮ ಮೆಟ್ರೋ ಕಾರ್ಡ್ ಬಳಸಿ ಸ್ಮಾರ್ಟ್ ಗೇಟ್ ಮೂಲಕ ಪ್ರವೇಶಿಸಿ, ಜನಸಾಮಾನ್ಯರಂತೆ ಮೆಟ್ರೋ ಸೀಟ್​​ನಲ್ಲಿ ಕುಳಿತು ಪ್ರಯಾಣ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ನವದೆಹಲಿ, ಸೆಪ್ಟೆಂಬರ್ 5: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಶನಿವಾರ) ದೆಹಲಿಯ ಪ್ರಸಿದ್ಧ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ಎಸ್​ಆರ್​ಸಿಸಿ) ಕಾಲೇಜಿಗೆ ತೆರಳಲು ಕಾರಿನ ಬದಲು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಮೆಟ್ರೋ ರೈಲಿನೊಳಗೆ ಅವರು ಮಕ್ಕಳ ಜೊತೆ ಮಾತುಕತೆ ನಡೆಸಿದರು. ಎಸ್‌ಆರ್‌ಸಿಸಿ ಸಂಸ್ಥೆಯ ಶತಾಬ್ದಿ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡುವ ಮುನ್ನ, ಪ್ರಧಾನಿ ಮೋದಿ ಸಾಮಾನ್ಯ ಪ್ರಯಾಣಿಕರಂತೆ ತಮ್ಮ ಬಳಿ ಮೆಟ್ರೋ ಕಾರ್ಡ್ ಹಿಡಿದು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದರು. ಈ ಪ್ರಯಾಣದ ವೇಳೆ ಅವರು ರೈಲಿನಲ್ಲಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ್ದು ವಿಶೇಷವಾಗಿತ್ತು.

ಮೆಟ್ರೋ ರೈಲಿನಲ್ಲಿ ತಮ್ಮ ಜೊತೆ ಪ್ರಯಾಣಿಸುತ್ತಿದ್ದ ಯುವಜನತೆ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸುದೀರ್ಘವಾಗಿ ಹರಟಿದರು. ಅವರ ಶಿಕ್ಷಣ, ಭವಿಷ್ಯದ ಕನಸುಗಳು ಹಾಗೂ ತಂತ್ರಜ್ಞಾನದ ಬಳಕೆಯ ಕುರಿತು ಪ್ರಧಾನಿ ಮುಕ್ತವಾಗಿ ಚರ್ಚಿಸಿದರು. ಬಿಗಿ ಭದ್ರತೆಯ ನಡುವೆಯೂ ಪ್ರಧಾನಿ ಮೋದಿ ಸ್ವತಃ ತಮ್ಮ ಮೆಟ್ರೋ ಕಾರ್ಡ್ ಬಳಸಿ ಸ್ಮಾರ್ಟ್ ಗೇಟ್ ಮೂಲಕ ಪ್ರವೇಶಿಸಿ, ಜನಸಾಮಾನ್ಯರಂತೆ ಮೆಟ್ರೋ ಸೀಟ್​​ನಲ್ಲಿ ಕುಳಿತು ಪ್ರಯಾಣ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 05, 2026 07:30 PM

Follow Us