AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​.ಡಿ. ಕುಮಾರಸ್ವಾಮಿಗೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ತಿರುಗೇಟು

RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​.ಡಿ. ಕುಮಾರಸ್ವಾಮಿಗೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ತಿರುಗೇಟು

ಈರಣ್ಣಾ ಬಸವಾ
| Edited By: |

Updated on: Oct 15, 2026 | 12:48 PM

Share

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕವಚನದಲ್ಲಿ ಮಾತನಾಡುವುದರಿಂದ ತಾನು ಹೆದರುವುದಿಲ್ಲ, ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತಲೂ ಮಾಹಿತಿ ಇದ್ದರೆ ಬಂದು ನೀಡಿ. ತನಿಖೆ ಹೇಗೆ ಮಾಡಬೇಕೆಂದು ಯಾರಿಂದಲೂ ಕಲಿಯಬೇಕಾಗಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 15: ತಾಕತ್ತಿದ್ರೆ ಆರೆಸ್ಟ್ ಮಾಡಲಿ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲಿಗೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ತಿರುಗೇಟು ನೀಡಿದ್ದು,ನೀವು ತಪ್ಪು ಮಾಡಿದ್ದರೆ ಅರೆಸ್ಟ್ ಮಾಡೇ ಮಾಡುತ್ತೇವೆ ಎಂದಿದ್ದಾರೆ. ತನಿಖೆ ಮಾಡುವುದನ್ನು ಅವರಿಂದ ನಾನು ಕಲಿಯಬೇಕಾಗಿಲ್ಲ. ನಾವು ಮಾರ್ಯದೆ ಕೊಟ್ಟು ಮಾತನಾಡುತ್ತಿದ್ದೇವೆ. ಏಕವಚನದಲ್ಲಿ ಮಾತನಾಡಿದ್ರೆ ಹೆದರಿಕೊಳ್ಳಲ್ಲ. ಆರ್​ಎಸ್ಎಸ್​ಗೆ ಹೆದರಿಕೊಳ್ಳಲಿಲ್ಲ, ನಿಮಗೆ ಏಕೆ ಹೆದರುತ್ತೇನೆ? ಎಂದವರು ಪ್ರಶ್ನಿಸಿದ್ದಾರೆ. ಮರ್ಯಾದೆ ಕೊಟ್ಟು ಮಾತನಾಡಿದರೆ ನಾವು ಕೇಳಲು ರೆಡಿಯಿದ್ದೇವೆ. ನೀವು ಮಾತನಾಡುವ ಭಾಷೆಯಲ್ಲೇ ನಾವು ಮಾತನಾಡಲು ರೆಡಿ. ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತ ಮಾಹಿತಿ ಇದ್ರೆ ಕೊಡಿ. ಅದು ಬಿಟ್ಟು ನನ್ನ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡಿದ್ರೆ ಹೇಗೆ? ತನಿಖೆ ಮಾಡುವಾಗ ಕೆಲವರ ಹೆಸರು ಬಂದಿದೆ, ಅದಕ್ಕಾಗಿ ವಿಚಾರಣೆ ಮಾಡುತ್ತಿದ್ದೇವೆ. ನೀವು ನನ್ನ ನಿಂದನೆ ಮಾಡೋದ್ರಿಂದ ಏನೂ ಸಾಧನೆ ಮಾಡೋದಿಲ್ಲ. ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More