ರಾಹುಲ್ ಗಾಂಧಿ ಫಟಾಫಟ್ ಪ್ರಶ್ನೋತ್ತರ; ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೂ ರಾಹುಲ್ ಪ್ರಶ್ನೆಗಳು

|

Updated on: May 05, 2024 | 5:27 PM

Rahul Gandhi chit chat with Siddaramaiah and Kharge: ಪ್ರಚಾರ ಮುಕ್ತಾಯವಾಗುವುದೇ ಪ್ರಚಾರ ಕಾರ್ಯದ ಅತ್ಯುತ್ತಮ ಭಾಗ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕ್ಯಾಂಪೇನಿಂಗ್​ನಲ್ಲಿ ಅವರಿಗೆ ಬಹಳ ಖುಷಿ ಕೊಡುವ ಸಂಗತಿ ಎಂದರೆ ಭಾಷಣವಂತೆ. ಭಾರತ್ ಜೋಡೋ ಯಾತ್ರೆ, ಚುನಾವಣಾ ಪ್ರಚಾರ ಇತ್ಯಾದಿ ಕ್ಯಾಂಪೇನಿಂಗ್​​ನಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ರಾಹುಲ್ ಗಾಂಧಿಗೆ ಇದು ಯಾಕೆ ಮುಖ್ಯ ಎಂದರೆ ದೇಶಕ್ಕೆ ಏನು ಅಗತ್ಯ ಎನ್ನುವುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆಯಂತೆ. ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಜೊತೆಗೂ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ.

ರಾಹುಲ್ ಗಾಂಧಿ (Rahul Gandhi) ಅವರಿಗೆ ಪಕ್ಷದ ಪ್ರಚಾರ ಕಾರ್ಯದಲ್ಲಿ ಬಹಳ ಇಷ್ಟವಾಗುವ ಸಂಗತಿಗಳೆಂದರೆ ಭಾಷಣ ಮತ್ತು ಪ್ರಚಾರ ಕಾರ್ಯದ ಮುಕ್ತಾಯವಂತೆ. ಅವರೇ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಅವರು ನೇರಾ ನೇರವಾಗಿ ಮಾತುಗಳನ್ನಾಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಚುನಾವಣಾ ಪ್ರಚಾರ ಕಾರ್ಯಕ್ಕಿಂತ ಭಾರತ್ ಜೋಡೋ ಯಾತ್ರೆ ಹೆಚ್ಚು ಕಷ್ಟಕರವಾಗಿತ್ತು ಎನ್ನುತ್ತಾರೆ. ಎರಡು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಲವು ದಿನಗಳ ಕಾಲ ವಿಶ್ರಾಂತಿ ಇಲ್ಲದಂತೆ ನಿರಂತರವಾಗಿ ಪಾದಯಾತ್ರೆ ಮಾಡುವುದು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಈ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಜೊತೆಗೂ ಚಿಟ್ ಚ್ಯಾಟ್ ನಡೆಸಿದ್ದಾರೆ. ಪಕ್ಷಕ್ಕೆ ಅಧಿಕಾರ ಮುಖ್ಯವೋ, ಸಿದ್ಧಾಂತ ಮುಖ್ಯವೋ ಎನ್ನುವ ಪ್ರಶ್ನೆ ಕೇಳಿದ್ದಾರೆ. ಪಕ್ಷಕ್ಕೆ ಅಧಿಕಾರಕ್ಕಿಂತ ಸಿದ್ಧಾಂತ ಮುಖ್ಯ ಎಂದು ಸಿದ್ದರಾಮಯ್ಯ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪಕ್ಷದ ಸಿದ್ಧಾಂತವನ್ನು ಜನರ ಮುಂದಿಡಬೇಕು. ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗಳನ್ನು ಜನರ ಮುಂದಿಡಬೇಕು ಎಂದು ಸಿದ್ದರಾಮಯ್ಯ ಹೇಳಿದರು. ರಾಹುಲ್ ಗಾಂಧಿ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಇದನ್ನೂ ಓದಿ: ಎಚ್​ಡಿಕೆ-ಅಮಿತ್ ಶಾ ತಡರಾತ್ರಿ ಸಭೆ; ಬಿಜೆಪಿ-ಜೆಡಿಎಸ್ ಮೈತ್ರಿ ಅಲುಗಾಟದ ಮಧ್ಯೆ ಮಹತ್ವ ಪಡೆದ ಭೇಟಿ

ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಅಧಿಕಾರಕ್ಕಿಂತ ಪಕ್ಷದ ಸಿದ್ಧಾಂತವೇ ಮುಖ್ಯ ಎನ್ನುವ ವಿಚಾರವನ್ನು ಪುನರುಚ್ಚರಿಸಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ