AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ, SIR ಪ್ರಕ್ರಿಯೆಯಲ್ಲಿ ಗಂಭೀರ ಲೋಪ ಬೆಳಕಿಗೆ

ಮಂಗಳೂರು: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ, SIR ಪ್ರಕ್ರಿಯೆಯಲ್ಲಿ ಗಂಭೀರ ಲೋಪ ಬೆಳಕಿಗೆ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Sep 02, 2026 | 1:15 PM

Share

ಮಂಗಳೂರಿನ 61 ವರ್ಷದ ಡೊನಾಲ್ಡ್ ಜೋಸೆಫ್ ರೇಗೋ ಅವರನ್ನು ಚುನಾವಣಾ ಆಯೋಗದ ಕರಡು ಮತದಾರರ ಪಟ್ಟಿಯಲ್ಲಿ ಮೃತ ಎಂದು ತಪ್ಪಾಗಿ ನಮೂದಿಸಲಾಗಿದೆ. ಜೀವಂತವಿದ್ದರೂ ತನ್ನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ್ದಕ್ಕೆ ರೇಗೋ ಆಘಾತ ವ್ಯಕ್ತಪಡಿಸಿದ್ದಾರೆ. ಈ ಲೋಪವನ್ನು ಸರಿಪಡಿಸಲು ಅವರು ಚುನಾವಣಾ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಮಂಗಳೂರು, ಸೆಪ್ಟೆಂಬರ್ 2: ರಾಜ್ಯ ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯ ವೇಳೆ ಗಂಭೀರ ಲೋಪವೊಂದು ಬೆಳಕಿಗೆ ಬಂದಿದೆ. ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೋ ಅವರನ್ನು ಕರಡು ಮತದಾರರ ಪಟ್ಟಿಯಲ್ಲಿ ‘ಮೃತ’ ಎಂದು ತಪ್ಪಾಗಿ ನಮೂದಿಸಲಾಗಿದೆ. ಆಗಸ್ಟ್ 24 ರಂದು ಪ್ರಕಟವಾದ ಪಟ್ಟಿಯಲ್ಲಿ ರೇಗೋ ಅವರ ಹೆಸರು ನಾಪತ್ತೆಯಾಗಿದ್ದು, ಪರಿಶೀಲಿಸಿದಾಗ ಅವರನ್ನು ‘ಮೃತ’ರ ವಿಭಾಗಕ್ಕೆ ಸೇರಿಸಿರುವುದು ಪತ್ತೆಯಾಗಿದೆ.

ಈ ಕುರಿತು ‘ಟಿವಿ9’ ಜೊತೆ ಮಾತನಾಡಿದ ರೇಗೋ, ‘ನಾನು ಬದುಕಿದ್ದರೂ ನನ್ನನ್ನು ಮೃತರ ಪಟ್ಟಿಗೆ ಸೇರಿಸಿದ್ದು ಆಘಾತಕಾರಿ. ಡೆತ್ ಸರ್ಟಿಫಿಕೇಟ್ ಇಲ್ಲದೆ ನನ್ನ ಹೆಸರನ್ನು ಡಿಲೀಟ್ ಮಾಡಿದ್ದು ಮೂರ್ಖತನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವೋಟರ್ ಐಡಿಯ ಪರಿಶೀಲನೆ ನಡೆಸಿದಾಗ ಈಗ, ಜ್‘ನೋ ರೆಕಾರ್ಡ್ಸ್ ಫೌಂಡ್’ ಎಂದು ಬರುತ್ತಿದೆ.

ರೇಗೋ ಅವರು ಈ ಹಿಂದೆ ಎಸ್ಐಆರ್ ಫಾರ್ಮ್ ಅನ್ನು ಭರ್ತಿ ಮಾಡಿ ಬಿಎಲ್ಒಗೆ ನೀಡಿದ್ದರು. 2023-24ರ ಕೇಂದ್ರ ಮತ್ತು ರಾಜ್ಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ತಮ್ಮ ಹೆಸರನ್ನು ಮರು ಸೇರಿಸಲು ಮಂಗಳೂರು ಚುನಾವಣಾ ವಿಭಾಗದ ಕಚೇರಿಗೆ ಹಲವು ಬಾರಿ ಅಲೆದಾಡಿದ್ದು, ಫಾರ್ಮ್ ನಂಬರ್ 6 ಮತ್ತು ಡಿಕ್ಲರೇಷನ್ ಫಾರ್ಮ್ ಸಲ್ಲಿಸಿದ್ದಾರೆ. ಅಧಿಕಾರಿಗಳು 8 ದಿನಗಳಲ್ಲಿ ಹೆಸರನ್ನು ಸೇರಿಸುವ ಭರವಸೆ ನೀಡಿರುವುದಾಗಿ ರೇಗೋ ತಿಳಿಸಿದ್ದು, ಇಂತಹ ಎಡವಟ್ಟುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us