ಸ್ಟಿಂಗ್ ಪ್ರಕರಣ: ಸಿಸಿಬಿ ವಿಚಾರಣೆಗ ಹಾಜರಾದ ಹೆಚ್ಡಿಕೆ ಪಿಆರ್‌ಒ ಪ್ರಜ್ವಲ್ ಪ್ರಸಾದ್
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಪಿಆರ್‌ಒ ಪ್ರಜ್ವಲ್ ಪ್ರಸಾದ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ದೆಹಲಿಯಲ್ಲಿ ಆರೋಪಿ ರಿತೇಶ್ ಪಾಂಡೆಗೆ ಮೊಬೈಲ್ ಹಸ್ತಾಂತರಿಸಿದ ಆರೋಪ ಇವರ ಮೇಲಿದೆ. ಸೈಬರ್ ಕ್ರೈಂ ನೋಟಿಸ್ ನೀಡಿದ ಬಳಿಕ, ಮಧ್ಯಂತರ ಜಾಮೀನು ಪಡೆದು ಪ್ರಜ್ವಲ್ ಹಾಜರಾಗಿದ್ದಾರೆ. ಪೊಲೀಸರು ಮೊಬೈಲ್ ಹಸ್ತಾಂತರ ಮತ್ತು ವಿಡಿಯೋ ಅಪ್ಲೋಡ್ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ನವೆಂಬರ್ 03: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆರೋಪ ಕೇಸ್ ಸಂಬಂಧ ಸಿಸಿಬಿ ಪೊಲೀಸರ ವಿಚಾರಣೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪಿಆರ್‌ಒ ಪ್ರಜ್ವಲ್ ಪ್ರಸಾದ್ ಹಾಜರಾಗಿದ್ದಾರೆ. ದೆಹಲಿಯ ಹೆಚ್ಡಿಕೆ ನಿವಾಸದಲ್ಲಿ ಆರೋಪಿ ರಿತೇಶ್ ಪಾಂಡೆಗೆ ಮೊಬೈಲ್ ಮೊಬೈಲ್ ನೀಡಿದ ಆರೋಪ ಸಂಬಂಧ, ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಜ್ವಲ್ ಪ್ರಸಾದ್ ವಿಚಾರಣೆ ನಡೆದಿದೆ. ಪ್ರಕರಣ ಸಂಬಂಧ ಪ್ರಜ್ವಲ್ ಪ್ರಸಾದ್ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದು, ಪ್ರಜ್ವಲ್ ಪ್ರಸಾದ್ ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇತ್ತೀಚೆಗಷ್ಟೇ ತಿಳಿಸಿದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 03, 2026 02:14 PM
Follow Us

