ಸ್ಟಿಂಗ್ ಆಪರೇಷನ್ ಕಿಂಗ್ಪಿನ್ ಬಂಧಿಸುವಂತೆ ಆಗ್ರಹ: ಡಿಜಿ ಕಚೇರಿಗೆ ಹೊರಟಿದ್ದ ಕುಮಾರಸ್ವಾಮಿಯನ್ನ ತಡೆದ ಪೊಲೀಸ್
ಮುಖ್ಯಾಂಶಗಳು
- ಸ್ಟಿಂಗ್ ಆಪರೇಷನ್ ಪ್ರಕರಣದ ಕಿಂಗ್ಪಿನ್ ಬಂಧಿಸುವಂತೆ ಆಗ್ರಹ
- ಪೊಲೀಸ್ ಪ್ರಧಾನ ಕಚೇರಿ ಎದುರು JDS ಕಾರ್ಯಕರ್ತರ ಪ್ರತಿಭಟನೆ
- ಡಿಜಿ ಕಚೇರಿಗೆ ಹೊರಟಿದ್ದ ಹೆಚ್ಡಿ ಕುಮಾರಸ್ವಾಮಿಗೆ ತಡೆ
ಸ್ಟಿಂಗ್ ಆಪರೇಷನ್ ಪ್ರಕರಣದ ಕಿಂಗ್ಪಿನ್ ಬಂಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಡಿಜಿ-ಐಜಿಪಿ ಕಚೇರಿ ಕಡೆಗೆ ಹೊರಟಿದ್ದರು. ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ಪೊಲೀಸರು ಮೆರವಣಿಗೆಯನ್ನು ತಡೆದರು. ಪ್ರತಿಭಟನಾಕಾರರು ಟೈರ್ಗಳಿಗೆ ಬೆಂಕಿ ಹಚ್ಚಿ, ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 17: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಮರ ಮತ್ತಷ್ಟು ತಾರಕಕ್ಕೇರಿದೆ. ಸ್ಟಿಂಗ್ ಆಪರೇಷನ್ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮತ್ತೊಂದು ಸುತ್ತಿನ ಸಮರ ಸಾರಿದ್ದಾರೆ. ಸ್ಟಿಂಗ್ ಕಿಂಗ್ಪಿನ್ ಬಂಧಿಸಲು ಕುಮಾರಸ್ವಾಮಿ ನೀಡಿದ್ದ ಡೆಡ್ಲೈನ್ ಅಂತ್ಯ ಹಿನ್ನೆಲೆ ಇಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿ ಕಚೇರಿಗೆ ಪಾದಯಾತ್ರೆ ಮೂಲಕ ಮುತ್ತಿಗೆಗೆ ಯತ್ನಿಸಿದರು. ಈ ವೇಳೆ ಫ್ರೀಡಂಪಾರ್ಕ್ ಬಳಿಯೇ ಪೊಲೀಸರು ಹೆಚ್ಡಿ ಕುಮಾರಸ್ವಾಮಿಯನ್ನ ತಡೆದಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ನಡೆದಿದ್ದು, ಭಾರೀ ಹೈಡ್ರಾಮಾವೇ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

