AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು! ವಿಡಿಯೋ ವೈರಲ್

ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು! ವಿಡಿಯೋ ವೈರಲ್

ರಾಮ್​, ಮೈಸೂರು
| Edited By: |

Updated on:Mar 23, 2026 | 10:25 AM

Share

ರಸ್ತೆ ದಾಟುವುದು ಹೇಗೆ ಗೊತ್ತಾ? ಇಲ್ಲಾಂದ್ರೆ ನಮ್ಮನ್ನು ನೋಡಿ ಕಲಿಯಿರಿ! ಕಾಡಾನೆ ಹಿಂಡು ಆಚೀಚೆ ನಿಂತ ವಾಹನ ಸವಾರರಿಗೆ ಹೀಗೆ ಹೇಳುತ್ತಿರಬಹುದಾ? ಇಂಥದ್ದೊಂದು ಪ್ರಶ್ನೆ ಮೂಡುವಂತೆ ಮಾಡಿದ್ದು, ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕಂಡುಬಂದ ಕಾಡಾನೆ ಗುಂಪು. ಆನೆಗಳ ಗುಂಪು ಶಿಸ್ತಿನಿಂದ ರಸ್ತೆ ದಾಟುತ್ತಿರುವ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ಸೆರೆಹಿಡಿದಿದ್ದು, ಈಗ ವೈರಲ್ ಆಗುತ್ತಿದೆ.

ಮೈಸೂರು, ಮಾರ್ಚ್ 23: ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕಾಡಾನೆ ಹಿಂಡೊಂದು ಶಿಸ್ತಿನಿಂದ ಗುಂಪಾಗಿ ರಸ್ತೆ ದಾಟಿದ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಯಾವುದೇ ಗದ್ದಲವಿಲ್ಲದೆ, ಯಾರಿಗೂ ತೊಂದರೆ ಮಾಡದೆ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟಿದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ರೆಕಾರ್ಡ್ ಮಾಡಿದ್ದಾರೆ. ​ಆನೆಗಳ ಆಗಮನ ಕಂಡು ವಾಹನ ಸವಾರರು ಕೂಡ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಿ ಸುಮ್ಮನಾಗಿ, ಅವು ರಸ್ತೆ ದಾಟುವ ವರೆಗೆ ಮೌನವಾಗಿ ಕಾಯುತ್ತಿರುವುದು ವಿಡಿಯೋದಲ್ಲಿದೆ. ಸದ್ಯ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 23, 2026 10:25 AM
Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More