AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್​ ಭಯಕ್ಕೆ ಎಲ್ಲರೂ ದೇಶ ಬಿಡುತ್ತಿದ್ದರೆ ತಾಲಿಬಾನಿಗಳಿಗೆ ಈಗ ಐಸಿಸ್​​ ಭೀತಿ ಶುರು

ಶತಮಾನದ ಬಳಿಕ ಎರಡನೇ ಬಾರಿಗೆ ಬ್ರಿಟನ್ ದೇಶವು ಅಫ್ಘನ್ ತೊರೆಯುತ್ತಿದ್ದು, ಈ ಬಾರಿ ಅಮೆರಿಕಾ ಜತೆ ಸೇರಿ ತಾಲಿಬಾನ್​ಗೆ ದೇಶ ಒಪ್ಪಿಸಿ ಹೊರಟಂತಾಗಿದೆ. ಇತ್ತ, ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಹಿನ್ನೆಲೆ ಕಾಬೂಲ್‌ನಿಂದ ನಿನ್ನೆ ಸುಮಾರು 4,200 ಜನರ ಸ್ಥಳಾಂತರ ಮಾಡಿರುವ ಬಗ್ಗೆ ಅಮೆರಿಕಾ ಮಾಹಿತಿ ನೀಡಿದೆ.

ತಾಲಿಬಾನ್​ ಭಯಕ್ಕೆ ಎಲ್ಲರೂ ದೇಶ ಬಿಡುತ್ತಿದ್ದರೆ ತಾಲಿಬಾನಿಗಳಿಗೆ ಈಗ ಐಸಿಸ್​​ ಭೀತಿ ಶುರು
ಸಾಂಕೇತಿಕ ಚಿತ್ರ
TV9 Web
| Edited By: |

Updated on: Aug 28, 2021 | 8:13 AM

Share

ತಾಲಿಬಾನ್ ಉಗ್ರರ ಭಯದಿಂದ ಹಲವು ದೇಶಗಳು ಅಫ್ಘಾನಿಸ್ತಾನವನ್ನು ತೊರೆಯುತ್ತಿವೆ. ಇದೀಗ ಬ್ರಿಟನ್​ ಕೂಡಾ ತನ್ನ ನಾಗರೀಕರನ್ನು ಏರ್‌ಲಿಫ್ಟ್ ಕಾರ್ಯಾಚರಣೆ ಮೂಲಕ ತವರಿಗೆ ಕರೆಸಿಕೊಂಡಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ. ಹೀಗಾಗಿ ಆಫ್ಘನ್‌ನಲ್ಲಿ ಬ್ರಿಟನ್ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತ್ತಿದ್ದ ಯುಕೆ ಇನ್ ಅಫ್ಘಾನಿಸ್ತಾನ ಟ್ವಿಟರ್ ಖಾತೆಯನ್ನೂ ಡಿಲೀಟ್ ಮಾಡಲಾಗಿದೆ. ವಿಪರ್ಯಾಸವೆಂದರೆ 1919ರಲ್ಲಿ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ನೀಡಿ ದೇಶ ತೊರೆದಿದ್ದ ಬ್ರಿಟಿಷರು ಇದೀಗ ಒಂದು ಶತಮಾನದ ಬಳಿಕ ತಾಲಿಬಾನ್​ಗೆ ಬೆದರಿ ಅಫ್ಘಾನಿಸ್ತಾನದಿಂದ ಹೊರಗೆ ನಡೆದಿದ್ದಾರೆ.

ಶತಮಾನದ ಬಳಿಕ ಎರಡನೇ ಬಾರಿಗೆ ಬ್ರಿಟನ್ ದೇಶವು ಅಫ್ಘನ್ ತೊರೆಯುತ್ತಿದ್ದು, ಈ ಬಾರಿ ಅಮೆರಿಕಾ ಜತೆ ಸೇರಿ ತಾಲಿಬಾನ್​ಗೆ ದೇಶ ಒಪ್ಪಿಸಿ ಹೊರಟಂತಾಗಿದೆ. ಇತ್ತ, ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಹಿನ್ನೆಲೆ ಕಾಬೂಲ್‌ನಿಂದ ನಿನ್ನೆ ಸುಮಾರು 4,200 ಜನರ ಸ್ಥಳಾಂತರ ಮಾಡಿರುವ ಬಗ್ಗೆ ಅಮೆರಿಕಾ ಮಾಹಿತಿ ನೀಡಿದೆ. ಆಗಸ್ಟ್​ 14ರಿಂದ ಈವರೆಗೆ 1,09,200 ಜನರ ಶಿಫ್ಟ್‌ಗೆ ಅಮೆರಿಕಾ ಸಹಾಯ ಮಾಡಿದೆ ಎಂದು ಶ್ವೇತಭವನದಿಂದ ಹೇಳಿಕೆ ಬಿಡುಗಡೆಯಾಗಿದೆ.

ಮಹಿಳಾ ಉದ್ಯೋಗಿಗಳು ಕೆಲಸ ಮುಂದುವರಿಸಲಿ: ತಾಲಿಬಾನ್​ ಮಹಿಳೆಯರ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹೇರಿದ್ದ ತಾಲಿಬಾನ್​, ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಆಫ್ಘನ್‌ನಲ್ಲಿ ಆರೋಗ್ಯ ಇಲಾಖೆಯಲ್ಲಿ ಇರುವ ಮಹಿಳಾ ಉದ್ಯೋಗಿಗಳು ಕೆಲಸ ಮುಂದುವರಿಸಲಿ. ಮಹಿಳಾ ಉದ್ಯೋಗಿಗಳು ಕೆಲಸ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಜಧಾನಿ ಕಾಬೂಲ್‌ ಸೇರಿದಂತೆ ಎಲ್ಲಾ ಪ್ರಾಂತ್ಯಗಳಲ್ಲಿ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಕೆಲಸ ಮುಂದುವರಿಸಲಿ. ಅವರ ಕೆಲಸಕ್ಕೆ ತಾಲಿಬಾನ್‌ನಿಂದ ಯಾವುದೇ ಆಕ್ಷೇಪ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ನೀಡಿದ್ದಾನೆ. ಮತ್ತೊಬ್ಬ ನಾಯಕ ಸುಹೇಲ್ ಶಹೀನ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು ಆರೋಗ್ಯ ಇಲಾಖೆಯಲ್ಲಿ ಇರುವ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್​ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿದ್ದಾನೆ.

ತಾಲಿಬಾನ್​ಗೆ ಈಗ ಐಸಿಸ್​ ಚಿಂತೆ! ಏತನ್ಮಧ್ಯೆ, ಕಾಬೂಲ್ ಏರ್​ಪೋರ್ಟ್ ಬಳಿ ಬಿಗಿಭದ್ರತೆ ವಹಿಸಲಾಗಿದ್ದು, ವಿಮಾನ ನಿಲ್ದಾಣದ ಬಳಿ ಹೋಗಲು ತಾಲಿಬಾನ್​ ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ, ಅಫ್ಘಾನಿಸ್ತಾನದ ಪಾಸ್​ಪೋರ್ಟ್ ಹೊಂದಿದವರಿಗೂ ಏರ್​ಪೋರ್ಟ್ ಬಳಿ ಬಿಡುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ಏರ್​ಪೋರ್ಟ್ ಸಮೀಪ ಹೋಗದಂತೆ ತಾಲಿಬಾನ್ ತಡೆಯೊಡ್ಡಿದ್ದು, ಕಾಬೂಲ್ ಏರ್​ಪೋರ್ಟ್ ಗೇಟ್ ಬಳಿ ಹೋಗದಂತೆ ಆಮೆರಿಕಾದ ನಾಗರಿಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಬೇರೆ ಬೇರೆ ದೇಶಗಳ ಗುಪ್ತಚರ ಇಲಾಖೆಗಳು ಏರ್​ಪೋರ್ಟ್ ಬಳಿ ದೊಡ್ಡ ಸ್ಪೋಟ ನಡೆಸಲು ಐಸಿಎಸ್ ಸಂಚು ಹೂಡಿದೆ ಎಂಬ ಮಾಹಿತಿ ನೀಡಿರುವ ಕಾರಣ ಈ ತೆರನಾದ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬೇರೆ ಬೇರೆ ದೇಶಗಳಿಗೆ ಸಂಭವನೀಯ ಸ್ಪೋಟದ ಬಗ್ಗೆ ಇಂಟಲಿಜೆನ್ಸ್ ಮಾಹಿತಿ ಲಭ್ಯವಾಗಿದ್ದು, ಮುಂದೆಯೂ ಐಸಿಎಸ್ ಸ್ಪೋಟ ನಡೆಸುವ ಬಗ್ಗೆ ಇಂಟಲಿಜೆನ್ಸ್ ವಿಭಾಗ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ತಾಲಿಬಾನ್ ನಾಯಕರನ್ನು ಭೇಟಿಯಾಗಿ ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೋರಿದ ಉಗ್ರ ಮಸೂದ್ ಅಜರ್

Taliban vs ISIS-K: ತಾಲಿಬಾನ್​​ನಿಂದ ಹೊರ ಬಂದವರೇ ಐಸಿಸ್​-ಕೆ ಸ್ಥಾಪಕ ಸದಸ್ಯರು; ಉಗ್ರರಿಗೆ ಉಗ್ರರೇ ಶತ್ರು

(Fear of Taliban made Britain America and other countries to left Afghanistan meanwhile ISIS K is a new threat for Taliban)

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ