ತಾಲಿಬಾನ್ ನಾಯಕರನ್ನು ಭೇಟಿಯಾಗಿ ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೋರಿದ ಉಗ್ರ ಮಸೂದ್ ಅಜರ್

ಪಾಕಿಸ್ತಾನದಲ್ಲಿರುವ ಉಗ್ರ ಮಸೂದ್ ಅಜರ್ ಅಫ್ಘಾನಿಸ್ತಾನದ ತಾಲಿಬಾನ್ ನಾಯಕರನ್ನು ಕಂದಹಾರ್ ನಗರದಲ್ಲಿ ಭೇಟಿಯಾಗಿ, ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೋರಿದ್ದಾನೆ

ತಾಲಿಬಾನ್ ನಾಯಕರನ್ನು ಭೇಟಿಯಾಗಿ ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೋರಿದ ಉಗ್ರ ಮಸೂದ್ ಅಜರ್
ಉಗ್ರ ಮಸೂದ್ ಅಜರ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 27, 2021 | 10:46 PM

ಕಂದಹಾರ್: ಪಾಕಿಸ್ತಾನದಲ್ಲಿರುವ ಕುಖ್ಯಾತ ಭಯೋತ್ಪಾದಕ, ಜೈಷ್-ಎ-ಮೊಹಮದ್ ಉಗ್ರಗಾಮಿ ಸಂಘಟನೆಯ ನಾಯಕ ಮಸೂದ್ ಅಜರ್ ಅಫ್ಘಾನಿಸ್ತಾನದ ತಾಲಿಬಾನ್ ನಾಯಕರನ್ನು ಕಂದಹಾರ್ ನಗರದಲ್ಲಿ ಭೇಟಿಯಾಗಿ, ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೋರಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ಜಾಲತಾಣ ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಲ್ಲಾ ಅಬ್ದುಲ್ ಘನಿ ಬಾರದಾರ್ ಸೇರಿದಂತೆ ಹಲವು ಪ್ರಮುಖರನ್ನು ಮಜೂದ್ ಅಜರ್ ಭೇಟಿಯಾಗಿದ್ದಾನೆ ಎನ್ನಲಾಗಿದೆ. ಮುಂಬೈ ಮೇಲೆ ಭಯೋತ್ಪಾದಕರ ದಾಳಿ (26/11) ಸೇರಿದಂತೆ ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಮಸೂದ್ ಅಜರ್​ ಆರೋಪಿಯಾಗಿದ್ದಾನೆ.

ತಾಲಿಬಾನ್ ಉಗ್ರರು ಕಾಬೂಲ್ ವಶಪಡಿಸಿಕೊಳ್ಳುವ ಒಂದು ದಿನ ಮೊದಲಷ್ಟೇ ತಾಲಿಬಾನ್ ಉಗ್ರರನ್ನು ಮಜೂದ್ ಅಜರ್ ಶ್ಲಾಘಿಸಿ ಲೇಖನ ಬರೆದಿದ್ದ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆಲುವನ್ನು ಸಂಭ್ರಮಿಸಿದ್ದ ಜೈಷ್-ಎ-ಮೊಹಮದ್ ಉಗ್ರರು ಪರಸ್ಪರ ಅಭಿನಂದನೆಯ ಮೆಸೇಜ್​ಗಳನ್ನು ವಿನಿಮಯ ಮಾಡಿಕೊಂಡಿದ್ದರು.

ಜೈಷ್​-ಎ-ಮೊಹಮದ್ ಮತ್ತು ತಾಲಿಬಾನ್ ಸಂಘಟನೆಗಳು ಸೈದ್ಧಾಂತಿಕವಾಗಿ ಸಹಮತ ಹೊಂದಿವೆ. ಇಸ್ಲಾಮಿಕ್ ಷರಿಯಾ ಕಾನೂನು ಪದ್ಧತಿಯನ್ನು ಡಿಯೊಬಂಡಿ ಸುನ್ನಿ ವಿಚಾರಧಾರೆಗೆ ಅನುಗುಣವಾಗಿ ಎರಡೂ ಸಂಘಟನೆಗಳು ವಿಶ್ಲೇಷಿಸುತ್ತವೆ. ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸುತ್ತವೆ.

ಕಠ್ಮಂಡುವಿನಿಂದ ಲಖನೌಗೆ ಬರುತ್ತಿದ್ದ ಇಂಡಿಯನ್ ಏರ್​ಲೈನ್ಸ್​ ವಿಮಾನವನ್ನು ಅಪಹರಿಸಿ ಕಂದಹಾರ್​​ಗೆ ಕೊಂಡೊಯ್ದಿದ್ದ ಪಾಕಿಸ್ತಾನದ ಉಗ್ರಗಾಮಿಗಳು ಪ್ರಯಾಣಿಕರನ್ನು ಒತ್ತೆಯಾಗಿ ಇರಿಸಿಕೊಂಡು ಮಸೂದ್​ ಅಜರ್​ನ ಬಿಡುಗಡೆಗೆ ಒತ್ತಾಯಿಸಿದ್ದರು. ಆಗ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿದ್ದ ತಾಲಿಬಾನಿಗಳು ವಿಮಾನದ ಸುತ್ತ ಕಾವಲುನಿಂತು ಭಯೋತ್ಪಾದಕರ ಉದ್ದೇಶ ಈಡೇರಿಸಿದ್ದರು. ಮಸೂದ್ ಅಜರ್ ಬಿಡುಗಡೆಯ ನಂತರ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿತ್ತು.

ಪಾಕಿಸ್ತಾನದ ಆಡಳಿತಾರೂಢ ಪಕ್ಷ ತೆಹ್ರೀಕ್-ಎ-ಇನ್​ಸಾಫ್ (ಪಿಟಿಐ) ನಾಯಕಿ ನೀಲೀಮ್ ಇರ್ಷಾದ್ ಶೇಖ್ ಸಹ ಜಮ್ಮು ಕಾಶ್ಮೀರದ ಹೋರಾಟಕ್ಕೆ ತಾಲಿಬಾನ್ ಬೆಂಬಲ ಸಿಗಲಿದೆ ಎಂದು ಹೇಳಿಕೊಂಡಿದ್ದರು. ಕಾಶ್ಮೀರದ ಹೋರಾಟದಲ್ಲಿ ಪಾಕಿಸ್ತಾನದ ಜೊತೆಗೆ ಇನ್ನು ಮುಂದೆ ಅಫ್ಘಾನಿಸ್ತಾನದ ನೆರವೂ ನಮಗೆ ಸಿಗಲಿ ಎಂದು ಲೈವ್ ಟಿವಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.

(Terrorist Masood Azhar Visits Kandahar to seek help for Kashmir Terrorist Activity)

ಇದನ್ನೂ ಓದಿ: ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ

ಇದನ್ನೂ ಓದಿ: ಹಸಿವಿನಿಂದ ತತ್ತರಿಸುತ್ತಿದೆ ಅಫ್ಘಾನಿಸ್ತಾನ; ಎಲ್ಲ 34 ಪ್ರಾಂತ್ಯಗಳಲ್ಲಿ ಭೀಕರ ಬರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada