ಆಫ್ರಿಕಾ ಸುದ್ದಿ: ಜನಗಣತಿಯಲ್ಲ, ಕೀನ್ಯಾದಲ್ಲಿ ನಡೆಯುತ್ತಿದೆ ವನ್ಯಜೀವಿಗಳ ಗಣತಿ
Kenya National Wildlife Census 2021: ವನ್ಯಜೀವಿ ಗಣತಿಯ ವಿಧಾನವೂ ವಿಶಿಷ್ಟವಾಗಿದ್ದು ಚಿಕ್ಕ ಚಿಕ್ಕ ಏರ್ಕ್ರಾಪ್ಟ್ಗಳಲ್ಲಿ ಕುಳಿತ ಪೈಲಟ್ಗಳು ಸರ್ವೆ ನಡೆಸಲಿದ್ದಾರೆ. ಯಾವ ಪ್ರಾಣಿಗಳು ಯಾವ ಪ್ರದೇಶದಲ್ಲಿ ವಾಸಿಸುತ್ತವೆ? ಎಲ್ಲಿ ಆಹಾರ ಸೇವಿಸುತ್ತವೆ ಎಂಬಂತಹ ವಿವರಗಳನ್ನೂ ಈ ಗಣತಿಯು ಕಲೆಹಾಕಲಿದೆ.

ಕಾಡು ಮತ್ತು ವನ್ಯಜೀವಿಗಳಿಗಾಗಿ ವಿಶ್ವದಲ್ಲೆ ಅನನ್ಯ ಎಂದು ಆಫ್ರಿಕಾ ಗುರುತಿಸಿಕೊಂಡಿದೆ. ಇಂತಹ ಆಫ್ರಿಕಾದ ದೇಶ ಕೀನ್ಯಾದಲ್ಲಿ ಇದೇ ಮೊದಲ ಬಾರಿಗೆ ವನ್ಯಜೀವಿಗಳ ಗಣತಿ ನಡೆಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪ, ಹವಾಮಾನ ಬದಲಾವಣೆ, ಬೇಟೆಯಂತಹ ಕಾರಣಗಳಿಗಾಗಿ ಆಫ್ರಿಕಾದಂತಹ ಆಫ್ರಿಕಾದಲ್ಲಿಯೂ ವನ್ಯಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ವನ್ಯಜೀವಿಗಳ ಗಣತಿ ಅತ್ಯಂತ ಮಹತ್ವ ಪಡೆದಿದೆ. ಇತ್ತೀಚಿಗಷ್ಟೇ ಸ್ಥಾಪಿಸಲಾಗಿರುವ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಈ ಗಣತಿಯ ಮುಂದಾಳತ್ವ ವಹಿಸಲಿದೆ. ಅಲ್ಲದೇ ಈ ಗಣತಿ ಕೇವಲ ವನ್ಯಜೀವಿಗಳ ಎಣಿಕೆಗೆ ಮಾತ್ರ ಸೀಮಿತವಾಗಿರದು ಎಂದು ಸಹ ಅಲ್ಲಿಯ ಪ್ರವಾಸೋದ್ಯಮ ಸಚಿವ ಜುಲುಯುಸ್ ಚೆಪ್ತಾಹ್ ತಿಳಿಸಿದ್ದಾರೆ. ಮೇ 12ರಿಂದಲೆ ಕೀನ್ಯಾದಲ್ಲೆ ವನ್ಯಜೀವಿಗಳ ಗಣತಿ ನಡೆಯುತ್ತಿದೆ.
ಪ್ರದೇಶವಾರು ವನ್ಯಜೀವಿಗಳ ಸಂಖ್ಯೆಯನ್ನು ಗಮನಿಸಿ ಸಂಪೂರ್ಣ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಯಾವ ಭಾಗದಲ್ಲಿ ಯಾವ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು ಗಮನಿಸಿ ಪ್ರಾಣಿಗಳ ಸಂಖ್ಯೆಯಲ್ಲಿ ಕಡಿಮೆಯಾದ ಕಾರಣ ಹುಡುಕಲಾಗುವುದು. ಜತೆಗೆ ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗದಂತೆ ಕ್ರಮ ವಹಿಸಲು ಯೋಜನೆ ರೂಪಿಸಿಲಾಗುವುದು. ಮಾನವ ಹಸ್ತಕ್ಷೇಪ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವನ್ಯಜೀವಿ ಗಣತಿಯ ವಿಧಾನವೂ ವಿಶಿಷ್ಟವಾಗಿದ್ದು ಚಿಕ್ಕ ಚಿಕ್ಕ ಏರ್ಕ್ರಾಪ್ಟ್ಗಳಲ್ಲಿ ಕುಳಿತ ಪೈಲಟ್ಗಳು ಸರ್ವೆ ನಡೆಸಲಿದ್ದಾರೆ. ಯಾವ ಪ್ರಾಣಿಗಳು ಯಾವ ಪ್ರದೇಶದಲ್ಲಿ ವಾಸಿಸುತ್ತವೆ? ಎಲ್ಲಿ ಆಹಾರ ಸೇವಿಸುತ್ತವೆ ಎಂಬಂತಹ ವಿವರಗಳನ್ನೂ ಈ ಗಣತಿಯು ಕಲೆಹಾಕಲಿದೆ.
ಕೀನ್ಯಾದ ವನ್ಯಜೀವಿ ಸೇವೆಗಳ ಇಲಾಖೆಯ ನಿರ್ದೇಶಕ ರಾಬರ್ಟ್ ಓಬ್ರಿಯಾನ್, ‘ನಾವು ಹಿಂದೆಂದೂ ನಡೆಸದಂತೆ ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿದ್ದೇವೆ. ಏಕೆಂದರೆ ಮಾನವನ ಜನಸಂಖ್ಯೆ ಹೆಚ್ಚುತ್ತಲೆ ಇದೆ. ನಮ್ಮ ಜನಸಂಖ್ಯೆ ಕಡಿಮೆಯಾಗುವುದೇ ಇಲ್ಲ, ಅದು ಹೆಚ್ಚುತ್ತಲೇ ಇದೆ ಮತ್ತು ಇರುತ್ತದೆ. ಈ ಕಾರಣಕ್ಕೆ ಅರಣ್ಯ ಪ್ರದೇಶಗಳನ್ನು ಅತಿಕ್ರಮಣ ಹೆಚ್ಚುತ್ತಿದೆ. ಬಹುಶಃ ಇನ್ನೊಂದು 10 ವರ್ಷಗಳಲ್ಲಿ ಕೇವಲ ಸಂರಕ್ಷಿತ ಪ್ರದೇಶಗಳಲ್ಲಿ ಮಾತ್ರ ವನ್ಯಜೀವಿಗಳು ವಾಸಿಸುವುದನ್ನು ಕಾಣಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
National Wildlife Census 2021,Launched today by @tunajibu at Shimba hills @OurKwaleCounty. Kenya’s ?? first National Wildlife census. Making history! ???????????????????️??@kwskenya @Environment_Ke @LamechLamarch25 @MombasaCountyKe #CountToConserve pic.twitter.com/u4jtpgv9dM
— Dorcas Wakio (@WakioDorcas) May 7, 2021
ಇದನ್ನೂ ಓದಿ:
TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?
(Africa Kenya National Wildlife Census 2021 started in May news in Kannada)