ದರ್ಪ ತೋರುವ ಚೀನಾಕ್ಕೆ ಮತ್ತೊಮ್ಮೆ ಮುಖಭಂಗ -ಎಲ್ಲಿ? ಹೇಗೆ?

ಈ ಬಾರಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಚೀನಾ ಆಯ್ಕೆ ಆಗಿದ್ದಕ್ಕೆ ಆ ದೇಶದಲ್ಲಿ ವಿಜಯೋತ್ಸವವೂ ನಡೆಯಲಿಲ್ಲ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಆಯ್ಕೆಯಾದ ಉಳಿದ 14 ರಾಷ್ಟ್ರಗಳಿಗಿಂತ ಕಡಿಮೆ ಮತ ಗಳಿಸಿ ಆಯ್ಕೆಯಾದ ಚೀನಾಕ್ಕೆ ಮುಖಭಂಗ ಅನುಭವಿಸಿದಂತೆ ಆಗಿದೆ. ಕಳೆದ ಬಾರಿ ಟಾಂ ಟಾಂ ಹೊಡೆದಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.. ಒಟ್ಟು 47-ಸದಸ್ಯ ರಾಷ್ಟ್ರಗಳ ಈ ಮಾನವ ಹಕ್ಕು ಆಯೋಗದ ಚುನಾವಣೆಯಲ್ಲಿ, ಚೀನಾ ಈ […]

ದರ್ಪ ತೋರುವ ಚೀನಾಕ್ಕೆ ಮತ್ತೊಮ್ಮೆ ಮುಖಭಂಗ -ಎಲ್ಲಿ? ಹೇಗೆ?
Follow us
ಸಾಧು ಶ್ರೀನಾಥ್​
|

Updated on: Oct 21, 2020 | 5:11 PM

ಈ ಬಾರಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಚೀನಾ ಆಯ್ಕೆ ಆಗಿದ್ದಕ್ಕೆ ಆ ದೇಶದಲ್ಲಿ ವಿಜಯೋತ್ಸವವೂ ನಡೆಯಲಿಲ್ಲ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಆಯ್ಕೆಯಾದ ಉಳಿದ 14 ರಾಷ್ಟ್ರಗಳಿಗಿಂತ ಕಡಿಮೆ ಮತ ಗಳಿಸಿ ಆಯ್ಕೆಯಾದ ಚೀನಾಕ್ಕೆ ಮುಖಭಂಗ ಅನುಭವಿಸಿದಂತೆ ಆಗಿದೆ.

ಕಳೆದ ಬಾರಿ ಟಾಂ ಟಾಂ ಹೊಡೆದಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.. ಒಟ್ಟು 47-ಸದಸ್ಯ ರಾಷ್ಟ್ರಗಳ ಈ ಮಾನವ ಹಕ್ಕು ಆಯೋಗದ ಚುನಾವಣೆಯಲ್ಲಿ, ಚೀನಾ ಈ ಬಾರಿ 139 ಮತ ಗಳಿಸಿತು. ಈ ಹಿಂದೆ 2016 ರಲ್ಲಿ ಇದೇ ಆಯೋಗಕ್ಕೆ ಚೀನಾ ಆಯ್ಕೆ ಆದಾಗ, ಅದಕ್ಕೆ ಬಿದ್ದ ಮತ ಎಷ್ಟು ಗೊತ್ತಾ? ಬರೋಬ್ಬರಿ 180. ಈ ಹಿಂದೆ 2009 ಮತ್ತು 2013 ರಲ್ಲಿ ಈ ಆಯೋಗಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚೀನಾ ಗಳಿಸಿದ್ದ 167 ಮತಗಳಿಗಿಂತ ಜಾಸ್ತಿ ಆಗಿತ್ತು. ಮಾನವ ಹಕ್ಕಿಗೆ ಕೊಟ್ಟ ಮಹತ್ವ ಅರಿತು ಅಷ್ಟೆಲ್ಲಾ ಮತ ತನಗೆ ಬಂದಿತ್ತು ಎಂದು ಚೀನಾ ತನ್ನ ದೇಶದೊಳಗೆ ಟಾಂ ಟಾಂ ಮಾಡಿತ್ತು. ಆದರೆ, ಈ ಬಾರಿ ಹಾಗಾಗಲಿಲ್ಲ.

ಮಾನವ ಹಕ್ಕಿನ ವಿಷಯ ಇಟ್ಟುಕೊಂಡು ಅನೇಕ ದೇಶಗಳು ಚೀನಾವನ್ನು ಟೀಕಿಸಿವೆ. ವಿಶ್ವ ಸಂಸ್ಥೆ ಜನರಲ್ ಅಸೆಂಬ್ಲಿಯ ಮೂರನೇ ಸಮಿತಿಯಲ್ಲಿ ಆ ದೇಶದ ಮೇಲೆ ಹಲವಾರು ಆರೋಪ ಮಾಡಿತ್ತು. ಅದರಲ್ಲಿ ಮೊದಲ ಕಾರಣ: ಷಿನ್ ಜಿಯಾಂಗ್ ಪ್ರಾಂತದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಆರೋಪ. ಅದೇ ರೀತಿಯಲ್ಲಿ ಹಾಂಗ್ ಕಾಂಗ್ ಮತ್ತು ಟಿಬೆಟ್ ನಲ್ಲಿ ಸಹ ಮಾನವ ಹಕ್ಕು ಉಲ್ಲಂಘನೆ ಮಾಡಿರುವ ಗುರುತರ ಆರೋಪವನ್ನು ಚೀನಾ ಎದುರಿಸುತ್ತಿದೆ. ಕಳೆದ ವರ್ಷ 40 ಕ್ಕೂ ಹೆಚ್ಚು ರಾಷ್ಟ್ರಗಳು ಈ ಕುರಿತು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ತೀರಾ ಇತ್ತೀಚೆಗೆ ಅಂದರೆ ಆಕ್ಟೋಬರ್ 14 ರಂದು, 39 ಸದಸ್ಯ ರಾಷ್ಟ್ರಗಳು ಈ ಕುರಿತು ಚೀನಾವನ್ನು ಟೀಕಿಸಿವೆ.

ಚೀನಾದ ಕುಸಿಯುತ್ತಿರುವ ಜನಪ್ರಿಯತೆಗೆ, ಆ ದೇಶ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಹದಗೆಡಿಸಿಕೊಂಡಿರುವ ಸಂಬಂಧ ಕೂಡ ಕಾರಣ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ, ಚೀನಾ ತನ್ನ ನೆರೆಹೊರೆಯ 12 ರಾಷ್ಟ್ರಗಳೊಂದಿಗೆ ಒಂದಲ್ಲ ಒಂದು ರೀತಿಯ ಗಡಿ ತಂಟೆಗಿಳಿದಿದೆ. ಈ ಹಿನ್ನೆಲೆಯಲ್ಲಿ, ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯ ತಮ್ಮದೆ ಆದ ಹೊಸದೊಂದು ಗುಂಪು ಮಾಡಿಕೊಂಡು ಚೀನಾದ ಕ್ಯಾತೆ ಎದುರಿಸಲು ಸಜ್ಜಾಗಿವೆ. ಮತ್ತು ದಕ್ಷಿಣ ಚೀನಾ ಸಾಗರ (South China Sea) ಪ್ರದೇಶದಲ್ಲಿ ಚೀನಾವನ್ನು ಮಟ್ಟ ಹಾಕಿ ಆ ಜಲ ಸಾಗರವನ್ನು ಎಲ್ಲರ ಉಪಯೋಗಕ್ಕೂ ದೊರೆಯುವಂತೆ ಮಾಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ, ಚೀನಾ ಈ ಬಾರಿ ಮಾನವ ಹಕ್ಕು ಆಯೋಗದ ಚುನಾವಣೆಯಲ್ಲಿ ತಾನು ಗೆದ್ದರೂ ಬೀಗದೇ ಸುಮ್ಮನೆ ಕುಳಿತಿದೆ.

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು