ಸಂಪೂರ್ಣ ಆಧಾರರಹಿತ; ಡೊನಾಲ್ಡ್ ಟ್ರಂಪ್ ಹತ್ಯೆಯ ಸಂಚಿನಲ್ಲಿ ತನ್ನ ಪಾತ್ರ ನಿರಾಕರಿಸಿದ ಇರಾನ್

ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಕ್ರಿಮಿನಲ್ ದೂರಿನ ಪ್ರಕಾರ ಇರಾನ್‌ನ ಅರೆಸೈನಿಕ ರೆವಲ್ಯೂಷನರಿ ಗಾರ್ಡ್‌ನ ಅಧಿಕಾರಿಯೊಬ್ಬರು ಕಳೆದ ಸೆಪ್ಟೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್‌ನ ಮೇಲೆ ಕಣ್ಣಿಡಲು ಮತ್ತು ಕೊಲ್ಲುವ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.

ಸಂಪೂರ್ಣ ಆಧಾರರಹಿತ; ಡೊನಾಲ್ಡ್ ಟ್ರಂಪ್ ಹತ್ಯೆಯ ಸಂಚಿನಲ್ಲಿ ತನ್ನ ಪಾತ್ರ ನಿರಾಕರಿಸಿದ ಇರಾನ್
ಇರಾನ್ ನಾಯಕ ಅಯಾತೊಲ್ಲ ಖಮೆನೇನಿ
Follow us
ಸುಷ್ಮಾ ಚಕ್ರೆ
|

Updated on: Nov 09, 2024 | 9:21 PM

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವ ಸಂಚಿನಲ್ಲಿ ಇರಾನ್ ವ್ಯಕ್ತಿಯೊಬ್ಬನ ಮೇಲೆ ಅಮೆರಿಕ ಆರೋಪ ಹೊರಿಸಿದ ಬೆನ್ನಲ್ಲೇ ಇರಾನ್ ಇಂದು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. ಇದು ಯುಎಸ್ ಮತ್ತು ಇರಾನ್ ನಡುವಿನ ಸಮಸ್ಯೆಗಳನ್ನು ಸಂಕೀರ್ಣಗೊಳಿಸುವ ಪಿತೂರಿ ಎಂದು ಹೇಳಿದೆ.

ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೈಲ್ ಬಘೈ ಆಪಾದಿತ ಕೊಲೆಯ ಸಂಚಿನಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ. ಯುಎಸ್ ನ್ಯಾಯಾಂಗ ಇಲಾಖೆಯ ವರದಿಯನ್ನು ಇರಾನ್ “ಸಂಪೂರ್ಣವಾಗಿ ಆಧಾರರಹಿತ” ಎಂದು ಹೇಳಿದೆ.

ಈ ರೀತಿಯ ಹಕ್ಕುಗಳನ್ನು ಪುನರಾವರ್ತಿಸುವುದು ಯುಎಸ್ ಮತ್ತು ಇರಾನ್ ನಡುವಿನ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಲು ಜಿಯೋನಿಸ್ಟ್ ಮತ್ತು ಇರಾನಿಯನ್ ವಿರೋಧಿ ವಲಯಗಳಿಂದ ಆಯೋಜಿಸಲಾದ ದುರುದ್ದೇಶಪೂರಿತ ಪಿತೂರಿಯಾಗಿದೆ ಎಂದು ಇರಾನ್ ಸರ್ಕಾರ ಹೇಳಿದೆ.

ಇದನ್ನೂ ಓದಿ: ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಡೊನಾಲ್ಡ್​ ಟ್ರಂಪ್​ಗೆ ಹಾಲಿನ ಅಭಿಷೇಕ!

ಟ್ರಂಪ್ ಹತ್ಯೆಯ ಸಂಚಿಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಇರಾನಿನ ವ್ಯಕ್ತಿಯೊಬ್ಬರ ಮೇಲೆ ಆರೋಪ ಹೊರಿಸಿತ್ತು. ಆರೋಪಿ ಫರ್ಹಾದ್ ಶಕೇರಿ ಈ ಬಗ್ಗೆ ಹೇಳಿಕೆ ನೀಡಿದ್ದು, “ಅಕ್ಟೋಬರ್ 7ರಂದು ಟ್ರಂಪ್​ರನ್ನು ಕೊಲ್ಲುವ ಕಂಟ್ರಾಕ್ಟ್​ ನೀಡಲಾಗಿತ್ತು” ಎಂದು ಕಾನೂನು ಜಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಈ ಶಕೇರಿ ಓರ್ವ ಕಂಟ್ರಾಕ್ಟ್​ ಕಿಲ್ಲರ್ ಆಗಿದ್ದು, ಇರಾನ್​ನಲ್ಲಿ ವಾಸವಾಗಿದ್ದಾರೆ. ಟ್ರಂಪ್ ಅವರ ಚಲನವಲನಗಳನ್ನು ಗಮನಿಸುತ್ತಿರಬೇಕು, ಅವಕಾಶ ಸಿಕ್ಕ ತಕ್ಷಣ ಅವರನ್ನು ಹತ್ಯೆ ಮಾಡಬೇಕೆಂದು ಅವರಿಗೆ ಸೂಚಿಸಲಾಗಿತ್ತು. ಈ ಹತ್ಯೆಗಾಗಿ ಅವರಿಗೆ 5 ಲಕ್ಷ ಡಾಲರ್ ನೀಡುವುದಾಗಿ ಒಪ್ಪಂದವಾಗಿತ್ತು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು.

ಇದನ್ನೂ ಓದಿ: ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್ ಹತ್ಯೆಗೆ ಇರಾನ್ ಏಜೆಂಟ್ ಸಂಚು!

51 ವರ್ಷದ ಶಕೇರಿ ಅವರನ್ನು ಟೆಹ್ರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಬಾಲ್ಯದಲ್ಲಿ ಅಮೆರಿಕಕ್ಕೆ ವಲಸೆ ಬಂದರು ಮತ್ತು ದರೋಡೆ ಅಪರಾಧದ ನಂತರ 2008ರಲ್ಲಿ ಅವರನ್ನು ಗಡೀಪಾರು ಮಾಡಲಾಯಿತು. ಶಕೇರಿ ತಲೆಮರೆಸಿಕೊಂಡಿದ್ದು, ಇರಾನ್‌ನಲ್ಲಿದ್ದಾನೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಈ ಸಂಚಿನಲ್ಲಿ ಇರಾನ್ ಮತ್ತು ಇಬ್ಬರು ಅಮೆರಿಕನ್ ಪ್ರಜೆಗಳು ಕೂಡ ಭಾಗಿಯಾಗಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ