ಕೊರೊನಾ ವೈರಸ್: 2800 ಬಲಿ, ಸೋಂಕು ತಗುಲಿರುವವರ ಸಂಖ್ಯೆ 6 ಲಕ್ಷ

ಕೊರೊನಾ ವೈರಸ್: 2800 ಬಲಿ, ಸೋಂಕು ತಗುಲಿರುವವರ ಸಂಖ್ಯೆ 6 ಲಕ್ಷ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಮತ್ತಷ್ಟು ಡೆಡ್ಲಿಯಾಗುತ್ತಿದೆ. ಚೀನಾವೊಂದರಲ್ಲೇ ಸುಮಾರು 2800 ಜರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವುದರ ಜತೆಗೆ, ಸೋಂಕು ತಗುಲಿರುವವರ ಸಂಖ್ಯೆಯೂ 6 ಲಕ್ಷ ದಾಟಿದೆ. ತಾಯ್ನಾಡಿಗೆ ಮರಳಿದ ಭಾರತೀಯರು: ಇನ್ನು ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದವರ ಪೈಕಿ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಹಡಗಿನಲ್ಲಿದ್ದ 119 ಭಾರತೀಯರು ಹಾಗೂ ಐವರು ವಿದೇಶಿಗರು ದೆಹಲಿಗೆ ವಾಪಸ್ ಆಗಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರನ್ನ ಮರಳಿ ತಾಯ್ನಾಡಿಗೆ ಕರೆತರಲಾಗಿದೆ. ನವಾಜ್ ಷರೀಫ್​ಗೆ ಮತ್ತೆ […]

sadhu srinath

|

Feb 27, 2020 | 10:36 AM

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಮತ್ತಷ್ಟು ಡೆಡ್ಲಿಯಾಗುತ್ತಿದೆ. ಚೀನಾವೊಂದರಲ್ಲೇ ಸುಮಾರು 2800 ಜರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವುದರ ಜತೆಗೆ, ಸೋಂಕು ತಗುಲಿರುವವರ ಸಂಖ್ಯೆಯೂ 6 ಲಕ್ಷ ದಾಟಿದೆ.

ತಾಯ್ನಾಡಿಗೆ ಮರಳಿದ ಭಾರತೀಯರು: ಇನ್ನು ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದವರ ಪೈಕಿ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಹಡಗಿನಲ್ಲಿದ್ದ 119 ಭಾರತೀಯರು ಹಾಗೂ ಐವರು ವಿದೇಶಿಗರು ದೆಹಲಿಗೆ ವಾಪಸ್ ಆಗಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರನ್ನ ಮರಳಿ ತಾಯ್ನಾಡಿಗೆ ಕರೆತರಲಾಗಿದೆ.

ನವಾಜ್ ಷರೀಫ್​ಗೆ ಮತ್ತೆ ಸಂಕಷ್ಟ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್​ಗೆ ಮತ್ತೊಂದು ಸಂಕಟ ಎದುರಾಗಿದೆ. ಜಾಮೀನಿನ ಮೇಲೆ ರಿಲೀಸ್ ಆಗಿ ಲಂಡನ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಜ್ ಷರೀಫ್, ಈ ಬಗ್ಗೆ ಸರಿಯಾದ ದಾಖಲೆ ಸಲ್ಲಿಸಲು ವಿಫಲರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಾಕ್ ಸರ್ಕಾರ ಷರೀಫ್ ತಲೆಮರೆಸಿಕೊಂಡಿದ್ದಾರೆ ಅಂತಾ ಹೇಳಿದೆ.

ದ್ವೀಪ ರಾಷ್ಟ್ರದಲ್ಲಿ ಮತ್ತೊಮ್ಮೆ ಪ್ರವಾಹ: ಇತ್ತೀಚೆಗಷ್ಟೇ ಭಾರಿ ಮಳೆಯಿಂದ ಪ್ರವಾಹಕ್ಕೆ ಸಿಲುಕಿದ್ದ ಇಂಡೋನೇಷಿಯಾದಲ್ಲಿ ಮತ್ತೆ, ನೆರೆ ಹಾವಳಿ ಶುರುವಾಗಿದೆ. ಪ್ರವಾಹದ ಪರಿಣಾಮ ಲಕ್ಷಾಂತರ ಮಂದಿ ಸೂರು ಕಳೆದುಕೊಂಡಿದ್ದು, ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ. ಇನ್ನೂ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada