Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyclone Biparjoy; 80,000 ಜನರನ್ನು ಸ್ಥಳಾಂತರಿಸಲು ಮುಂದಾದ ಪಾಕಿಸ್ತಾನ

ಪಾಕಿಸ್ತಾನಕ್ಕೂ ಬಿಪೋರ್​ಜಾಯ್ ಚಂಡಮಾರುತ ಅಪ್ಪಳಿಸಲಿದ್ದು, ಈಗಾಗಲೇ ಅಲ್ಲಿನ ಅಧಿಕಾರಿಗಳು 80,000 ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

Cyclone Biparjoy; 80,000 ಜನರನ್ನು ಸ್ಥಳಾಂತರಿಸಲು ಮುಂದಾದ ಪಾಕಿಸ್ತಾನ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 16, 2023 | 12:36 PM

ಪಾಕಿಸ್ತಾನ: ಬಿಪೋರ್​ಜಾಯ್ ಚಂಡಮಾರುತ (Cyclone Biparjoy) ಭಾರತ ಮಾತ್ರವಲ್ಲ ಪಕ್ಕದ ಪಾಕಿಸ್ತಾನಕ್ಕೂ ಇದರ ದೊಡ್ಡ ಪರಿಣಾಮ ಉಂಟಾಗಲಿದೆ, ನೆನ್ನೆ ಗುಜರಾತ್​​ನಲ್ಲಿ ನೆನ್ನೆ (ಜೂ.15) ಬಿಪೋರ್​ಜಾಯ್ ಚಂಡಮಾರುತ ಅಪ್ಪಳಿಸಿದ್ದು 2 ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅನೇಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡಿದೆ, ಇದೀಗ ಪಾಕಿಸ್ತಾನದ ಸರದಿ, ಪಾಕಿಸ್ತಾನಕ್ಕೂ ಬಿಪೋರ್​ಜಾಯ್ ಚಂಡಮಾರುತ ಅಪ್ಪಳಿಸಲಿದ್ದು, ಈಗಾಗಲೇ ಅಲ್ಲಿನ ಅಧಿಕಾರಿಗಳು 80,000 ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ, ಬಿಪೋರ್​ಜಾಯ್ ಚಂಡಮಾರುತ ಗಂಟೆಗೆ 120 ಕಿಲೋಮೀಟರ್ ವೇಗದ ಗಾಳಿ ತರುವ ನಿರೀಕ್ಷೆಯಿದೆ ಎಂದು ಹೇಳಿದೆ.

ದಕ್ಷಿಣ ಸಿಂಧ್ ಪ್ರಾಂತ್ಯದ ಕರಾವಳಿಯ 3.5 ಮೀಟರ್ (12 ಅಡಿ) ವರೆಗೆ ಚಂಡಮಾರುತದ ಉಲ್ಬಣ ಆಗುವ ಸಾಧ್ಯತೆ ಇದೆ. ಇದು ತಗ್ಗು ಪ್ರದೇಶಗಳನ್ನು ಮುಳುಗಿಸಬಹುದು, ಜೊತೆಗೆ 30 ಸೆಂಟಿಮೀಟರ್‌ಗಳಷ್ಟು ಮಳೆಯಾಗುತ್ತದೆ ಎಂದು ಹವಮಾನ ಇಲಾಖೆ ಹೇಳಿದೆ.

ಈಗಾಗಲೇ ಪಾಕಿಸ್ತಾನ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು ಮತ್ತು ಅಪಾಯದಲ್ಲಿರುವ 80,000 ಕ್ಕೂ ಹೆಚ್ಚು ಜನರನ್ನು” ಸ್ಥಳಾಂತರಿಸಲು ಸಹಾಯ ಮಾಡಲು ಸೈನ್ಯವನ್ನು ರಚಿಸಲಾಗಿದೆ ಎಂದು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಹೇಳಿದ್ದಾರೆ.

ಇದನ್ನೂ ಓದಿ: Cyclone Biparjoy; 4 ದಿನದ ಮಗುವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಮಹಿಳಾ ಪೊಲೀಸ್

ನಾವು ಜನರನ್ನು ವಿನಂತಿಸುವುದಿಲ್ಲ ಆದರೆ ಅವರನ್ನು ಸ್ಥಳಾಂತರಿಸಲು ಒತ್ತಾಯಿಸುತ್ತೇವೆ ಎಂದು ಶಾ ಸುದ್ದಿಗಾರರಿಗೆ ತಿಳಿಸಿದರು, ಸಾಮಾಜಿಕ ಮಾಧ್ಯಮಗಳು, ಮಸೀದಿಗಳು ಮತ್ತು ರೇಡಿಯೊ ಕೇಂದ್ರಗಳ ಮೂಲಕ ಆದೇಶವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತದ ಗುಜರಾತ್ ರಾಜ್ಯದ ಪಶ್ಚಿಮಕ್ಕೆ 45 ಕಿಲೋಮೀಟರ್ (28 ಮೈಲುಗಳು) ಮ್ಯಾಂಗ್ರೋವ್ ಡೆಲ್ಟಾಗಳ ನಡುವೆ ನೆಲೆಸಿರುವ ಮೀನುಗಾರಿಕಾ ಪಟ್ಟಣವಾದ ಶಾ ಬಂದರ್ ಪ್ರದೇಶದಿಂದ ಸುಮಾರು 2,000 ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುರಾದ್ ಅಲಿ ಶಾ ತಿಳಿಸಿದ್ದಾರೆ. ಸಮೀಪದ ಗುಲ್ ಮುಹಮ್ಮದ್ ಉಪ್ಲಾನೊ ಗ್ರಾಮವನ್ನು ಬಿಡಲು ಕುಟುಂಬಗಳನ್ನು ಮನವೊಲಿಸಲು ಅಧಿಕಾರಿಗಳು ಹೆಣಗಾಡಿದ್ದಾರೆ. ಇನ್ನೂ ಅನೇಕ ಕಡೆ ನಮ್ಮ ರಕ್ಷಣೆಗಾಗಿ ನಾವು ನಮ್ಮ ಊರುಗಳನ್ನು ಬೀಡಲು ಸಿದ್ಧ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ