ಮೊಸಳೆಯಿಂದ ಹಲ್ಲೆಗೊಳಗಾದ ಬಳಿಕ ಸುರುಳಿ ಸುತ್ತುಕೊಂಡಿದ್ದ ಸ್ನಾಯುಗಳನ್ನು ನೇರಗೊಳಿಸಲು ಈ ವ್ಯಕ್ತಿಯ ಕೈಯನ್ನು ವೈದ್ಯರು ಆರುಬಾರಿ ತಿರುವಿದರು!
ಗ್ರೆಜಿಯಾನಿ ಅವರನ್ನು ಸುಮಾರು ಒಂಬತ್ತು ಗಂಟೆಗಳ ಸರ್ಜರಿಗೆ ಒಳಪಡಿಸಿದ ನಂತರ ವೈದ್ಯರು ಅವರ ಮುಂಗೈಯನ್ನು ಕತ್ತರಿಸಿದರು. ಫ್ಲೋರಿಡಾ ಗೇಟರ್ ಗಾರ್ಡನ್ಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮೂಳೆಗಳನ್ನು ಹಿಡಿದಿಟ್ಟುಕೊಳ್ಳಲು ಪ್ಲೇಟ್‌ಗಳನ್ನು ಹಾಕುವ ಮೂಲಕ ಸರ್ಜನ್ಗಳು ಅವರ ತೋಳನ್ನು ಮರುಜೋಡಿಸಲು ಪ್ರಯತ್ನಿಸಿದರು.

ದಿವಂಗತ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶಿಸಿದ ‘ಮಾನಸ ಸರೋವರ’ ಚಿತ್ರದ ನೀನೇ ಸಾಕಿದ ಗಿಣಿ ನಿನ್ನಾ ಮುದ್ದಿನ ಗಿಣಿ ಹದ್ದಾಗಿ ಕುಕ್ಕಿತಲ್ಲೋ… ಹಾಡನ್ನು ನೀವು ಕೇಳಿರುತ್ತೀರಿ. ಆದರೆ ನಾವಿಲ್ಲಿ ಸಾಕಿದ ಗಿಣಿ ಅಲ್ಲ ಸಾಕಿದ ಅಲಿಗೇಟರ್ (alligator) (ಮೊಸಳೆಯ ಮತ್ತೊಂದು ಬಗೆ) ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇವೆ ಮಾರಾಯ್ರೇ. ಅಮೆರಿಕದ ವನ್ಯಜೀವಿ (wildlife) ತಜ್ಞರೊಬ್ಬರು ತಮ್ಮ ನಿಗ್ರಾಣಿಯಲ್ಲಿದ್ದ ಮೊಸಳೆಯಿಂದ ಕಚ್ಚಿಸಿಕೊಂಡು ತಮ್ಮ ಎಡ ಮುಂಗೈಯನ್ನೇ ಕಳೆದುಕೊಂಡ ದುರದೃಷ್ಟಕರ ಸಂಗತಿಯನ್ನು ನಾವಿಲ್ಲಿ ಚರ್ಚಿಸುತ್ತಿದ್ದೇವೆ.
ಫೇಸ್ ಬುಕ್ ಪೋಸ್ಟ್ ಒಂದರ ಪ್ರಕಾರ ಫ್ಲೋರಿಡಾ ಗೇಟರ್ ಗಾರ್ಡನ್ಸ್ ನಿರ್ದೇಶಕರಾಗಿರುವ ಗ್ರೆಗ್ ಗ್ರೆಜಿಯಾನಿ ಅವರು ಆಗಸ್ಟ್ 17 ರಂದು ಪಾರ್ಕ್ನಲ್ಲಿದ್ದ ಭಾರಿ ಗಾತ್ರದ ಮೊಸಳೆಗಳೊಂದಿಗೆ (ಅಲಿಗೇಟರ್) ಎಂದಿನಂತೆ ವ್ಯವಹರಿಸುತ್ತಿದ್ದಾಗ ಅವರ ಮೇಲೆ ಮೊಸಳೆಯೊಂದು ಹಲ್ಲೆ ನಡೆಸಿದೆ. ಹಲ್ಲೆಯ ನಂತರ ತೀವ್ರವಾಗಿ ಗಾಯಗೊಂಡು ವಿಹ್ವಲರಾಗಿದ್ದ ಅವರನ್ನು ಟಂಪಾ ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಕೇವಲ ಒಂದು ಸ್ನಾಯು ಮಾತ್ರ ಅವರ ಮುಂಗೈಯನ್ನು ಹಸ್ತದ ಉಳಿದ ಭಾಗದ ಜೊತೆ ಜೋಡಿಸಿತ್ತು ಮತ್ತು ಸುರಳಿ ಸುತ್ತಿಕೊಂಡಿದ್ದ ಇತರ ಸ್ನಾಯುಗಳನ್ನು ನೇರಗೊಳಿಸಲು ವೈದ್ಯರು ಅವುಗಳನ್ನು ಆರು ಬಾರಿ ತಿರುವಿದರಂತೆ!

ಗ್ರೆಜಿಯಾನಿಯನ್ನು ಆಸ್ಪತ್ರೆಗೆ ತಂದಾಗ ಅವರ ಕೈ ಎಕ್-ರೇ ಇಮೇಜು
ಶಸ್ತ್ರಚಿಕಿತ್ಸೆಯ ಆರಂಭದಲ್ಲಿ ಶಸ್ತ್ರಚಿಕಿತ್ಸಕರು ಗ್ರೆಜಿಯಾನಿ ಅವರ ಸ್ನಾಯುರಜ್ಜುಗಳನ್ನು ನೇರಗೊಳಿಸಲು ಆರು ಬಾರಿ ಅವುಗಳನ್ನು ತಿರುವಬೇಕಾಯಿತು. ಈ ಭೀಕರ ಹಲ್ಲೆ ನಡೆದ ಕ್ಷಣದಿಂದಲೇ ಅವರ ಅಂಗೈ ಭಾಗವನ್ನು ಕತ್ತರಿಸುವುದು ನಿಶ್ಚಿತ ಅನ್ನೋದನ್ನು ನಾವು ನಿರೀಕ್ಷಿಸಿದ್ದೆವು,’ ಎಂದು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಗ್ರೆಜಿಯಾನಿ ಅವರನ್ನು ಸುಮಾರು ಒಂಬತ್ತು ಗಂಟೆಗಳ ಸರ್ಜರಿಗೆ ಒಳಪಡಿಸಿದ ನಂತರ ವೈದ್ಯರು ಅವರ ಮುಂಗೈಯನ್ನು ಕತ್ತರಿಸಿದರು. ಫ್ಲೋರಿಡಾ ಗೇಟರ್ ಗಾರ್ಡನ್ಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮೂಳೆಗಳನ್ನು ಹಿಡಿದಿಟ್ಟುಕೊಳ್ಳಲು ಪ್ಲೇಟ್‌ಗಳನ್ನು ಹಾಕುವ ಮೂಲಕ ಸರ್ಜನ್ಗಳು ಅವರ ತೋಳನ್ನು ಮರುಜೋಡಿಸಲು ಪ್ರಯತ್ನಿಸಿದರು. ಆದರೆ ಕೆಲ ದಿನಗಳ ನಂತರ ಗ್ರೆಜಿಯಾನಿಯವರ ಕೈಯನ್ನು ಕತ್ತರಿಲೇ ಬೇಕಾದ ಅನಿವಾರ್ಯತೆ ಎದುರಾಯಿತು.
ಅದಾದ ಮೇಲೆ ವೈದ್ಯರು, ‘ಕತ್ತರಿಸಿದ ಅಂಗದಿಂದ ನರಗಳನ್ನು ಮರುಹೊಂದಿಸುವ ವಿಧಾನವನ್ನು ಪೂರೈಸಿದರು, ಅದು ಫ್ಯಾಂಟಮ್ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ವೈದ್ಯಲೋಕ ತಾಂತ್ರಿಕವಾಗಿಯೂ ಭಾರೀ ಮುಂದುವರಿದಿರುವ ಇಂದಿನ ದಿನಗಳಲ್ಲಿ ಅವರಿಗೆ ಪ್ರೊಸ್ಥೆಟಿಕ್ ಪ್ರಕ್ರಿಯೆ ನಡೆಸುವ ಅವಕಾಶ ಒದಗಸುತ್ತದೆ,’ ಎಂದು ಪಾರ್ಕ್ ಅಧಿಕಾರಿಗಳು ಹೇಳಿದ್ದಾರೆ.
ಗ್ರೆಜಿಯಾನಿ ಅವರು ಮೊಸಳೆಯೊಂದರಿಂದ ಕಚ್ಚಿಸಿಕೊಂಡಿದ್ದು ಇದೇ ಮೊದಲ ಬಾರಿಯೇನಲ್ಲ. 2013 ರಲ್ಲಿ ಬೇರೆಯವರಿಗೆ ಸೇರಿದ ಸ್ಥಳವೊಂದರಲ್ಲಿ ಮೊಸಳೆಯೊಂದನ್ನು ಹಿಡಿಯುವ ಪ್ರಯತ್ನದಲ್ಲಿ ಅವರು ಹೆಚ್ಚು ಕಡಿಮೆ ತಮ್ಮ ಬಲಗೈಯನ್ನು ಕಳೆದುಕೊಂಡಿದ್ದರು.
ಭಾರೀ ಗಾತ್ರದ ಸರೀಸೃಪಗಳಿಂದ ಹಲವಾರು ಬಾರಿ ಹಲ್ಲೆಗೊಳಗಾಗಿದ್ದರೂ ಗ್ರೆಜಿಯಾನಿ ಅವರು ಅವುಗಳನ್ನು ಸಂರಕ್ಷಿಸುವ ಮತ್ತು ಈ ಜೀವಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮೊದಲಿನ ಬದ್ಧತೆಯೊಂದಿಗೆ ಮುಂದುವರಿದಿದ್ದಾರೆ. ಭಯಂಕರ ನೋವಿನಿಂದ ಬಳಲುತ್ತಾ ಅಪಾರ ಪ್ರಮಾಣದ ಔಷಧಿ ಸೇವಿಸುತ್ತಿದ್ದರೂ ಗ್ರೆಜಿಯಾನಿ ವೈದ್ಯರಿಗೆ, ನರ್ಸ್ಗಳಿಗೆ ಮತ್ತು ಪಾರ್ಕ್ ಗೆ ಭೇಟಿ ನೀಡುವ ಜನರಿಗೆ ಮೊಸಳೆಗಳ ಬಗ್ಗೆ ಶಿಕ್ಷಣ ನೀಡುತ್ತಲೇ ಇರುತ್ತಾರೆ,’ ಎಂದು ಪಾರ್ಕ್ ಅಧಿಕಾರಿಗಳು ಹೇಳುತ್ತಾರೆ.
ಗ್ರೆಜಿಯಾನಿ ಅವರ ಮೇಲೆ ಆಕ್ರಮಣ ನಡೆಸಿದ ಅಲಿಗೇಟರ್ ಗೆ ಯಾವುದೇ ಗಾಯವಾಗಿಲ್ಲ ಮತ್ತು ಅದು ಮೃಗಾಲಯದ ಗೌರವಾನ್ವಿತ ಸದಸ್ಯನಾಗಿ ಮುಂದುವರಿಯುತ್ತದೆ, ಎಂದು ಪಾರ್ಕ್ ಅಧಿಕಾರಿಗಳು ಹೇಳಿದ್ದಾರೆ.




