AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲು..

ಚೀನಾ ಕಿರಿಕ್ ಆಯ್ತು.. ಪಾಕಿಸ್ತಾನದ ಪಾಪ ಕೃತ್ಯಗಳು ಆಯ್ತು.. ಇದೀಗ ಕೊರೊನಾ ಕಾಟದ ನಡುವೆ ಭಾರತಕ್ಕೆ ಮತ್ತೊಂದು ಕಂಟಕ ಎದುರಾಗಿದೆ.. ಗಡಿ ವಿಚಾರಕ್ಕೆ ಚೀನಾ, ಪಾಕಿಸ್ತಾನ ಕ್ಯಾತೆ ತೆಗೀತಿರೋವಾಗ್ಲೇ ನೇಪಾಳ ಉದ್ಧಟತನದ ಹೆಜ್ಜೆ ಇಟ್ಟಿದೆ.. ಭಾರತ ಹಾಗೂ ನೇಪಾಳ ನಡುವೆ ಗಡಿಗಾಗಿ ಸಂಘರ್ಷ ತಾರಕಕ್ಕೇರಿದ್ದು ನೇಪಾಳ ಒಂದು ಹೆಜ್ಜೆ ಮುಂದೆ ಹೋಗಿದೆ.. ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲಾಗಿದೆ. ಭಾರತದ ಕಲಾಪನಿ, ಲಿಪುಲೇಖ ನೇಪಾಳಕ್ಕೆ ಸೇರ್ಪಡೆ..! ಯೆಸ್​.. ಗಡಿಯಲ್ಲಿ ಚೀನಾ ಕಿರಿಕ್ ಬೂದಿ ಮುಚ್ಚಿದ ಕೆಂಡದಂತಿದ್ರೆ, […]

ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲು..
ಸಾಧು ಶ್ರೀನಾಥ್​
| Edited By: |

Updated on:Jun 15, 2020 | 10:46 AM

Share

ಚೀನಾ ಕಿರಿಕ್ ಆಯ್ತು.. ಪಾಕಿಸ್ತಾನದ ಪಾಪ ಕೃತ್ಯಗಳು ಆಯ್ತು.. ಇದೀಗ ಕೊರೊನಾ ಕಾಟದ ನಡುವೆ ಭಾರತಕ್ಕೆ ಮತ್ತೊಂದು ಕಂಟಕ ಎದುರಾಗಿದೆ.. ಗಡಿ ವಿಚಾರಕ್ಕೆ ಚೀನಾ, ಪಾಕಿಸ್ತಾನ ಕ್ಯಾತೆ ತೆಗೀತಿರೋವಾಗ್ಲೇ ನೇಪಾಳ ಉದ್ಧಟತನದ ಹೆಜ್ಜೆ ಇಟ್ಟಿದೆ.. ಭಾರತ ಹಾಗೂ ನೇಪಾಳ ನಡುವೆ ಗಡಿಗಾಗಿ ಸಂಘರ್ಷ ತಾರಕಕ್ಕೇರಿದ್ದು ನೇಪಾಳ ಒಂದು ಹೆಜ್ಜೆ ಮುಂದೆ ಹೋಗಿದೆ.. ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲಾಗಿದೆ.

ಭಾರತದ ಕಲಾಪನಿ, ಲಿಪುಲೇಖ ನೇಪಾಳಕ್ಕೆ ಸೇರ್ಪಡೆ..! ಯೆಸ್​.. ಗಡಿಯಲ್ಲಿ ಚೀನಾ ಕಿರಿಕ್ ಬೂದಿ ಮುಚ್ಚಿದ ಕೆಂಡದಂತಿದ್ರೆ, ಭಾರತದ ಪಕ್ಕದಲ್ಲೇ ಇರೋ ನೇಪಾಳ ಗಡಿ ವಿವಾದದ ಕ್ಯಾತೆ ತೆಗೆದು ಕಾಲ್ಕೆರೆದು ಜಗಳಕ್ಕೆ ನಿಂತಿದೆ. ಭಾರತದ ಭೂಭಾಗಗಳನ್ನ ತನ್ನ ನಕ್ಷೆಗೆ ಸೇರಿಸಿಕೊಳ್ಳೋಕೆ ಮೊಂಡಾಟ ಮುಂದುವರಿಸಿದೆ. ಭಾರತದ ಪ್ರದೇಶಗಳಾದ ಕಾಲಾಪಾನಿ ಹಾಗೂ ಲಿಪುಲೇಖ ಪ್ರದೇಶ ನೇಪಾಳಕ್ಕೆ ಸೇರಿಸ್ಕೊಂಡು ನಕಾಶೆ ಬದಲಾವಣೆಗೆ ಹೆಜ್ಜೆಯೂರಿದೆ.

ನೇಪಾಳ ಸಂಸತ್‌ನ ಕೆಳಮನೆಯಲ್ಲಿ ನಕಾಶೆ ಬದಲಾವಣೆಗೆ ಒಪ್ಪಿಗೆ..! ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ ಭಾರತದ ಭೂಭಾಗ ನೇಪಾಳ ಭೂಪ್ರದೇಶವೆಂದು ನಕಾಶೆ ಬದಲಾವಣೆಗೆ ನೇಪಾಳ ಸಂಸತ್‌ನ ಕೆಳಮನೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಭಾರತದ ಕಲಾಪನಿ, ಲಿಪುಲೇಖ ಪ್ರದೇಶಗಳನ್ನು ನೇಪಾಳಕ್ಕೆ ಸೇರ್ಪಡೆಗೆ ಗ್ರೀನ್​ ಸಿಗ್ನಲ್ ಸಿಕ್ಕಿರೋದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ನೇಪಾಳ ಸಂಸತ್​ನ ಲೋವರ್ ಹೌಸ್​ನಲ್ಲಿ ಸಮ್ಮತಿ ಸಿಕ್ಕಿರೋದ್ರಿಂದ ಸಂಸತ್‌ನ ಮೇಲ್ಮನೆಗೆ ರವಾನಿಸಲಾಗುತ್ತೆ. ಸಂಸತ್​​ನ ಎರಡೂ ಹೌಸ್​ನಲ್ಲಿ ರಾಷ್ಟ್ರಪತಿ ಅಂಕಿತಕ್ಕೆ ಕಳಿಸಲಾಗುತ್ತೆ.

ಇನ್ನು, ಟಿಬೆಟ್‌ನ ಕೈಲಾಸ ಮಾನಸ ಸರೋವರಕ್ಕೆ ಹೋಗಲು ಸಂಪರ್ಕ ರಸ್ತೆ ಕಲ್ಪಿಸುವ ಲಿಪುಲೇಖ ಪಾಸ್‌ ಕಾಲಾಪಾನಿ ಸಮೀಪವಿದೆ. ಇದು ಭಾರತ ಹಾಗೂ ನೇಪಾಳ ನಡುವಿನ ವಿವಾದಿತ ಪ್ರದೇಶ. ಉತ್ತರಾಖಂಡದ ಪಿತೋರಗಢ ಜಿಲ್ಲೆ ಭಾಗ ಎಂದು ಭಾರತ ಹೇಳಿಕೊಳ್ಳುತ್ತದೆ. ಇತ್ತ ನೇಪಾಳ ಕೂಡ ಕಾಲಾಪಾನಿ ಪ್ರದೇಶ ಧರ್ಚುಲಾ ಜಿಲ್ಲೆಯಲ್ಲಿದೆ ಎಂದು ಮೊಂಡು ವಾದ ಮಾಡ್ತಿದೆ. ಕೊರೊನಾ ಸಂಕಷ್ಟದ ನಡುವೆ ನೇಪಾಳ ಗಡಿ ಕ್ಯಾತೆ ತೆಗೆದಿರೋದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ನೇಪಾಳದ ನಕಾಶೆ ಬದಲಾವಣೆ ನಿರ್ಧಾರಕ್ಕೆ ಭಾರತ ತಿರುಗೇಟು..! ಭೂಪಟ ಪರಿಷ್ಕರಣೆಗೆ ಹೆಜ್ಜೆ ಇಟ್ಟಿರೋ ನೇಪಾಳದ ನಿರ್ಧಾರಕ್ಕೆ ಭಾರತ ಖಡಕ್ ಉತ್ತರ ರವಾನಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ ಶ್ರೀವಾಸ್ತವ್ ತಿರುಗೇಟು ನೀಡಿದ್ದು ಭಾರತೀಯ ಭೂಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳ ಭೂಪಟ ಪರಿಷ್ಕರಿಸೋ ನಿರ್ಧಾರ ಸಮಂಜಸವಲ್ಲ. ಐತಿಹಾಸಿಕ ಅಂಶಗಳು, ಸಾಕ್ಷ್ಯಗಳನ್ನು ಆಧರಿಸಿಲ್ಲ. ಗಡಿ ವಿಚಾರವಾಗಿ ಮಾತುಕತೆ ನಡೆಸುವ ಎಲ್ಲಾ ನಿರ್ಧಾರಗಳನ್ನು ನೇಪಾಳ ಉಲ್ಲಂಘಿಸಿದೆ ಅಂತ ಖಡಕ್ ಸಂದೇಶ ರವಾನಿಸಿದ್ದಾರೆ.

ಒಟ್ನಲ್ಲಿ, ಗಡಿಯಲ್ಲಿ ಚೀನಾ, ಪಾಕಿಸ್ತಾನದ ಕ್ಯಾತೆ ನಡುವೆ ನೇಪಾಳ ತನ್ನ ಹಳೇ ಚಾಳಿ ಮುಂದುವರಿಸಿದೆ. ಇಡೀ ಜಗತ್ತೇ ಕೊರೊನಾ ಕ್ರೌರ್ಯದಲ್ಲಿ ಬೆಂದು ಹೋಗ್ತಿರೋವಾಗ್ಲೇ ಇಂಥಾ ನಾಚಿಕೆಗೇಡಿನ ನಿರ್ಧಾರ ಬೇಕಿತ್ತಾ ಅನ್ನೋದು ಭಾರತೀಯರ ಪ್ರಶ್ನೆ.. ಭಾರತದ ಭೂ ಪ್ರದೇಶವನ್ನು ತನ್ನ ತೆಕ್ಕೆಗೆ ಬಾಚಿಕೊಳ್ಳೋಕೆ ಹೊರಟಿರೋ ನೇಪಾಳದ ನಿರ್ಧಾರ ನಿಜಕ್ಕೂ ನಾಚಿಕೆಗೇಡಿನ ನಿರ್ಧಾರ ಅನ್ನೋದ್ರಲ್ಲಿ ನೋ ಡೌಟ್..

Published On - 9:28 am, Sun, 14 June 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್