ತುಕ್ಕು ಚಮಚದಲ್ಲೇ ಸುರಂಗ ಕೊರೆದು ಸಿನಿಮೀಯ ರೀತಿಯಲ್ಲಿ ಪಲಾಯನ ಮಾಡಿದ ಖೈದಿಗಳು; ಇಸ್ರೇಲಿನ ಭದ್ರತಾ ಪಡೆಗೆ ಆಘಾತ

ಈ 6 ಜನರೂ ಗಿಲ್ಬೋವಾ ಜೈಲಿನ ಕೊಠಡಿಯಲ್ಲಿ ಬಂಧಿತರಾಗಿ ಒಟ್ಟಿಗೆ ಇದ್ದರು. ಯಾರಿಗೂ ತಿಳಿಯದಂತೆ ಪಲಾಯನದ ಸಂಚು ರೂಪಿಸಿದ ಅವರು ಜೈಲು ಕೊಠಡಿಯ ಸಿಂಕ್​ ಹಿಂಭಾಗದಿಂದಲೇ ಸುರಂಗ ಮಾರ್ಗ ಕೊರೆದು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ತುಕ್ಕು ಚಮಚದಲ್ಲೇ ಸುರಂಗ ಕೊರೆದು ಸಿನಿಮೀಯ ರೀತಿಯಲ್ಲಿ ಪಲಾಯನ ಮಾಡಿದ ಖೈದಿಗಳು; ಇಸ್ರೇಲಿನ ಭದ್ರತಾ ಪಡೆಗೆ ಆಘಾತ
ಪರಾರಿಯಾಗಲು ಜೈಲಿನೊಳಗೆ ತೋಡಿದ ಗುಂಡಿ (ಇಸ್ರೇಲ್ ಬಿಡುಗಡೆ ಮಾಡಿದ ಚಿತ್ರ)
Follow us
| Edited By: Skanda

Updated on:Sep 07, 2021 | 10:00 AM

ಇಸ್ರೇಲ್ ದೇಶದ ಜೈಲಿನಲ್ಲಿ ಬಂಧಿತರಾಗಿದ್ದ ಆರು ಜನ ಪ್ಯಾಲೇಸ್ಟೇನಿ ಖೈದಿಗಳು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದು, ಅವರ ಹುಡುಕಾಟಕ್ಕಾಗಿ ಇಸ್ರೇಲಿನ​ ಭದ್ರತಾ ಪಡೆ ಅತಿ ದೊಡ್ಡ ಹುಡುಕಾಟ ಕಾರ್ಯಾಚರಣೆಯೊಂದನ್ನು ಆರಂಭಿಸಿದೆ. ದೇಶದ ಕೆಲ ಭಾಗಗಳನ್ನು ವಶಕ್ಕೆ ಪಡೆದಿರುವ ಭದ್ರತಾ ಪಡೆ ಸಿಬ್ಬಂದಿ ತಮ್ಮ ಕಣ್ಣಿಗೆ ಮಣ್ಣೆರೆಚಿ ಜೈಲಿನಿಂದ ಪರಾರಿಯಾದವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ವಿಪರ್ಯಾಸವೆಂದರೆ ತುಕ್ಕು ಹಿಡಿದ ಚಮಚ ಬಳಸಿಕೊಂಡು ಆ 6 ಜನ ಖೈದಿಗಳು ಜೈಲಿನ ಕೊಠಡಿಯಿಂದ ಸುರಂಗ ಮಾರ್ಗ ಕೊರೆದು ಪಲಾಯನ ಮಾಡಿದ್ದಾರೆ.

ದೇಶದ ಅತ್ಯಂತ ಬಿಗಿಭದ್ರತೆಯುಳ್ಳ ಬಂದೀಖಾನೆಯಲ್ಲೇ ಇಂತಹ ಕೃತ್ಯ ಜರುಗಿರುವುದು ಇಸ್ರೇಲಿ ಭದ್ರತಾ ಪಡೆಗೆ ಮಹದಾಶ್ಚರ್ಯ ಉಂಟುಮಾಡಿದ್ದು, ಈ ಘಟನೆಯನ್ನು ಉಲ್ಲೇಖಿಸಿದ ಇಸ್ರೇಲ್​ ಪ್ರಧಾನಿ ನಫ್ತಾಲಿ ಬೆನೆಟ್​ ಇದೊಂದು ಆತಂಕಕಾರಿ ಹಾಗೂ ಗಂಭೀರ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆರು ಜನ ಖೈದಿಗಳ ಪೈಕಿ ಐವರು ಇಸ್ಲಾಮಿಕ್​ ಜಿಹಾದ್​ ಸದಸ್ಯರಾಗಿದ್ದಾರೆ. ಇನ್ನೋರ್ವ ಖೈದಿ ಜೆನಿನ್​ ರೆಫ್ಯೂಜಿ ಕ್ಯಾಂಪ್​ನ ಅಲ್​-ಅಕ್ಸಾ ಮಾರ್ಟೈರ್ಸ್ ಬ್ರಿಗೇಡ್​ ನಾಯಕನಾಗಿದ್ದಾನೆ.

ಈ 6 ಜನರೂ ಗಿಲ್ಬೋವಾ ಜೈಲಿನ ಕೊಠಡಿಯಲ್ಲಿ ಬಂಧಿತರಾಗಿ ಒಟ್ಟಿಗೆ ಇದ್ದರು. ಯಾರಿಗೂ ತಿಳಿಯದಂತೆ ಪಲಾಯನದ ಸಂಚು ರೂಪಿಸಿದ ಅವರು ಜೈಲು ಕೊಠಡಿಯ ಸಿಂಕ್​ ಹಿಂಭಾಗದಿಂದಲೇ ಸುರಂಗ ಮಾರ್ಗ ಕೊರೆದು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಸ್ರೇಲ್ ಜೈಲಿನಲ್ಲಿ ಇಂತಹ ಘಟನೆ ನಡೆಯುವುದು ತೀರಾ ವಿರಳವಾಗಿದ್ದು, ಎಲ್ಲರನ್ನೂ ಅಚ್ಚರಿಗೆ ನೂಕಿದೆ. ಇಸ್ರೇಲ್​ ಸೇನೆ ವಿಶ್ವದಲ್ಲಿ ಅತ್ಯಂತ ಬಲಿಷ್ಠವಾಗಿದ್ದು, ಸ್ವತಂತ್ರವಾಗಿರುವ ಅವರು ಸೇನೆಯನ್ನು ಬಲಿಷ್ಟವಾಗಿಟ್ಟುಕೊಂಡಿದ್ದಾರೆ.ಅದರಲ್ಲೂ ಭಯೋತ್ಪಾದನೆ ವಿರುದ್ಧ ಇಸ್ರೇಲ್​ ಸೇನೆ ಅತ್ಯಂತ ಖಡಕ್​ ಆಗಿರುವಾಗ ಅಂತಹುದರಲ್ಲಿ ಈ ಪ್ರಸಂಗ ನಡೆದಿರುವುದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಮಾತನಾಡಿರುವ ಇಸ್ರೇಲ್​ ಜೈಲು ವ್ಯವಸ್ಥೆಯ ಕಮಿಶನರ್​ ಕ್ಯಾಟಿ ಪೆರಿ, ಆ 6 ಜನ ಖೈದಿಗಳು ಜೈಲಿನ ಕಟ್ಟಡದ ರಚನೆಯಲ್ಲಿರುವ ಲೋಪದೋಷಗಳನ್ನು ತಿಳಿದುಕೊಂಡು ಕೃತ್ಯವೆಸಗಿದ್ದಾರೆ. ಇದೊಂದು ವಿರಳಾತಿವಿರಳ ಘಟನೆಯಾಗಿದ್ದು, ನಮ್ಮ ಪ್ರಾಥಮಿಕ ತನಿಖೆಯಲ್ಲಿ ಚಮಚದಿಂದ ಸುರಂಗ ತೋಡಿರುವುದು ಕಂಡುಬಂದಿಲ್ಲ. ಬದಲಾಗಿ ಅಲ್ಲಿದ್ದ ಮುಚ್ಚಳವೊಂದನ್ನು ಎತ್ತಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇಸ್ರೇಲ್​ನ ಸಾರ್ವಜನಿಕ ಭದ್ರತಾ ಅಧಿಕಾರಿ ಒಮೆರ್​ ಬರ್ಲೇವ್​ ಈ ಘಟನೆಯ ಬಗ್ಗೆ ಮಾತನಾಡಿ, ಖೈದಿಗಳು ಪರಾರಿಯಾಗಿರುವ ವಿಷಯ ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ಈಗಾಗಲೇ ಅವರು ಪಶ್ಚಿಮ ಭಾಗದತ್ತ ಓಡಿಹೋಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಇದೊಂದು ಪಕ್ಕಾ ಯೋಜಿತ ಕೃತ್ಯವಾಗಿದ್ದು, ಸಾಕಷ್ಟು ಆಯಾಮದಲ್ಲಿ ತನಿಖೆ ಸಾಗುತ್ತಿದೆ. ಅದೇನೇ ಇದ್ದರೂ ಖೈದಿಗಳನ್ನು ಪತ್ತೆ ಹಚ್ಚುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ISRAEL PRISON

ಜೈಲಿನ ಹೊರಗೆ ಸಂಪರ್ಕ ಕಲ್ಪಿಸಿದ ಸುರಂಗ ಮಾರ್ಗ

ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆಯೇ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು ಜೈಲಿನಲ್ಲಿರುವ 400 ಅಪರಾಧಿಗಳನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ. ಯಹೂದಿಗಳ ಹೊಸ ವರ್ಷ ಆಚರಣೆಯ ಕೆಲವೇ ಅವಧಿಯ ಮುನ್ನ ಇಂತಹ ಘಟನೆಯಾಗಿರುವ ಬಗ್ಗೆ ಒಂದಷ್ಟು ಆತಂಕವೂ ವ್ಯಕ್ತವಾಗಿದ್ದು, ಭದ್ರತಾ ಪಡೆಗಳು ಜನರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿವೆ.

ಅಲ್ಲಿನ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇದೊಂದು ಪೂರ್ವ ಯೋಜಿತ ಕೃತ್ಯವಾಗಿದ್ದು, ಪರಾರಿಯಾದ ಖೈದಿಗಳು ಸುಮಾರು ಸಮಯದಿಂದ ಚಮಚವನ್ನು ಉಪಯೋಗಿಸಿ ಸುರಂಗ ಮಾರ್ಗ ತೋಡಲಾರಂಭಿಸಿದ್ದರು. ಅದು ಜೈಲಿನ ಸಿಬ್ಬಂದಿ ಗಮನಕ್ಕೆ ಬಾರದಂತೆ ಗೋಡೆಯ ಬಳಿ ಚಮಚ ಅಡಗಿಸಿಡುತ್ತಿದ್ದರು. ಕೊನರಗೂ ತಮ್ಮ ಯೋಜನೆಯಲ್ಲಿ ಸಫಲರಾದ ಅವರು ತುಕ್ಕು ಚಮಚದಿಂದಲೇ ಸುರಂಗ ಕೊರೆದು ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

GILBOA PRISON

ಗಿಲ್ಬೋವಾ ಜೈಲಿನ ಕಟ್ಟಡ

ಇತ್ತ ಈ ಘಟನೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಇಸ್ಲಾಮಿಕ್​ ಜಿಹಾದಿಯ ವಕ್ತಾರ ದಾವೂದ್ ಶೇಹಬ್​ ಇದೊಂದು ದಿಟ್ಟ ನಡೆ. ಇದು ಇಸ್ರೇಲಿ ಭದ್ರತಾ ಪಡೆಗೆ ಖಂಡಿತವಾಗಿಯೂ ಆಘಾತ ನೀಡಿದೆ. ನಾವು ಇಂತಹ ಇನ್ನಷ್ಟು ಆಘಾತ ನೀಡಲು ಬಯಸುತ್ತೇವೆ. ಇಸ್ರೇಲ್​ ವ್ಯವಸ್ಥೆ ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧವಾಗಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಈ ಹಿಂದೆ 2014ರಲ್ಲಿ ಗಿಲ್ಬೋವಾ ಜೈಲಿನ ಬಚ್ಚಲು ಮನೆಯಿಂದ ಸುರಂಗ ಕೊರೆದು ಪರಾರಿಯಾಗಲು ಖೈದಿಯೊಬ್ಬ ಯತ್ನಿಸಿದ್ದನಾದರೂ ಅದು ವಿಫಲವಾಗಿತ್ತು. ಈಗ ಅದೇ ಮಾದರಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಜೈಲಿನ ಕಟ್ಟಡದ ರಚನೆಯನ್ನೇ ಈ ಚಾಣಾಕ್ಷ ಅಪರಾಧಿಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಇಸ್ರೇಲ್​​ನಲ್ಲಿ ಮೊದಲ ಬಾರಿಗೆ ಸಯಾಮಿ ಅವಳಿ ಬಾಲಕಿಯರು, ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಮುಖಾಮುಖಿಯಾದರು! 

ಕದನ ವಿರಾಮ ಒಪ್ಪಂದದ ಬಳಿಕ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್​

Published On - 9:58 am, Tue, 7 September 21

ತಾಜಾ ಸುದ್ದಿ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ