ಐದು ವರ್ಷದೊಳಗೆ ದಾಳಿ ಸಾಮರ್ಥ್ಯ: ಚೀನಾಕ್ಕೆ ಆತಂಕ ಮೂಡಿಸಿದ ಜಪಾನ್ ಪ್ರತಿಜ್ಞೆ

2ನೇ ಮಹಾಯುದ್ಧದಲ್ಲಿ ಸೋತ ನಂತರ ಹತ್ತಾರು ನಿಬಂಧನೆಗಳ ಬಂಧನದಿಂದ ತನ್ನನ್ನು ತಾನು ಕಟ್ಟಿಹಾಕಿಸಿಕೊಂಡಿರುವ ಜಪಾನ್, ಇದೀಗ ಅದರಿಂದ ಬಿಡಿಸಿಕೊಳ್ಳುವ ಮಾತುಗಳನ್ನು ಆಡುತ್ತಿದೆ

ಐದು ವರ್ಷದೊಳಗೆ ದಾಳಿ ಸಾಮರ್ಥ್ಯ: ಚೀನಾಕ್ಕೆ ಆತಂಕ ಮೂಡಿಸಿದ ಜಪಾನ್ ಪ್ರತಿಜ್ಞೆ
ಜಪಾನ್ ನೌಕಾದಳ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 13, 2022 | 12:33 PM

ಟೊಕಿಯೊ: ತೈವಾನ್ ದ್ವೀಪವನ್ನು (Taiwan) ಬಲಪ್ರಯೋಗದಿಂದ ತನ್ನೊಳಗೆ ವಿಲೀನ ಮಾಡಿಕೊಳ್ಳುವ ಚೀನಾದ ಪ್ರಯತ್ನಗಳನ್ನು ವಿರೋಧಿಸುತ್ತಿರುವ ಅಮೆರಿಕ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ಮತ್ತು ಚೀನಾ ಆಡುತ್ತಿರುವ ರೋಷಾವೇಷದ ಮಾತುಗಳು ವಿಶ್ವದ ಗಮನ ಸೆಳೆಯುತ್ತಿವೆ. ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದ (Russia Attacks Ukraine) ಮಾದರಿಯಲ್ಲಿಯೇ, ಚೀನಾ (China) ಸಹ ತೈವಾನ್ ದ್ವೀಪದ ಮೇಲೆ ಎರಗಬಹುದು ಎಂಬ ಲೆಕ್ಕಾಚಾರಗಳು ಚಾಲ್ತಿಯಲ್ಲಿವೆ. ಈ ನಡುವೆ ಜಪಾನ್​ನ ರಕ್ಷಣಾ ಸಚಿವರು ನೀಡಿರುವ ಹೇಳಿಕೆಯೊಂದು ಚೀನಾ ಸರ್ಕಾರವನ್ನು ಬೆಚ್ಚಿ ಬೀಳುವಂತೆ ಮಾಡಿದೆ. 2ನೇ ಮಹಾಯುದ್ಧದಲ್ಲಿ ಸೋತ ನಂತರ ಹತ್ತಾರು ನಿಬಂಧನೆಗಳ ಬಂಧನದಿಂದ ತನ್ನನ್ನು ತಾನು ಕಟ್ಟಿಹಾಕಿಸಿಕೊಂಡಿರುವ ಜಪಾನ್, ಇದೀಗ ಅದರಿಂದ ಬಿಡಿಸಿಕೊಳ್ಳುವ ಮಾತುಗಳನ್ನು ಆಡುತ್ತಿದೆ. 2ನೇ ಮಹಾಯುದ್ಧದಲ್ಲಿ ಜಪಾನ್​ ಎದುರು ಸೋತಿದ್ದ ಚೀನಾ ಇಂದಿಗೂ ಅಂದಿನ ಕಹಿ ನೆನಪುಗಳನ್ನು ಮರೆತಿಲ್ಲ. ಇದೀಗ ಜಪಾನ್ ‘ಇನ್ನು ಐದು ವರ್ಷಗಳಲ್ಲಿ ನಮ್ಮ ಸೇನೆ ಸಶಕ್ತವಾಗುತ್ತದೆ. ರಕ್ಷಣೆ ಮಾತ್ರವಲ್ಲ, ಪ್ರತಿದಾಳಿಯ ಸಾಮರ್ಥ್ಯವನ್ನೂ ಪಡೆದುಕೊಳ್ಳುತ್ತದೆ’ ಎಂದು ಘೋಷಿಸಿರುವುದು ಚೀನಾಕ್ಕೆ ಆತಂಕ ತಂದೊಡ್ಡಿದೆ.

ಪ್ರತಿದಾಳಿಯ ಸಾಮರ್ಥ್ಯ ಎಂದು ಹೇಳುವಾಗ ಜಪಾನ್​ನ ಪ್ರಧಾನಿ ಫುಮಿಯೊ ಕಿಸಿದಾ ಮತ್ತು ರಕ್ಷಣಾ ಸಚಿವ ನೊಬುವೊ ಕಿಶಿ ನಿರ್ದಿಷ್ಟವಾಗಿ ‘ಕೌಂಟರ್​ಸ್ಟ್ರೈಕ್’ (Counterstrike) ಎನ್ನುವ ಪದ ಬಳಸಿದ್ದಾರೆ. ಅಣ್ವಸ್ತ್ರ ದಾಳಿ-ಪ್ರತಿದಾಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಬಳಕೆಯಾಗಿವ ಈ ಪದವನ್ನು ಅವರು ಒತ್ತಿ ಹೇಳಿರುವುದು ಚೀನಾದ ಲೆಕ್ಕಾಚಾರಗಳು ಏರುಪೇರಾಗುವಂತೆ ಮಾಡಿವೆ. ಚೀನಾ ಸಹ ಅಣ್ವಸ್ತ್ರ ಸಜ್ಜಿತ ದೇಶವಾಗುವ ಪ್ರಯತ್ನ ಮಾಡುತ್ತಿರಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

ಕ್ವಾಡ್ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ, ಅಂದರೆ ಮೇ 24ರಂದು ಜಪಾನ್​ ಸಾಗರ ತೀರದ ಸಮೀಪ, ಪೂರ್ವ ಚೀನಾ ಸಮುದ್ರದಲ್ಲಿ ಚೀನಾ ಮತ್ತು ರಷ್ಯಾದ ಯುದ್ಧವಿಮಾನಗಳು ಹಾರಾಡಿದ್ದವು. ಇದನ್ನು ಸಮರಾಭ್ಯಾಸ ಎಂದು ಚೀನಾ ವಿವರಿಸಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಜಪಾನ್, ಇದೀಗ ‘ಪ್ರತಿದಾಳಿ ಸಾಮರ್ಥ್ಯ’ದ ಬಗ್ಗೆ ಮಾತನಾಡಲು ಆರಂಭಿಸಿದೆ. ‘ನೆರೆಯಲ್ಲಿರುವ ಅಣ್ವಸ್ತ್ರ ಸಜ್ಜಿತ ದೇಶಗಳಿಂದ ಭದ್ರತೆಗೆ ಆತಂಕ ಎದುರಾಗಿದೆ’ ಎಂದು ಜಪಾನ್​ನ ಉನ್ನತ ನಾಯಕತ್ವ ಹೇಳಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಮತ್ತು ಚೀನಾದ ರಕ್ಷಣಾ ಸಚಿವ ವೇ ಫೆಂಘೆ ನಡುವೆ ನಡೆದ ಸಭೆಯನ್ನು ವಿಶ್ವ ಸಮುದಾಯ ಗಮನಿಸಿದೆ. ಸಿಂಗಪುರದಲ್ಲಿ ನಡೆಯುತ್ತಿರುವ ಶಾಂಗ್ರಿ ಲಾ ಸಮಾವೇಶದಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಸಚಿವರನ್ನೂ ವೇ ಫೆಂಘೆ ಭೇಟಿಯಾಗಿದ್ದರು. ತೈವಾನ್ ವಿದ್ಯಮಾನಗಳಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಚೀನಾ ತೀವ್ರವಾಗಿ ಆಕ್ಷೇಪಿಸಿತ್ತು. ಆದರೆ ಈ ಎಲ್ಲದರ ಹೊರತಾಗಿ ಜಪಾನ್ ರಕ್ಷಣಾ ಸಚಿವರು ಆಡಿದ ಮಾತು ಎಲ್ಲರ ಗಮನ ಸೆಳೆದಿತ್ತು. ಜಪಾನ್​ಗೆ ಇತರ ದೇಶಗಳಿಂದ ಆತಂಕ ಇದೆ. ಅದನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಏಂದು ಘೋಷಿಸಿದ್ದರು.

ಸಿಂಗಪುರ ಸಮಾವೇಶದಲ್ಲಿ ಉಕ್ರೇನ್ ಮೇಲಿನ ರಷ್ಯಾ ದಾಳಿಯ ಬಗ್ಗೆ ಚರ್ಚೆಗಳೇನೋ ನಡೆದವು. ಆದರೆ ಚೀನಾ ಮತ್ತು ರಷ್ಯಾದ ಸಂಭಾವ್ಯ ಮೈತ್ರಿ ಮತ್ತು ಈ ಎರಡೂ ದೇಶಗಳು ಇರಿಸಬಹುದಾದ ಮುಂದಿನ ನಡೆಯಿಂದ ಏಷ್ಯಾ ಪೆಸಿಫಿಕ್ ವಲಯದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತವಾಯಿತು. ಕಾಂಬೋಡಿಯಾ, ಓಷೆನಿಯಾದಲ್ಲಿ ಹೊಸ ನೌಕಾನೆಲೆ ಸ್ಥಾಪಿಸಲು ಚೀನಾ ಮುಂದಾಗಿದೆ. ತೈವಾನ್​ ದ್ವೀಪಕ್ಕೆ ಮುತ್ತಿಗೆ ಹಾಕಬಲ್ಲ ಚೀನಾದ ಸಾಮರ್ಥ್ಯ ಇದರಿಂದ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್​ಗಳಿಗೂ ಹಲವು ಆತಂಕ ತಂದೊಡ್ಡಿದೆ ಎಂದು ಹಲವರು ಪ್ರತಿಪಾದಿಸಿದರು.

ಉಕ್ರೇನ್ ಯುದ್ಧ ಮತ್ತು ಚೀನಾದ ಸಾಮರ್ಥ್ಯ ವೃದ್ಧಿಯ ಹಿನ್ನೆಲೆಯಲ್ಲಿ ಜಾಗತಿಕ ಭದ್ರತೆಗೆ ಒದಗಿರುವ ಸಮಸ್ಯೆಗಳ ಬಗ್ಗೆ 22 ದೇಶಗಳ ಗುಪ್ತಚರ ಇಲಾಖೆಗಳ ಮುಖ್ಯಸ್ಥರ ನಡುವೆ ವಿಚಾರ ವಿನಿಮಯ ನಡೆಯಿತು. ಚೀನಾದ ಸಾಲದ ಬಲೆಗೆ ಸಿಲುಕಿರುವ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಮಂಗೋಲಿಯಾ ದೇಶಗಳ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯಿತು. ಹಣದುಬ್ಬರ ಮತ್ತು ಡಾಲರ್ ಎದುರು ವಿವಿಧ ದೇಶಗಳ ಕರೆನ್ಸಿ ಮೌಲ್ಯ ಕುಸಿತದ ಬಗ್ಗೆಯೂ ಆತಂಕ ವ್ಯಕ್ತವಾಯಿತು. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಆರ್ಥಿಕ ಸುಸ್ಥಿತಿ ಕಾಪಾಡುವ ಬಗ್ಗೆ ಗಮನ ಹರಿಸದಿದ್ದರೆ ಈ ಪ್ರದೇಶದಲ್ಲಿ ಅಸ್ಥಿರತೆ ಹೆಚ್ಚಾಗಬಹುದು ಎಂದು ಹಲವರು ಹೇಳಿದರು. ಸಿಂಗಪುರ ಸಮಾವೇಶಕ್ಕೆ ಭಾರತ ಸರ್ಕಾರವು ತನ್ನ ರಕ್ಷಣಾ ಸಚಿವರನ್ನು ಕಳಿಸಿರಲಿಲ್ಲ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Mon, 13 June 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು