ಅಮ್ಮ ವಕೀಲೆಯಾಗಿ ಪ್ರಮಾಣ ವಚನ, ಜಡ್ಜ್​​ ಕೈಯಲ್ಲಿ ಕಂದನ ವಿಡಿಯೋ ವೈರಲ್

sadhu srinath

sadhu srinath |

Updated on: Nov 19, 2019 | 1:11 PM

ನ್ಯೂಯಾರ್ಕ್: ಅಮೆರಿಕದ ಟೆನ್ನಿಸಿಯಲ್ಲಿ ವಕೀಲೆಯೊಬ್ಬರಿಗೆ ಪ್ರಮಾಣ ವಚನ ಬೋಧಿಸುವಾಗ, ಪ್ರಮಾಣ ವಚನ ಬೋಧಿಸುತ್ತಿದ್ದ ನ್ಯಾಯಾಧೀಶರು ಆಕೆಯ ಮಗುವನ್ನ ಎತ್ತಿಕೊಂಡು ಆಡಿಸುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ. ನ್ಯಾಯಾಧೀಶ ರಿಚರ್ಡ್ ಡಿನ್​ಕಿನ್ಸ್​ ಎಂಬುವವರು ಜೂಲಿಯಾನಾ ಲಮರ್ ಎಂಬುವವರಿಗೆ ವಕೀಲೆಯಾಗಿ ಪ್ರಮಾಣ ವಚನ ಬೋಧಿಸಿದ್ದಾರೆ. ಈ ವೇಳೆ ಜೂಲಿಯಾನಾ ಲಮರ್ ಅವರ ಪುಟ್ಟ ಮಗುವನ್ನ ನ್ಯಾಯಾಧೀಶ ರಿಚರ್ಡ್ ಎತ್ತಿಕೊಂಡೇ ಪ್ರಮಾಣ ವಚನ ಬೋಧಿಸಿದ್ದಾರೆ. ಈ ದೃಶ್ಯವನ್ನ ಸಾರಾ ಮಾರ್ಟಿನ್ ಎಂಬುವವರು ವಿಡಿಯೋ ಮಾಡಿ, ಅದನ್ನ ಟ್ವಿಟ್ಟರ್​ಗೆ ಹಾಕಿದ್ದರು. ಇದು ಭಾರಿ […]

ಅಮ್ಮ ವಕೀಲೆಯಾಗಿ ಪ್ರಮಾಣ ವಚನ, ಜಡ್ಜ್​​ ಕೈಯಲ್ಲಿ ಕಂದನ ವಿಡಿಯೋ ವೈರಲ್

ನ್ಯೂಯಾರ್ಕ್: ಅಮೆರಿಕದ ಟೆನ್ನಿಸಿಯಲ್ಲಿ ವಕೀಲೆಯೊಬ್ಬರಿಗೆ ಪ್ರಮಾಣ ವಚನ ಬೋಧಿಸುವಾಗ, ಪ್ರಮಾಣ ವಚನ ಬೋಧಿಸುತ್ತಿದ್ದ ನ್ಯಾಯಾಧೀಶರು ಆಕೆಯ ಮಗುವನ್ನ ಎತ್ತಿಕೊಂಡು ಆಡಿಸುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ.

ನ್ಯಾಯಾಧೀಶ ರಿಚರ್ಡ್ ಡಿನ್​ಕಿನ್ಸ್​ ಎಂಬುವವರು ಜೂಲಿಯಾನಾ ಲಮರ್ ಎಂಬುವವರಿಗೆ ವಕೀಲೆಯಾಗಿ ಪ್ರಮಾಣ ವಚನ ಬೋಧಿಸಿದ್ದಾರೆ. ಈ ವೇಳೆ ಜೂಲಿಯಾನಾ ಲಮರ್ ಅವರ ಪುಟ್ಟ ಮಗುವನ್ನ ನ್ಯಾಯಾಧೀಶ ರಿಚರ್ಡ್ ಎತ್ತಿಕೊಂಡೇ ಪ್ರಮಾಣ ವಚನ ಬೋಧಿಸಿದ್ದಾರೆ. ಈ ದೃಶ್ಯವನ್ನ ಸಾರಾ ಮಾರ್ಟಿನ್ ಎಂಬುವವರು ವಿಡಿಯೋ ಮಾಡಿ, ಅದನ್ನ ಟ್ವಿಟ್ಟರ್​ಗೆ ಹಾಕಿದ್ದರು. ಇದು ಭಾರಿ ಜನಪ್ರಿಯವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada