ಎಸ್ಎಂ ಕೃಷ್ಣ ಮತ್ತು ಡಿಬಿ ಚಂದ್ರೇಗೌಡರಂಥ ನಾಯಕರು ನಮ್ಮ ರಾಜ್ಯಕ್ಕೆ ಬೇಕಿದೆ: ಅವಧೂತ ವಿನಯ್ ಗುರೂಜಿ
ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಯೇ ಅನ್ನೋದು ರಾಜ್ಯದಲ್ಲಿ ಪ್ರತಿದಿನ ಚರ್ಚೆ ಆಗುತ್ತಿರುವ ವಿಷಯ. ಸಾಧ್ಯತೆಯ ಬಗ್ಗೆ ಗುರೂಜಿ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದಿದ್ದೇ. ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದೇ ನಮ್ಮೆಲ್ಲರ ಬಯಕೆಯಾಗಿದೆ, ಗುರುಗಳ ದಯೆಯಿಂದ ಶಿವಕುಮಾರ್ ಸಿಎಂ ಆಗಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ಗುರೂಜಿ ಹೇಳಿದರು.
ಚಿಕ್ಕೋಡಿ: ಇವತ್ತಿನ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಧಿಕಾರ ಲಾಲಸೆ, ತಿಕ್ಕಾಟ ಮತ್ತು ಜಂಜಾಟಗಳ ಬಗ್ಗೆ ಕೇಳಿದಾಗ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ರಾಜನಲ್ಲಿ ಜ್ಞಾನವಿದ್ದರೆ ಅದೊಂದು ತಪಸ್ಸು, ಜ್ಞಾನದ ಜಾಗದಲ್ಲಿ ಅಧಿಕಾರ ಮತ್ತು ಹಣದ ಮದ ಮನೆ ಮಾಡಿದರೆ ಅದು ವಿನಾಶದ ಕಡೆ ಒಯ್ಯುತ್ತದೆ ಎಂದು ಹೇಳಿದರು. ನಮ್ಮ ರಾಜ್ಯ ಎಸ್ ಎಂ ಕೃಷ್ಣ ಮತ್ತು ಡಿಬಿ ಚಂದ್ರೇಗೌಡರಂಥ ಮುತ್ಸದ್ದಿಗಳನ್ನು ಕಂಡಿದೆ, ಯುವ ಪೀಳಿಗೆಯ ರಾಜಕಾರಣಿಗಳು ಅವರನ್ನು ಮಾದರಿಯಾಗಿಟ್ಟುಕೊಂಡರೆ ರಾಜಕಾರಣ ಸಹ್ಯವೆನಿಸಿಕೊಳ್ಳುತ್ತದೆ ಎಂದು ವಿನಯ್ ಗೂರೂಜಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಈ ವರ್ಷ ನಿಮಗೆ ದೊಡ್ಡ ರಾಜಯೋಗ ಇದೆ’; ವಿನಯ್ಗೆ ಹೇಳಿದ ಭವಿಷ್ಯದ ಅರ್ಥವೇನು?