AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕೊರಿಯಾದಿಂದ ದೂರಗಾಮಿ ಕ್ರೂಸ್​ ಕ್ಷಿಪಣಿ ಪ್ರಯೋಗ, ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ಮತ್ತಷ್ಟು ಬಲಾಢ್ಯ

North Korea: ದಿಢೀರನೆ ಪುಟಿದೆದ್ದಿರುವ ಉತ್ತರ ಕೊರಿಯಾದ ಸೇನೆಯು ಶನಿವಾರ ಮತ್ತು ಭಾನುವಾರದ ನಡುವೆ ನಡೆಸಿರುವ ದೂರಗಾಮಿ ಕ್ರೂಸ್​ ಕ್ಷಿಪಣಿಗಳನ್ನು ಪರೀಕ್ಷಿಸಿದ್ದು, ಜಗತ್ತಿಗೆ ಸಡ್ಡುಹೊಡೆದಿದೆ. ಈ ದೂರಗಾಮಿ ಕ್ರೂಸ್​ ಕ್ಷಿಪಣಿಗಳು 1,500 ಕಿಮೀ ದೂರದ ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು.

ಉತ್ತರ ಕೊರಿಯಾದಿಂದ ದೂರಗಾಮಿ ಕ್ರೂಸ್​ ಕ್ಷಿಪಣಿ ಪ್ರಯೋಗ, ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ಮತ್ತಷ್ಟು ಬಲಾಢ್ಯ
ಉತ್ತರ ಕೊರಿಯಾದಿಂದ ದೂರಗಾಮಿ ಕ್ರೂಸ್​ ಕ್ಷಿಪಣಿ ಪ್ರಯೋಗ, ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ಮತ್ತಷ್ಟು ಬಲಾಢ್ಯ
TV9 Web
| Edited By: |

Updated on:Sep 13, 2021 | 9:45 AM

Share

ಸಿಯೋಲ್: ಅಮೆರಿಕಾ ಜೊತೆಗಿನ ಶೀತಲಸಮರದ ನಡುವೆಯೇ ಉತ್ತರ ಕೊರಿಯಾ ದೂರಗಾಮಿ ಕ್ರೂಸ್​ ಕ್ಷಿಪಣಿಗಳನ್ನು ಪ್ರಯೋಗಾರ್ಥವಾಗಿ ಉಡಾಯಿಸಿದೆ. ಇದರಿಂದ ಉತ್ತರ ಕೊರಿಯಾದ ಸೇನೆಗೆ ಆನೆ ಬಲ ಬಂದಿದೆ ಎಂದು ಆ ರಾಷ್ಟ್ರದ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ಎದೆಯುಬ್ಬಿಸಿ ಹೇಳಿದ್ದಾರೆ.

ಅಮೆರಿಕಾ ಜೊತೆಗೆ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಉತ್ತರ ಕೊರಿಯಾದ (North Korea) ಸೇನಾ ಬತ್ತಳಿಕೆಯಲ್ಲಿ ತುಂಬಿಸುತ್ತಾ ಬಂದಿರುವ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್ (Kim Jong Un) ಇತ್ತೀಚೆಗೆ ಸೇನಾ ಚಟುವಟಿಕೆ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಸೈಲೆಂಟ್​ ಮೋಡ್​ಗೆ ಹೋಗಿದ್ದರು. ಇದಕ್ಕೆ ಅವರ ಆರೋಗ್ಯವೂ ಕಾರಣವಾಗಿತ್ತು ಎನ್ನಲಾಗಿದೆ.

ಆದರೆ ಈಗ ದಿಢೀರನೆ ಪುಟಿದೆದ್ದಿರುವ ಉತ್ತರ ಕೊರಿಯಾದ ಸೇನೆಯು ಶನಿವಾರ ಮತ್ತು ಭಾನುವಾರದ ನಡುವೆ ನಡೆಸಿರುವ ದೂರಗಾಮಿ ಕ್ರೂಸ್​ ಕ್ಷಿಪಣಿಗಳನ್ನು (long-range cruise missiles) ಪರೀಕ್ಷಿಸಿದ್ದು, ಜಗತ್ತಿಗೆ ಸಡ್ಡುಹೊಡೆದಿದೆ. ಈ ದೂರಗಾಮಿ ಕ್ರೂಸ್​ ಕ್ಷಿಪಣಿಗಳು 1,500 ಕಿಮೀ ದೂರದ (932 miles) ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು ಎಂದು ಕೊರಿಯಾದ ವಾರ್ತಾ ಸಂಸ್ಥೆಗಳು ವರದಿ ಮಾಡಿವೆ.

ಇದನ್ನೂ ಓದಿ:

ಕಿಮ್​ ಜಾಂಗ್​ ಉನ್​ ಆರೋಗ್ಯಕ್ಕೇನಾಯಿತು? ಮತ್ತೊಂದಿಷ್ಟು ಅನುಮಾನ ಹುಟ್ಟಿಸಿದ ಸರ್ವಾಧಿಕಾರಿಯ ತಲೆ

ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್​ ಜಾಂಗ್​ ಉನ್​ ಪತ್ನಿ; ಎಲ್ಲಿ ಹೋಗಿದ್ದರು ರಿ ಸೋಲ್​ ಜು?

(Kim Jong Un North Korea says it tested long-range cruise missiles amid stalemate with US)

Published On - 8:44 am, Mon, 13 September 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು