ನ್ಯೂಜಿಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ 16 ಮಂದಿ ಬಲಿ
ನ್ಯೂಜಿಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಕಾಣೆಯಾಗಿರುವ ಮತ್ತಿಬ್ಬರು ಇನ್ನೂ ಪತ್ತೆಯಾಗಿಲ್ಲ. ಇನ್ನೂ ಕೂಡ ಜ್ವಾಲಾಮುಖಿ ವಿಶಯುಕ್ತ ಹೊಗೆಯನ್ನ ಉಗುಳುತ್ತಿದ್ದು, ದ್ವೀಪದ ಸಮೀಪ ಹೋಗದಂತೆ ನಿಷೇಧಾಜ್ಞೆ ಹೇರಲಾಗಿದೆ. ಪ್ರತಿಭಟನೆಗೆ ಬೆದರಿದ ಲೆಬನಾನ್: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಸರ್ಕಾರ ವಿರುದ್ಧ ಭುಗಿಲೆದಿದ್ದ ಪ್ರತಿಭಟನೆಯಲ್ಲಿ ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನೆ ನಿಯಂತ್ರಿಸಲು ಲೆಬನಾನ್ ಭದ್ರತಾ ಪಡೆ ಟಿಯರ್ ಗ್ಯಾಸ್ ಬಳಸಿದ್ದು, ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಒಲಂಪಿಕ್ ಸ್ಟೇಡಿಯಂ ಉದ್ಘಾಟನೆ: 2020ರ […]
ನ್ಯೂಜಿಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಕಾಣೆಯಾಗಿರುವ ಮತ್ತಿಬ್ಬರು ಇನ್ನೂ ಪತ್ತೆಯಾಗಿಲ್ಲ. ಇನ್ನೂ ಕೂಡ ಜ್ವಾಲಾಮುಖಿ ವಿಶಯುಕ್ತ ಹೊಗೆಯನ್ನ ಉಗುಳುತ್ತಿದ್ದು, ದ್ವೀಪದ ಸಮೀಪ ಹೋಗದಂತೆ ನಿಷೇಧಾಜ್ಞೆ ಹೇರಲಾಗಿದೆ.
ಪ್ರತಿಭಟನೆಗೆ ಬೆದರಿದ ಲೆಬನಾನ್: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಸರ್ಕಾರ ವಿರುದ್ಧ ಭುಗಿಲೆದಿದ್ದ ಪ್ರತಿಭಟನೆಯಲ್ಲಿ ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನೆ ನಿಯಂತ್ರಿಸಲು ಲೆಬನಾನ್ ಭದ್ರತಾ ಪಡೆ ಟಿಯರ್ ಗ್ಯಾಸ್ ಬಳಸಿದ್ದು, ಪೊಲೀಸರು ಕೂಡ ಗಾಯಗೊಂಡಿದ್ದಾರೆ.
ಒಲಂಪಿಕ್ ಸ್ಟೇಡಿಯಂ ಉದ್ಘಾಟನೆ: 2020ರ ಒಲಂಪಿಕ್ಗೆ ಜಪಾನ್ ಸಜ್ಜಾಗಿದ್ದು, ನೂತನವಾಗಿ ನಿರ್ಮಾಣ ಮಾಡಿರುವ ಒಲಂಪಿಕ್ ಸ್ಟೇಡಿಯಂ ಅನ್ನ ಜಪಾನ್ ಪ್ರಧಾನಿ ಶಿಂಜು ಅಬೆ ಉದ್ಘಾಟಿಸಿದ್ರು. 2020ರ ಜುಲೈ 24ರಿಂದ ಒಲಂಪಿಕ್ ಪಂದ್ಯಾವಳಿಗಳು ಆರಂಭ ಆಗಲಿದ್ದು, ವಿಶ್ವಕ್ಕೆ ತನ್ನ ಸಾಮರ್ಥ್ಯ ತೋರಿಸಲು ಜಪಾನ್ ಸಜ್ಜಾಗಿದೆ.