ಕೊವಿಡ್-19 ಲಸಿಕೆ ತೆಗೆದುಕೊಂಡವರಿಗೆ ಉಂಟಾಗುತ್ತಿದೆ ಅಡ್ಡಪರಿಣಾಮ!

ಕೊರೊನಾ ಲಸಿಕೆ‌ ಪಡೆದ ಕೆಲ ಯುವಕರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ. 10ರಲ್ಲಿ 9 ಯುವಕರಿಗೆ ಅಡ್ಡ ಪರಿಣಾಮ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೊವಿಡ್-19 ಲಸಿಕೆ ತೆಗೆದುಕೊಂಡವರಿಗೆ ಉಂಟಾಗುತ್ತಿದೆ ಅಡ್ಡಪರಿಣಾಮ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 11:18 PM

ಕೊರೊನಾ ಲಸಿಕೆ‌ ಪಡೆದ ಕೆಲ ಯುವಕರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ. 10ರಲ್ಲಿ 9 ಯುವಕರಿಗೆ ಅಡ್ಡ ಪರಿಣಾಮ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂಜೆಕ್ಷನ್‌ ಪಡೆದ ಜಾಗದಲ್ಲಿ 2-3 ದಿನಗಳವರೆಗೆ ನೋವು ಕಾಣಿಸಿಕೊಂಡಿದೆ. ಲಸಿಕೆ ಪಡೆದ ಶೇಕಡಾ 4.6ರಷ್ಟು ಜನರಿಗೆ ತೀವ್ರ ನೋವಿನ ಅನುಭವವಾಗಿದೆ. ಕಿರಿಯ ವಯಸ್ಸಿನವರಿಗೆ ಆಯಾಸದ ಪ್ರಮಾಣವೂ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ. ಕೊವಿಡ್-19 ವಿರುದ್ಧದ ಲಸಿಕೆಯ ಎರಡನೇ ಡೋಸ್​ನಲ್ಲಿ ಹೆಚ್ಚಿನ ನೋವು ಹಾಗೂ ತೀವ್ರ ಆಯಾಸ ಉಂಟಾಗಿದೆ ಎಂಬ ಮಾಹಿತಿ ಇದೆ.

ಫೈಝರ್, ಬಯೋಎನ್​ಟೆಕ್ ಲಸಿಕೆಯ ಅಡ್ಡಪರಿಣಾಮಗಳು ಅಮೆರಿಕಾದಲ್ಲಿ ಫೈಝರ್ ಹಾಗೂ ಬಯೋಎನ್​ಟೆಕ್ ಲಸಿಕೆ ವಿತರಣೆಯ ಆರಂಭದಲ್ಲೇ ಲಸಿಕೆಯಿಂದ‌ ಅಡ್ಡಪರಿಣಾಮ ಉಂಟಾಗಿದ್ದು ವರದಿಯಾಗಿತ್ತು. ಅಮೇರಿಕಾದ ಅಲಾಸ್ಕಾದಲ್ಲಿ‌ ಎರಡು ಅಡ್ಡಪರಿಣಾಮದ‌ ಪ್ರಕರಣಗಳು ಪತ್ತೆಯಾಗಿತ್ತು. ಮಧ್ಯ ವಯಸ್ಸಿನ ಮಹಿಳೆ ಹಾಗೂ ಮತ್ತೊಬ್ಬ ಪುರುಷನಿಗೆ ಅಲರ್ಜಿ ಸಮಸ್ಯೆ ಉಂಟಾಗಿದೆ. ತಲೆ ಸುತ್ತುವಿಕೆ, ಲಸಿಕೆ‌ ಪಡೆದ ಜಾಗದಲ್ಲಿ ಊತ, ಸುಸ್ತು ಲಕ್ಷಣಗಳು ಕಾಣಿಸಿಕೊಂಡಿತ್ತು. ಅಲರ್ಜಿ ಸಮಸ್ಯೆ ಇಲ್ಲದೆ ಇದ್ದರೂ ಲಸಿಕೆ ಪಡೆದ ಬಳಿಕ ಸಮಸ್ಯೆ ಉಂಟಾಗಿತ್ತು. ಹಾಗಾಗಿ, ಲಸಿಕೆ ಪಡೆದ 6 ಗಂಟೆಗಳವರೆಗೆ ಅವರನ್ನು ಲಸಿಕಾ ಕೇಂದ್ರದಲ್ಲಿಯೇ ಇರಿಸಿ ನಿಗಾವಹಿಸಲಾಗಿತ್ತು. ಚೇತರಿಸಿಕೊಂಡ ಬಳಿಕ ಲಸಿಕೆ ಪಡೆದ ಮಹಿಳೆಯನ್ನು ಕಳುಹಿಸಿಕೊಡಲಾಗಿತ್ತು.

ಬ್ರಿಟನ್​ನಲ್ಲೂ ಇಬ್ಬರಿಗೆ ಫೈಝರ್ ಅಡ್ಡಪರಿಣಾಮ ಕಾಣಿಸಿಕೊಂಡಿತ್ತು. ಬಳಿಕ, ಚಿಕಿತ್ಸೆ ಪಡೆದು ಅಡ್ಡಪರಿಣಾಮದಿಂದ‌ ಚೇತರಿಸಿಕೊಂಡಿದ್ದರು. ಹಾಗಾಗಿ, ಅಲರ್ಜಿ ಇರುವವರು ಫೈಝರ್ ಲಸಿಕೆ‌ ಸ್ವೀಕರಿಸದಂತೆ ಬ್ರಿಟನ್ ಸರಕಾರವೇ ಆದೇಶ ಹೊರಡಿಸಿತ್ತು.

ಮಾಡೆರ್ನಾ ಲಸಿಕೆಯಿಂದಾದ ಅಡ್ಡಪರಿಣಾಮಗಳು ಮಾಡೆರ್ನಾ ಲಸಿಕೆ‌ಯಲ್ಲೂ ಅಡ್ಡಪರಿಣಾಮಗಳು ಇವೆ.‌ ಆದರೆ, ದೀರ್ಘಕಾಲ‌ದ ಸಮಸ್ಯೆಗಳು ಇಲ್ಲ ಎನ್ನಲಾಗುತ್ತಿದೆ. ಅಲರ್ಜಿ ಇರುವವರಿಗೆ ಅಡ್ಡ ಪರಿಣಾಮ ಆಗಲಿದೆ ಎಂಬ ಮಾಹಿತಿ ಇದೆ. ಅಲರ್ಜಿ ಸಮಸ್ಯೆ ಇಲ್ಲದೇ ಇರುವವರಿಗೂ ಸಣ್ಣ ಪ್ರಮಾಣದ ಸಮಸ್ಯೆಗಳು ಆಗಲಿದೆ ಎನ್ನಲಾಗುತ್ತಿದೆ. ತಲೆ ಸುತ್ತುವಿಕೆ, ತಲೆನೋವು, ಲಸಿಕೆ ಪಡೆದ ಜಾಗದಲ್ಲಿ ಊತ, ಸ್ವಲ್ಪ ಮಟ್ಟಿಗೆ ಜ್ವರ, ಶೀತ, ವಾಂತಿ ಲಕ್ಷಣಗಳು ಕಂಡುಬರಲಿವೆ.

ಮಾಡೆರ್ನಾ ಲಸಿಕೆ ದೀರ್ಘಕಾಲ‌ದ ಅಡ್ಡ ಪರಿಣಾಮ‌ಗಳು ಬೀರುವುದಿಲ್ಲ ಎಂದು ತಿಳಿದುಬಂದಿದೆ. ಲಸಿಕೆಯಿಂದಾಗುವ ಹೆಚ್ಚಿನ ಅಡ್ಡಪರಿಣಾಮಗಳು ಸೌಮ್ಯ ಅಥವಾ ಮಧ್ಯಮವಾಗಿದ್ದರೂ, ಮಾಡೆರ್ನಾ ಲಸಿಕೆ ಪಡೆದವರಲ್ಲಿ ಸುಮಾರು 17% ರಷ್ಟು ನೋವು, ಊತ, ಜ್ವರ ಅಥವಾ ತಲೆನೋವಿನಂತಹ ತೀವ್ರ ಅಡ್ಡಪರಿಣಾಮಗಳು ವರದಿಯಾಗಿವೆ

ಮಾಡೆರ್ನಾ ಕೊರೊನಾ ಲಸಿಕೆ‌‌ ಪಡೆದ‌ ಅಮೆರಿಕಾದ ವೈದ್ಯನಿಗೆ ಅಲರ್ಜಿ ಬೋಸ್ಟನ್ ವೈದ್ಯಕೀಯ ಕೇಂದ್ರದ ಜೆರಿಯಾಟ್ರಿಕ್ ಆಂಕೊಲಜಿ ವೈದ್ಯರಿಗೆ ಅಲರ್ಜಿ ಕಾಣಿಸಿಕೊಂಡಿದೆ. ಲಸಿಕೆ‌ ಪಡೆದ ಕೂಡಲೆ‌ ತಲೆತಿರುಗುವಿಕೆ, ಹೃದಯ ಸಂಬಂಧಿ ನೋವು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.

ಊಹೆಗೂ ಮೀರಿ ಅಡ್ಡಪರಿಣಾಮ ಬೀರುತ್ತಿದೆ ಫೈಜರ್ ಕೊರೊನಾ ಲಸಿಕೆ – ಡಾ. ಮಾನ್ಸೆಫ್ ಸ್ಲಾಯ್

Published On - 7:28 pm, Sat, 26 December 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ