ಖ್ಯಾತ ಹಾಸ್ಯ ನಟನ ಹತ್ಯೆಗೂ ಮುನ್ನ ಚಿತ್ರಹಿಂಸೆ ನೀಡಿದ ತಾಲಿಬಾನ್ ಉಗ್ರರು; ಶಾಕಿಂಗ್ ವಿಡಿಯೋ ವೈರಲ್

Taliban Video: ಹತ್ಯೆಗೂ ಮುನ್ನ ಕಾರಿನಲ್ಲಿ ಉಗ್ರರು ನಟ ನಜರ್ ಮೊಹಮ್ಮದ್ ಅವರ ಕೆನ್ನೆಗೆ ಹೊಡೆದು, ಹಿಂಸೆ ನೀಡಿರುವ ಶಾಕಿಂಗ್ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದೆ.

ಖ್ಯಾತ ಹಾಸ್ಯ ನಟನ ಹತ್ಯೆಗೂ ಮುನ್ನ ಚಿತ್ರಹಿಂಸೆ ನೀಡಿದ ತಾಲಿಬಾನ್ ಉಗ್ರರು; ಶಾಕಿಂಗ್ ವಿಡಿಯೋ ವೈರಲ್
ಅಫ್ಘಾನಿಸ್ತಾನದ ಹಾಸ್ಯನಟ ಖಾಶಾ ಜ್ವಾನ್
TV9kannada Web Team

| Edited By: Sushma Chakre

Jul 28, 2021 | 4:17 PM

ಕಾಬೂಲ್: ಅಫ್ಘಾನಿಸ್ತಾನದ ಖ್ಯಾತ ಹಾಸ್ಯನಟ ನಜರ್ ಮೊಹಮ್ಮದ್ (Nazar Mohammad) ಅಲಿಯಾಸ್ ಖಾಶಾ ಜ್ವಾನ್ (Khasha Zwan) ಎಂಬುವವರನ್ನು ಅಪಹರಿಸಿರುವ ತಾಲಿಬಾನ್ ಉಗ್ರರು (Taliban Terrorist) ಹತ್ಯೆ ಮಾಡಿದ್ದಾರೆ. ಈ ಹತ್ಯೆಗೂ ಮುನ್ನ ಕಾರಿನಲ್ಲಿ ಉಗ್ರರು ನಟ ನಜರ್ ಮೊಹಮ್ಮದ್ ಅವರ ಕೆನ್ನೆಗೆ ಹೊಡೆದು, ಹಿಂಸೆ ನೀಡಿರುವ ಶಾಕಿಂಗ್ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದೆ. ಖಾಶಾ ಜ್ವಾನ್ ಎಂದೇ ಕರೆಸಿಕೊಳ್ಳುತ್ತಿದ್ದ ನಟ ನಜರ್ ಮೊಹಮ್ಮದ್ ಅವರ ಕತ್ತು ಸೀಳಿ, ಬಳಿಕ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

2 ದಿನಗಳ ಹಿಂದೆ ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಕಂದಹಾರ್ ಬಳಿ ನಟ ಖಾಶಾ ಜ್ವಾನ್ ಅವರ ಮೃತದೇಹ ಪತ್ತೆಯಾಗಿತ್ತು. ಆ ಕೊಲೆಗೂ ಹಿಂದಿನ ದಿನ ಅಂದರೆ ನಟನನ್ನು ಅಪಹರಣ ಮಾಡಿದ ದಿನ ಉಗ್ರರು ಅವರಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪರಿಚಿತ ದುಷ್ಕರ್ಮಿಗಳು ಖಾಶಾ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಅಪಹರಣ ಮಾಡಿದ್ದರು.

ಬಳಿಕ, ನಟ ಖಾಶಾ ಅವರ ಕುಟುಂಬಸ್ಥರು ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿದಾಗ ಅದು ತಾಲಿಬಾನ್ ಸಂಘಟನೆಯ ಉಗ್ರರ ಕೃತ್ಯ ಎಂಬುದು ಬಯಲಾಗಿತ್ತು. ಅದಾದ ಬಳಿಕ ಕಂದಹಾರ್ ಬಳಿ ನಟನ ಮೃತದೇಹ ಪತ್ತೆಯಾಗಿತ್ತು.

ಈ ಹಿಂದೆ ಕಂದಹಾರ್ ಪೊಲೀಸ್ ಇಲಾಖೆಯಲ್ಲೂ ಖಾಶ್ ಜ್ವಾನ್ ಸೇವೆ ಸಲ್ಲಿಸಿದ್ದರು. ಬಳಿಕ, ಪೂರ್ಣಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೇ ತಾಲಿಬಾನ್ ಉಗ್ರರು ಕಂದಹಾರ್​ನ ಶೇ. 70ರಷ್ಟು ಭಾಗವನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಇಲ್ಲಿ ವರದಿ ಮಾಡಲು ಹೋಗಿದ್ದ ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿಯನ್ನು ಕೂಡ ಹತ್ಯೆ ಮಾಡಲಾಗಿತ್ತು.

ಕಂದಹಾರ್​ನ ಹಾಸ್ಯನಟನನ್ನು ಉಗ್ರರು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ ವಿಶ್ವಾದ್ಯಂತ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಕಂದಹಾರ್​ನಲ್ಲಿ ತಾಲಿಬಾನ್ ಉಗ್ರರ ದಾಳಿಯ ವಿರುದ್ಧ ನಟ ಖಾಶಾ ಹೇಳಿಕೆ ನೀಡಿದ್ದರು. ಅದೇ ಕಾರಣಕ್ಕೆ ಅವರನ್ನು ಅಪಹರಿಸಿ, ಹತ್ಯೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: Danish Siddiqui: ಭಾರತದ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿ ಹತ್ಯೆಗೆ ಹೊಸ ಟ್ವಿಸ್ಟ್​; ಈ ಸಾವಿಗೆ ನಾವು ಕಾರಣವಲ್ಲ ಎಂದ ತಾಲಿಬಾನ್

Danish Siddiqui: ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ

(Taliban Terrorists Seen Slapping Afghan Comedian In Car Before Brutally Murder Him in Kandahar Shocking Video Viral)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada