ಕೊನೆಗೂ ವಾಯುದಾಳಿ ನಡೆಸಿ ಸೇಡು ತೀರಿಸಿಕೊಂಡ ‘ದೊಡ್ಡಣ್ಣ’

  • TV9 Web Team
  • Published On - 9:38 AM, 3 Jan 2020
ಕೊನೆಗೂ ವಾಯುದಾಳಿ ನಡೆಸಿ ಸೇಡು ತೀರಿಸಿಕೊಂಡ ‘ದೊಡ್ಡಣ್ಣ’

ಇರಾಕ್: ಇರಾಕ್​ನ ಬಾಗ್ದಾದ್ ಏರ್​ಪೋರ್ಟ್ ಬಳಿ ಅಮೆರಿಕ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಇರಾನ್​ನ ಕುದ್ಸ್ ಪಡೆ ಮುಖ್ಯಸ್ಥ ಜನರಲ್ ಕಾಸಿಮ್ ಸುಲೈಮಾನಿ ಹಾಗೂ ಮಿಲಿಟರಿ ಕಮಾಂಡರ್ ಸೇರಿ 8 ಜನ ಮೃತಪಟ್ಟಿದ್ದಾರೆ.

ಇರಾಕ್ ಈ ಮೊದಲು ಬಾಗ್ದಾದ್​ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತೆ ಅಂತ ಅಧ್ಯಕ್ಷ ಟ್ರಂಪ್ ಬೆದರಿಕೆಯೊಡ್ಡಿದ್ದರು. ಅದರ ಸೇಡು ತೀರಿಸಿಕೊಳ್ಳಲು ಅಮೆರಿಕ ದಾಳಿ ನಡೆಸಿದೆ. ಕೊನೆಗೂ ವಾಯುದಾಳಿ ನಡೆಸಿ ‘ದೊಡ್ಡಣ್ಣ’ ಸೇಡು ತೀರಿಸಿಕೊಂಡಿದ್ದಾರೆ.