ಪಿಸಿಆರ್​ ಟೆಸ್ಟ್​ ಬದಲು ಎಕ್ಸ್​-ರೇಯಿಂದ ಬಹುಬೇಗ ಕೊವಿಡ್ ರೋಗ ಪತ್ತೆ; ಸ್ಕಾಟ್ಲೆಂಡ್ ವಿಜ್ಞಾನಿಗಳಿಂದ ಹೊಸ ಆವಿಷ್ಕಾರ

ಸ್ಕಾಟ್ಲೆಂಡ್​ನ ವಿಜ್ಞಾನಿಗಳು ಕಂಡುಹಿಡಿದಿರುವ ಈ ಎಕ್ಸ್​-ರೇ ಆಧಾರಿತ ಪರೀಕ್ಷೆ ಕೊವಿಡ್ ರೋಗವನ್ನು ಬಹುಬೇಗ ಪತ್ತೆಹಚ್ಚಲು ಸಹಾಯಕವಾಗಲಿದೆ.

ಪಿಸಿಆರ್​ ಟೆಸ್ಟ್​ ಬದಲು ಎಕ್ಸ್​-ರೇಯಿಂದ ಬಹುಬೇಗ ಕೊವಿಡ್ ರೋಗ ಪತ್ತೆ; ಸ್ಕಾಟ್ಲೆಂಡ್ ವಿಜ್ಞಾನಿಗಳಿಂದ ಹೊಸ ಆವಿಷ್ಕಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 20, 2022 | 1:03 PM

ನವದೆಹಲಿ: ವಿಜ್ಞಾನಿಗಳು ಎಕ್ಸ್​-ರೇ (X-Ray) ಬಳಸಿಕೊಂಡು ಇಡೀ ಜಗತ್ತೇ ಅಚ್ಚರಿಪಡುವಂತಹ ಕೋವಿಡ್ (COVID-19) ರೋಗನಿರ್ಣಯ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕಡಿಮೆ ಅವಧಿಯಲ್ಲಿ ಶೇ. 98ರಷ್ಟು ನಿಖರವಾದ ಫಲಿತಾಂಶವನ್ನು ನೀಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪಿಸಿಆರ್​ ಪರೀಕ್ಷೆಯ (PCR Test) ಜಾಗಕ್ಕೆ ಎಕ್ಸ್​-ರೇ ಮುಂಚೂಣಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಸ್ಕಾಟ್ಲೆಂಡ್​ನ ವಿಜ್ಞಾನಿಗಳು ಕಂಡುಹಿಡಿದಿರುವ ಈ ಎಕ್ಸ್​-ರೇ ಆಧಾರಿತ ಪರೀಕ್ಷೆ ಕೊವಿಡ್ ರೋಗವನ್ನು ಬಹುಬೇಗ ಪತ್ತೆಹಚ್ಚಲು ಸಹಾಯಕವಾಗಲಿದೆ.

ಯೂನಿವರ್ಸಿಟಿ ಆಫ್ ದಿ ವೆಸ್ಟ್ ಆಫ್ ಸ್ಕಾಟ್ಲೆಂಡ್ (UWS)ನ ತಜ್ಞರು ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಂ ಅನ್ನು ಪ್ರಾರಂಭಿಸಿದರು. ಪಿಸಿಆರ್ ಪರೀಕ್ಷೆಗಳು ಸುಲಭವಾಗಿ ಲಭ್ಯವಿಲ್ಲದಿರುವಾಗ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಲು ಈ ಎಕ್ಸ್​-ರೇ ಸಹಾಯಕವಾಗಲಿದೆ. ಇದು ಪಿಸಿಆರ್ ಪರೀಕ್ಷೆಗಿಂತ ವೇಗವಾಗಿ ಕೊರೊನಾವೈರಸ್ ಅನ್ನು ಪತ್ತೆಹಚ್ಚುತ್ತದೆ. ಎಕ್ಸ್​-ರೇ ಮೂಲಕ ಸುಮಾರು 2 ಗಂಟೆಯೊಳಗೆ ಕೊವಿಡ್ ಪರೀಕ್ಷೆಯ ಫಲಿತಾಂಶವನ್ನು ಪಡೆಯಬಹುದು.

ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳು, ಆರೋಗ್ಯವಂತ ವ್ಯಕ್ತಿಗಳು ಮತ್ತು ವೈರಲ್ ನ್ಯುಮೋನಿಯಾ ರೋಗಿಗಳಿಗೆ ಸೇರಿದ ಸುಮಾರು 3,000 ಚಿತ್ರಗಳ ಡೇಟಾಬೇಸ್‌ಗೆ ಸ್ಕ್ಯಾನ್‌ಗಳನ್ನು ಹೋಲಿಸಲು ಎಕ್ಸ್-ರೇ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನ ಶೇಕಡಾ 98ರಷ್ಟು ನಿಖರವಾಗಿದೆ ಎಂದು ಕಂಡುಬಂದಿದೆ.

ಇಂಗ್ಲೆಂಡ್​ನಾದ್ಯಂತ ಅಪಘಾತ ಮತ್ತು ತುರ್ತು ವಿಭಾಗಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡಲು ಈ ತಂತ್ರಜ್ಞಾನವನ್ನು ಬಳಸಬಹುದೆಂದು ಭಾವಿಸಲಾಗಿದೆ. UWSನಲ್ಲಿನ ಸ್ಮಾರ್ಟ್ ಎನ್ವಿರಾನ್​ಮೆಂಟ್ಸ್ ರಿಸರ್ಚ್ ಸೆಂಟರ್‌ಗಾಗಿ ಎಫೆಕ್ಟಿವ್ ಮತ್ತು ಹ್ಯೂಮನ್ ಕಂಪ್ಯೂಟಿಂಗ್‌ನ ನಿರ್ದೇಶಕ ಪ್ರೊಫೆಸರ್ ನಯೀಮ್ ರಮ್ಜಾನ್ ಈ ಪ್ರಾಜೆಕ್ಟ್​​ನ ಮೂರು ವ್ಯಕ್ತಿಗಳ ತಂಡದ ನೇತೃತ್ವ ವಹಿಸಿದ್ದರು. ಇದರಲ್ಲಿ ಗೇಬ್ರಿಯಲ್ ಒಕೊಲೊ ಮತ್ತು ಡಾ ಸ್ಟಾಮೊಸ್ ಕಟ್ಸಿಗಿಯಾನಿಸ್ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ; ಬಿಜೆಪಿಯ ಎನ್​ಆರ್ ರಮೇಶ್ ವಿರುದ್ಧ ಎಫ್​ಐಆರ್ ದಾಖಲು

ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ