ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
ಪುನೀತ್ ಒಡನಾಟ ನೆನೆದ ಮಲಯಾಳಂ ಹಿರಿಯ ನಟಿ
Puneeth Rajkumar: ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ಕಡೆ ಪುನೀತ್ ಅವರನ್ನು ಅವರ ಸಿನಿಮಾಗಳನ್ನು, ಅವರು ಮಾಡಿದ ಸೇವೆಯನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಳೆಯ ವಿಡಿಯೋಗಳು, ಚಿತ್ರಗಳು ಪದೇ ಪದೇ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಲಯಾಳಂ ಚಿತ್ರರಂಗದ ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಊರ್ವಶಿ ಅವರು ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
- Manjunatha C
- Updated on: Jun 11, 2026
- 12:56 pm
ದಕ್ಷಿಣದ ಸ್ಟಾರ್ ನಟನ ಜೊತೆ ಕೈ ಜೋಡಿಸಲಿದ್ದಾರೆ ‘ಧುರಂಧರ್’ ನಿರ್ದೇಶಕ
Aditya Dhar movie: ನಿರ್ದೇಶಕ ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಮೂಲಕ ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಹೋಗಿ ಕೂತಿದ್ದಾರೆ. ಇದೀಗ ಅವರ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಸಿನಿಮಾ ಪ್ರಿಯರಿಗೆ ಅತೀವ ಕುತೂಹಲ ಮೂಡಿದೆ. ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರು ದಕ್ಷಿಣದ ಸ್ಟಾರ್ ನಟನ ಜೊತೆ ಕೈಜೋಡಿಸಲಿದ್ದಾರೆ.
- Manjunatha C
- Updated on: Jun 11, 2026
- 12:32 pm
ಸರ್ಪ್ರೈಸ್ ಕೊಡಲು ಬಂದವರಿಗೆ ಸರ್ಪ್ರೈಸ್ ಕೊಟ್ಟ ರಾಜಮೌಳಿ
SS Rajamouli movie: ಭಾರತದ ಟಾಪ್ ನಿರ್ದೇಶಕ ಆಗಿದ್ದರೂ ಸಹ ರಾಜಮೌಳಿ ಅವರು ಯಾವುದೇ ಅಹಂ ಇಲ್ಲದೆ, ಬಲು ಸರಳ ಮತ್ತು ವಿನಯವಂತಿಕೆಯಿಂದ ಇರುತ್ತಾರೆ. ಸಹಾಯ ಕೇಳಿ ಬರುವ ಕಿರಿಯ ಸಿನಿಮಾ ಕರ್ಮಿಗಳಿಗೆ ಸಹಾಯ ಮಾಡುತ್ತಾರೆ. ಇದೀಗ ರಾಜಮೌಳಿ ಅವರಿಗೆ ಸರ್ಪ್ರೈಸ್ ನೀಡಲು ಬಂದ ಕಿರಿಯ ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಖುದ್ದು ರಾಜಮೌಳಿ ಸರ್ಪ್ರೈಸ್ ನೀಡಿದ್ದಾರೆ.
- Manjunatha C
- Updated on: Jun 11, 2026
- 11:21 am
ಒಂದು ವರ್ಷದಲ್ಲಿ 13 ಸಿನಿಮಾ: ಹಳೆಯ ದಿನಗಳ ನೆನೆದ ಶ್ರುತಿ
Actress Shruthi: ನಟಿ ಶ್ರುತಿ ಕನ್ನಡ ಚಿತ್ರರಂಗದ ಹಿರಿಯ ನಟಿ. ಹಾಸ್ಯ, ಗಂಭೀರ, ಎಮೋಷನಲ್, ಗ್ರಾಮೀಣ, ಪೌರಾಣಿಕ, ಜನಪದ, ಕಲಾತ್ಮಕ ಸಿನಿಮಾ ಹೀಗೆ ಹಲವು ರೀತಿಯ ಸಿನಿಮಾಗಳು, ಪಾತ್ರಗಳಲ್ಲಿ ನಟಿಸಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಶ್ರುತಿ ಅವರ 175ನೇ ಸಿನಿಮಾ ‘ಮದರ್’ ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿದ್ದು, ನಟಿ ಶ್ರುತಿ ಅವರು ಮುಹೂರ್ತದ ಸಂದರ್ಭದಲ್ಲಿ ಮಾಧ್ಯಮದವರೊಟ್ಟಿಗೆ ಮಾತನಾಡುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ವಿಡಿಯೋ ನೋಡಿ...
- Manjunatha C
- Updated on: Jun 10, 2026
- 8:43 pm
175ನೇ ಸಿನಿಮಾದ ಮುಹೂರ್ತ, ಆ ಮೂವರ ನೆನೆದ ನಟಿ ಶ್ರುತಿ
Actress Shruthi: ಹಲವು ರೀತಿಯ ಪಾತ್ರಗಳಲ್ಲಿ ನಟಿಸಿರುವ ಶ್ರುತಿ ಅವರು ಚಿತ್ರರಂಗದ ವರ್ಸಟೈಲ್ ನಟಿ. ಇದೀಗ ಅವರ ನಟನೆಯ 175ನೇ ಸಿನಿಮಾದ ಮುಹೂರ್ತ ನಡೆದಿದೆ. ನಟಿಯೊಬ್ಬರು 175 ಸಿನಿಮಾಗಳಲ್ಲಿ ನಟಿಸುವುದು ಅಪರೂಪದ ವಿದ್ಯಮಾನ. ಅಂಥಹಾ ಸಾಧನೆಯನ್ನು ನಟಿ ಶ್ರುತಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರುತಿ, ತಮ್ಮ ಈ ಬೆಳವಣಿಗೆಗೆ ಪ್ರಮುಖ ಕಾರಣರಾದ ಮೂವರು ಮಹನೀಯರನ್ನು ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ...
- Manjunatha C
- Updated on: Jun 10, 2026
- 7:33 pm
‘ಪೆದ್ದಿ’ ಸಿನಿಮಾ ತಂಡದಿಂದ ಅಂತರ ಕಾಯ್ದುಕೊಂಡ ನಟಿ ಜಾನ್ಹವಿ ಕಪೂರ್
Janhvi Kapoor: ಜಾನ್ಹವಿ ಕಪೂರ್ ಅವರು ಖುದ್ದು ‘ಪೆದ್ದಿ’ ಸಿನಿಮಾನಲ್ಲಿ ತಮ್ಮನ್ನು ತೋರಿಸಿರುವ ರೀತಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
- Manjunatha C
- Updated on: Jun 10, 2026
- 7:18 pm
‘ಮಾ ಇಂಟಿ ಬಂಗಾರಂ’: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಮಂತಾ
Samantha Ruth Prabhu: ಇದೀಗ ಸಮಂತಾ ಋತ್ ಪ್ರಭು ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾದ ಮೂಲಕ ಗೆಲ್ಲಲೇ ಬೇಕಾದ ಒತ್ತಡದಲ್ಲಿ ನಟಿ ಸಮಂತಾ ಇದ್ದಾರೆ.
- Manjunatha C
- Updated on: Jun 10, 2026
- 7:11 pm
‘ದಿ ಆಡಸ್ಸಿ’ ಬೆಂಗಳೂರಲ್ಲಿ ಶೋ ಕಡಿಮೆ, ಆದರೆ ಬೆಲೆ ಬಲು ಹೆಚ್ಚು
The Odyssey: ವಿಶ್ವ ಬಾಕ್ಸ್ ಆಫೀಸ್ನಲ್ಲಿ ಬಲು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ದಿ ಆಡಸ್ಸಿ’ ರಿಲೀಸ್ಗೆ ಇನ್ನೊಂದು ವಾರ ಬಾಕಿ ಇದೆ. ವಿಶ್ವದ ನಂಬರ್ 1 ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿರುವ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿ ತಿಂಗಳುಗಳೇ ಆಗಿವೆ. ಆದರೆ ಭಾರತದಲ್ಲಿ ತುಸು ತಡವಾಗಿ ಅಂದರೆ ಇತ್ತೀಚೆಗಷ್ಟೆ ಬುಕಿಂಗ್ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಕೆಲವು ಮೆಟ್ರೊ ನಗರಗಳಲ್ಲಿ ಭಾರಿ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
- Manjunatha C
- Updated on: Jun 10, 2026
- 6:29 pm
ಪವನ್ ಕಲ್ಯಾಣ್ಗೆ ಇಷ್ಟವಾದ ಎರಡು ಹಿಂದಿ ಸಿನಿಮಾ ಇವು
Pawan Kalyan: ಪವನ್ ಕಲ್ಯಾಣ್, ಸ್ಟಾರ್ ನಟರಾಗಿರುವ ಜೊತೆಗೆ ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಸಹ ಹೌದು. ಹಲವು ಪ್ರಮುಖ ಖಾತೆಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇದೀಗ ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಪಾಡ್ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದಾರೆ. ಎಎನ್ಐ ನಡೆಸಿದ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್, ತಮ್ಮಿಷ್ಟದ ಎರಡು ಹಿಂದಿ ಸಿನಿಮಾಗಳನ್ನು ಹೆಸರಿಸಿದ್ದಾರೆ.
- Manjunatha C
- Updated on: Jun 10, 2026
- 5:39 pm
ವೈದ್ಯನ ಪಾತ್ರದಲ್ಲಿ ರಜನೀಕಾಂತ್, ಈ ಬಾರಿ ಮಾಸ್ ಅಲ್ಲ ಕ್ಲಾಸ್?
Rajinikanth movie: ಅಶ್ವತ್ಥ್ ಮಾರಿಮುತ್ತು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ವಿಡಿಯೋ ಹಂಚಿಕೊಳ್ಳುವ ಮೂಲಕ ನಿರ್ಮಾಣ ಸಂಸ್ಥೆಯು ಅವರೇ ಈ ಚಿತ್ರದ ನಿರ್ದೇಶಕರು ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಲಾಗಿದೆ. ಈಗ ಬಂದಿರುವ ಹೊಸ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಮಾಡಲಿರುವ ಪಾತ್ರದ ಬಗ್ಗೆ ಒಂದು ಆಸಕ್ತಿದಾಯಕ ಅಪ್‌ಡೇಟ್ ಹೊರಬಿದ್ದಿದೆ.
- Manjunatha C
- Updated on: Jun 10, 2026
- 3:51 pm
ಭಾರತಿರಾಜ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ತಪ್ಪಿದ್ದು ಹೇಗೆ?
Bharathiraja movie: ತಮಿಳು ಚಿತ್ರರಂಗದ ಹಾದಿಯನ್ನು ಬದಲಿಸಿದ ನಿರ್ದೇಶಕ ಎಂದು ಭಾರತಿರಾಜ ಅವರನ್ನು ಕರೆಯಲಾಗುತ್ತದೆ. ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯದಿನಿಲೆ’ 1977 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಭಾರತಿರಾಜ ಅವರ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ಆದರೆ ಅದು ಕೈತಪ್ಪಿದ್ದು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ!
- Manjunatha C
- Updated on: Jun 10, 2026
- 1:37 pm
ಭಾರತಿರಾಜಾ ಮತ್ತು ರಜನಿಕಾಂತ್ ಮಧ್ಯೆ ಇದ್ದ ವಿವಾದವೇನು?
Bharathiraja-Rajinikanth: ಹಲವು ಗಣ್ಯರು, ಭಾರತಿರಾಜಾ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡುತ್ತಿದ್ದಾರೆ. ಭಾರತಿರಾಜ ಅದ್ಭುತ ನಿರ್ದೇಶಕ ಮತ್ತು ನಟ ಆಗಿದ್ದ ಜೊತೆಗೆ ಸಿನಿಮಾ, ರಾಜಕೀಯ ವಿಮರ್ಶಕರೂ ಆಗಿದ್ದರು. ನಿರ್ದೇಶಕ ಭಾರತಿರಾಜಾ ಅವರಿಗೆ ಚಿತ್ರರಂಗದ ಎಲ್ಲರೊಟ್ಟಿಗೆ ಆಪ್ತ ಬಂಧವಿತ್ತು, ಆದರೆ ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ಮುನಿಸು ಸಹ ಇತ್ತು.
- Manjunatha C
- Updated on: Jun 10, 2026
- 1:21 pm