ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
‘ಸಮರ್ಪಣಾ ಭಾವಕ್ಕೆ ಹೃದಯಪೂರ್ವಕ ಸಲ್ಯೂಟ್’; ಪಿಎಂ ಮೋದಿಗೆ ಕಿಚ್ಚನ ಸಾಧನೆ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ದೇಶ ಮುನ್ನಡೆಸುತ್ತಿರುವ ಮೋದಿ, ನೆಹರು ಅವರ ದಾಖಲೆಯನ್ನು (4,398 ದಿನಗಳು) ಹಿಂದಿಕ್ಕಿ, ಅತಿ ಹೆಚ್ಚು ದಿನ ಸೇವೆ ಸಲ್ಲಿಸಿದ ಮೊದಲ ಚುನಾಯಿತ ಪ್ರಧಾನಿಯಾಗಿದ್ದಾರೆ (4,399 ದಿನಗಳು). ಈ ಐತಿಹಾಸಿಕ ಸಾಧನೆಗೆ ಕನ್ನಡ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ, ಮೋದಿ ಅವರ ಅಚಲ ಸಮರ್ಪಣೆ ಮತ್ತು ನಾಯಕತ್ವವನ್ನು ಹೊಗಳಿದ್ದಾರೆ.
- Rajesh Duggumane
- Updated on: Jun 11, 2026
- 1:00 pm
ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ
ಬಾಲಿವುಡ್‌ನ 'ಆಲ್ಫಾ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಭಾರಿ ವಿವಾದಕ್ಕೆ ಸಿಲುಕಿದೆ. ಆಲಿಯಾ ಭಟ್ ನಟನೆಯ ಈ ಚಿತ್ರದ ದೃಶ್ಯಗಳು 1990ರ ಫ್ರೆಂಚ್ ಸಿನಿಮಾ 'ಲಾ ಫೆಮ್ಮೆ ನಿಕಿತಾ' ಹಾಗೂ ಹಾಲಿವುಡ್‌ನ 'ಅಮೆರಿಕನ್ ಸ್ನೈಪರ್'ನ ಸಂಭಾಷಣೆಗಳನ್ನು ಕೃತಿಚೌರ್ಯ ಮಾಡಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ವೈಆರ್‌ಎಫ್‌ನ ಸೃಜನಶೀಲತೆಯ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ಕಾಪಿ ಕ್ಯಾಟ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
- Rajesh Duggumane
- Updated on: Jun 11, 2026
- 12:12 pm
17ನೇ ವಯಸ್ಸಿಗೆ ನಕ್ಸಲ್ ಆಗ ಹೊರಟಿದ್ದ ಪವನ್ ಕಲ್ಯಾಣ್; ತಡೆದಿದ್ದು ಅಣ್ಣ ಚಿರಂಜೀವಿ
ಪವನ್ ಕಲ್ಯಾಣ್ 17ನೇ ವಯಸ್ಸಿನಲ್ಲಿ ನಕ್ಸಲ್ ಸೇರಲು ನಿರ್ಧರಿಸಿದ್ದರು, ಸಮಾಜದ ಅನ್ಯಾಯಗಳ ವಿರುದ್ಧ ಆಕ್ರೋಶಗೊಂಡಿದ್ದರು. ಆದರೆ, ಅಣ್ಣ ಚಿರಂಜೀವಿ ಅವರ ಜವಾಬ್ದಾರಿಯುತ ಪ್ರಶ್ನೆಯಿಂದ ಪವನ್ ಆ ನಿರ್ಧಾರದಿಂದ ಹಿಂದೆ ಸರಿದರು. ಇಂದು ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಜನಸೇವೆ ಮಾಡುತ್ತಿದ್ದಾರೆ. ಚಿರಂಜೀವಿಯೇ ನನ್ನ ಹೀರೋ ಎಂದು ಪವನ್ ಸದಾ ಕೊಂಡಾಡುತ್ತಾರೆ.
- Rajesh Duggumane
- Updated on: Jun 11, 2026
- 11:07 am
ಬಿಕಿನಿಯಲ್ಲಿ ಮಿಂಚಿದ ನಟಿ ಸಂಯುಕ್ತಾ ಹೆಗಡೆ
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸಂಯುಕ್ತಾ ಹೆಗಡೆ ಅವರು ನೀಲಿ ಕಡಲ ತೀರದಲ್ಲಿ ಸಖತ್ ಆಗಿ ಪೋಸ್ ನೀಡಿದ್ದಾರೆ.
- Rajesh Duggumane
- Updated on: Jun 11, 2026
- 10:10 am
ಪತಿ ಬಗ್ಗೆ ಇರೋ ಆತಂಕ ಹೇಳಿದ ಅಮೃತವರ್ಷಿಣಿ ರಜಿನಿ
ನಟಿ ರಜಿನಿ ಹಾಗೂ ಅರುಣ್ ಗೌಡ ಅವರದ್ದು ಜಿಮ್‌ನಲ್ಲಿ ಮೊಳಕೆಯೊಡೆದ ಪ್ರೀತಿ. ಅರುಣ್ ಅವರು ವೃತ್ತಿಯಲ್ಲಿ ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ಹಾಗೂ ಬಾಡಿಬಿಲ್ಡರ್. ಇಬ್ಬರೂ ಫಿಟ್ನೆಸ್ ಫ್ರೀಕ್ಸ್ ಆಗಿದ್ದರಿಂದ ಆರಂಭದಲ್ಲಿ ಜಿಮ್‌ನಲ್ಲಿ ವರ್ಕೌಟ್ ಪಾರ್ಟ್ನರ್‌ಗಳಾಗಿ ಭೇಟಿಯಾಗಿದ್ದರು. ನಂತರ ಈ ಪರಿಚಯ ಗಾಢವಾದ ಸ್ನೇಹಕ್ಕೆ ತಿರುಗಿ, ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದರು.
- Rajesh Duggumane
- Updated on: Jun 11, 2026
- 8:38 am
ಬಾಲಯ್ಯ ಜನ್ಮದಿನಕ್ಕೆ ‘NBK 111’ ಧಮಾಕಾ: ‘ನ್ಯೂ ಏಜ್’ ಲುಕ್ನಲ್ಲಿ ಬಂದ ನಂದಮೂರಿ
ನಟ ಬಾಲಕೃಷ್ಣ ಅವರ 65ನೇ ಜನ್ಮದಿನಕ್ಕೆ NBK111 ಚಿತ್ರದ 'ಎಂಟ್ರಿ ಆಫ್ ಆನ್ ಎರಾ' ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅವರ ಹೊಸ, ಆಧುನಿಕ ಅವತಾರ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇದು ಗೋಪಿಚಂದ್ ಮಲಿನೇನಿ ನಿರ್ದೇಶನದ, ನಯನತಾರಾ ನಟನೆಯ, ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ತಮನ್ ಸಂಗೀತ, ಬೃಹತ್ ತಾರಾಗಣದ ಈ ಪ್ಯಾನ್-ಇಂಡಿಯಾ ಸಿನಿಮಾ ನವೆಂಬರ್ 20 ರಂದು ತೆರೆಗೆ ಬರಲಿದೆ.
- Rajesh Duggumane
- Updated on: Jun 11, 2026
- 7:39 am
75 ಲಕ್ಷ ರೂಪಾಯಿ ಪಡೆದರೂ ಪ್ರಚಾರಕ್ಕೆ ಅಸಹಕಾರ ತೋರಿದ ‘ರನ್ನ’ ನಟಿ ವರಲಕ್ಷ್ಮಿ?
ನಟಿ ವರಲಕ್ಷ್ಮಿ ಶರತ್‌ಕುಮಾರ್ ತೆಲುಗು ಚಿತ್ರರಂಗದಲ್ಲಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. 'ಪೋಲಿಸ್ ಕಂಪ್ಲೇಂಟ್' ನಿರ್ದೇಶಕರು ವರಲಕ್ಷ್ಮಿ ತಂಡಕ್ಕೆ ಸಹಕರಿಸುತ್ತಿಲ್ಲ, 75 ಲಕ್ಷ ಸಂಭಾವನೆ ಪಡೆದರೂ ಪ್ರಚಾರದಲ್ಲಿ ಕೇವಲ 40 ನಿಮಿಷ ಭಾಗವಹಿಸಿದ್ದಾರೆ, ಮತ್ತು ಡಬ್ಬಿಂಗ್ ವಿಳಂಬ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವರಲಕ್ಷ್ಮಿಗೆ ವಿವಾದಗಳು ಹೊಸದೇನಲ್ಲ, ಹಿಂದೆ 'ಎಸ್ ಸರಸ್ವತಿ' ಚಿತ್ರದ ಕಥೆಯ ಬದಲಾವಣೆ ಬಗ್ಗೆಯೂ ವಿವಾದವಾಗಿತ್ತು.
- Rajesh Duggumane
- Updated on: Jun 11, 2026
- 7:07 am
‘ಆಲ್ಫಾ’ ಚಿತ್ರದ ಮೂಲಕ ಆ್ಯಕ್ಷನ್ಗೆ ಇಳಿದ ನಟಿ ಆಲಿಯಾ ಭಟ್; ಇಲ್ಲಿದೆ ಟೀಸರ್
ನಟಿ ಆಲಿಯಾ ಭಟ್ ಸ್ಟಾರ್ ಕಿಡ್ ಆದರೂ, ತಮ್ಮ ಶ್ರಮದಿಂದ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಈಗ 'ಆಲ್ಫಾ' ಸಿನಿಮಾದಲ್ಲಿ ಆಕ್ಷನ್ ಅವತಾರ ತಾಳಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಭಾಗವಾಗಿರುವ ಈ ಮಹಿಳಾ ಪ್ರಧಾನ ಚಿತ್ರದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಬಾಬಿ ಡಿಯೋಲ್ ತಂದೆಯಾಗಿ ಆಲಿಯಾರನ್ನು ಮಿಷನ್‌ಗಾಗಿ ಸಿದ್ಧಪಡಿಸುವ ಕಥಾಹಂದರ ಕುತೂಹಲ ಮೂಡಿಸಿದೆ.
- Rajesh Duggumane
- Updated on: Jun 10, 2026
- 2:48 pm
ವಿಚ್ಛೇದನ ವದಂತಿಗೆ ಶುಭಾ ಪೂಂಜಾ ಸ್ಪಷ್ಟನೆ
ನನ್ನ ಸುದೀರ್ಘ ಸಿನಿಮಾ ಪಯಣ ಮತ್ತು ವೃತ್ತಿಜೀವನದುದ್ದಕ್ಕೂ ಮಾಧ್ಯಮ ಮಿತ್ರರು ನೀಡಿದ ಅಪಾರ ಬೆಂಬಲಕ್ಕೆ ಸದಾ ಕೃತಜ್ಞಳಾಗಿರುತ್ತೇನೆ ಎಂದು ಶುಭಾ ಹೇಳಿದ್ದಾರೆ.
- Rajesh Duggumane
- Updated on: Jun 10, 2026
- 1:22 pm
ರಜತ್ಗೆ ‘ಮಚ್’ ಬ್ರದರ್ ಎಂದ ವಿನಯ್ ಗೌಡ
ರಜತ್ಗೆ ‘ಮಚ್’ ಬ್ರದರ್ ಎಂದ ವಿನಯ್ ಗೌಡ‘ಬಲರಾಮನ ದಿನಗಳು’ ಸಿನಿಮಾದಲ್ಲಿ ವಿನಯ್ ನಟಿಸಿದ್ದಾರೆ.ಈ ಚಿತ್ರದಲ್ಲಿ ವಿನೊಧ್ ಪ್ರಭಾಕರ್ ನಟಿಸಿದ್ದಾರೆ. ಈ ಸಿನಿಮಾ ಗಮನ ಸೆಳೆಯುವ ಭರವಸೆ ಮೂಡಿಸಿದ್ದಾರೆ. ಈ ಚಿತ್ರದ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ವಿನಯ್ ಅವರು ವೈರಲ್ ಆಗಿರೋ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದಾರೆ.
- Rajesh Duggumane
- Updated on: Jun 10, 2026
- 12:41 pm
ವಿಚ್ಛೇದನ ವದಂತಿ ಬಗ್ಗೆ ಪೋಸ್ಟ್ ಹಾಕಿದ ನಟಿ ಶುಭಾ ಪೂಂಜಾ
ನಟಿ ಶುಭಾ ಪೂಂಜಾ ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅವರು ಮಾಧ್ಯಮ ಮತ್ತು ಅಭಿಮಾನಿಗಳಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಗೌಪ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬಕ್ಕೆ ಖಾಸಗಿತನ ಅತ್ಯಗತ್ಯ ಎಂದು ಹೇಳಿರುವ ಶುಭಾ, ಸೂಕ್ತ ಸಮಯದಲ್ಲಿ ತಾವೇ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
- Rajesh Duggumane
- Updated on: Jun 10, 2026
- 12:12 pm
ರುಕ್ಮಿಣಿ ವಸಂತ್ಗೆ ಮುಜುಗರ ತಂದವರಿಗೆ ನಡುಕ ಶುರು
ನಟಿ ರುಕ್ಮಿಣಿ ವಸಂತ್ ಅವರ ಅಶ್ಲೀಲ ಎಐ ಮಾರ್ಫ್ ಫೋಟೋ ಹಂಚಿದ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಸೈಬರ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
- Rajesh Duggumane
- Updated on: Jun 10, 2026
- 11:35 am