AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ

ಬಾಲಿವುಡ್‌ನ 'ಆಲ್ಫಾ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಭಾರಿ ವಿವಾದಕ್ಕೆ ಸಿಲುಕಿದೆ. ಆಲಿಯಾ ಭಟ್ ನಟನೆಯ ಈ ಚಿತ್ರದ ದೃಶ್ಯಗಳು 1990ರ ಫ್ರೆಂಚ್ ಸಿನಿಮಾ 'ಲಾ ಫೆಮ್ಮೆ ನಿಕಿತಾ' ಹಾಗೂ ಹಾಲಿವುಡ್‌ನ 'ಅಮೆರಿಕನ್ ಸ್ನೈಪರ್'‌ನ ಸಂಭಾಷಣೆಗಳನ್ನು ಕೃತಿಚೌರ್ಯ ಮಾಡಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ವೈಆರ್‌ಎಫ್‌ನ ಸೃಜನಶೀಲತೆಯ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ಕಾಪಿ ಕ್ಯಾಟ್ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಆಲಿಯಾ ಭಟ್ 'ಆಲ್ಫಾ' ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ
ಆಲಿಯಾ
ರಾಜೇಶ್ ದುಗ್ಗುಮನೆ
|

Updated on: Jun 11, 2026 | 12:12 PM

Share

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಅತ್ಯಂತ ಬಿಗ್ ಬಜೆಟ್‌ನ ಆ್ಯಕ್ಷನ್ ಚಿತ್ರ ‘ಆಲ್ಫಾ’ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಲಿಯಾ ಭಟ್ ಹಾಗೂ ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆದರೆ, ಈ ಟೀಸರ್ ಮೆಚ್ಚುಗೆ ಗಳಿಸುವುದಕ್ಕಿಂತ ಹೆಚ್ಚಾಗಿ ಟ್ರೋಲ್‌ಗಳಿಗೆ ಮತ್ತು ಕೃತಿ ಚೌಚರ್ಯದ ಆರೋಪ ಹೊತ್ತು ವಿವಾದಕ್ಕೆ ಸಿಲುಕಿದೆ. ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಈ ಚಿತ್ರವು 1990ರ ಪ್ರಸಿದ್ಧ ಫ್ರೆಂಚ್ ಥ್ರಿಲ್ಲರ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ ಚಿತ್ರದ ರಿಮೇಕ್ ಇರಬಹುದು ಎಂದು ಊಹಿಸಲಾಗಿದೆ.

ಟೀಸರ್‌ನ ಆರಂಭದಲ್ಲಿ ಬಾಬಿ ಡಿಯೋಲ್ ಮತ್ತು ಆಲಿಯಾ ಭಟ್ ಐಷಾರಾಮಿ ರೆಸ್ಟೋರೆಂಟ್‌ ಒಂದರಲ್ಲಿ ಊಟ ಮಾಡುತ್ತಿರುವ ದೃಶ್ಯವಿದೆ. ಆಲಿಯಾಗೆ 18ನೇ ವರ್ಷದ ಹುಟ್ಟುಹಬ್ಬದ ಶುಭಕೋರುವ ಬಾಬಿ ಡಿಯೋಲ್, ಒಂದು ಕಾರ್ಡ್ ನೀಡಿ ಅದರಲ್ಲಿರುವ ರೂಮ್ ನಂಬರ್ ತೋರಿಸಿ, ಇಷ್ಟು ವರ್ಷ ಪಡೆದ ತರಬೇತಿಯನ್ನು ಬಳಸಿಕೊಳ್ಳುವ ಸಮಯ ಬಂದಿದೆ ಎಂದು ಮೊದಲ ಮಿಷನ್ ನೀಡುತ್ತಾರೆ. ಈ ದೃಶ್ಯವೇ ಈಗ ವಿವಾದಕ್ಕೆ ಕಾರಣವಾಗಿದೆ. 1990ರ ಲ್ಯೂಕ್ ಬೆಸ್ಸನ್ ನಿರ್ದೇಶನದ ‘ಲಾ ಫೆಮ್ಮೆ ನಿಕಿತಾ’ ಚಿತ್ರದಲ್ಲೂ ಇಂತಹುದೇ ದೃಶ್ಯವಿದೆ. ಅಲ್ಲಿಯೂ ನಾಯಕಿಯನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ಹುಟ್ಟುಹಬ್ಬದ ಸೋಗಿನಲ್ಲಿ ಗನ್ ನೀಡಿ ಕೊಲೆ ಮಾಡಲು ಕಳುಹಿಸಲಾಗುತ್ತದೆ. ಈ ಎರಡೂ ದೃಶ್ಯಗಳನ್ನು ಹೋಲಿಸಿರುವ ನೆಟ್ಟಿಗರು, ಶೇಕಡಾ 90 ರಷ್ಟು ದೃಶ್ಯಗಳನ್ನು ಹಾಗೆಯೇ ನಕಲು ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಆಲ್ಫಾ ಚಿತ್ರದ ಆರಂಭದ ದೃಶ್ಯವನ್ನು ಫ್ರೆಂಚ್ ಕ್ಲಾಸಿಕ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ದಿಂದ ಮುಕ್ತವಾಗಿ ಕಾಪಿ ಮಾಡಲಾಗಿದೆ. ಕೇವಲ ದೃಶ್ಯ ಮಾತ್ರವಲ್ಲ, ಚಿತ್ರದ ಕಥೆಯೂ ಅದೇ ರೀತಿ ಇರುವಂತೆ ಕಾಣುತ್ತಿದೆ’ ಎಂದು ಬರೆಯಾಲಗಿದೆ. ಕೇವಲ ಫ್ರೆಂಚ್ ಚಿತ್ರ ಮಾತ್ರವಲ್ಲದೆ, ಹಾಲಿವುಡ್‌ನ ಮತ್ತೊಂದು ಪ್ರಸಿದ್ಧ ಚಿತ್ರದ ಸಂಭಾಷಣೆಯನ್ನೂ ಈ ಸಿನಿಮಾದಲ್ಲಿ ಕದಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಟೀಸರ್‌ನಲ್ಲಿ ಬಾಬಿ ಡಿಯೋಲ್ ಅವರು ಆಲಿಯಾಗೆ ತರಬೇತಿ ನೀಡುವಾಗ ‘ತೋಳ ಮತ್ತು ಕುರಿ’ಯ ಉದಾಹರಣೆ ನೀಡಿ ಮಾತನಾಡುವ ಡೈಲಾಗ್ ಇದೆ. ಇದು ಕ್ಲಿಂಟ್ ಈಸ್ಟ್‌ವುಡ್ ನಿರ್ದೇಶನದ, ಬ್ರಾಡ್ಲಿ ಕೂಪರ್ ನಟನೆಯ 2014ರ ಸೂಪರ್ ಹಿಟ್ ವಾರ್ ಡ್ರಾಮಾ ‘ಅಮೆರಿಕನ್ ಸ್ನೈಪರ್’ ಚಿತ್ರದ ಸಂಭಾಷಣೆಯನ್ನು ಹೋಲುತ್ತದೆ ಎಂದು ಸಿನಿಮಾ ಪ್ರೇಮಿಗಳು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ‘ಆಲ್ಫಾ’ ಚಿತ್ರದ ಮೂಲಕ ಆ್ಯಕ್ಷನ್​​ಗೆ ಇಳಿದ ನಟಿ ಆಲಿಯಾ ಭಟ್; ಇಲ್ಲಿದೆ ಟೀಸರ್

ಸ್ವಂತಿಕೆ ಇಲ್ಲದೆ ಬೇರೆ ದೇಶದ ಸಿನಿಮಾಗಳನ್ನು ಕಾಪಿ ಮಾಡುತ್ತಿರುವ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಬ್ಯಾನರ್ ಮತ್ತು ಸ್ಟಾರ್ ನಟರಿದ್ದರೂ ಕಥೆಗಾಗಿ ಬೇರೆ ಚಿತ್ರಗಳನ್ನು ಅವಲಂಬಿಸಿರುವುದು ಬಾಲಿವುಡ್‌ನ ಸೃಜನಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಟ್ರೋಲ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’