AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಲ್ಫಾ’ ಚಿತ್ರದ ಮೂಲಕ ಆ್ಯಕ್ಷನ್​​ಗೆ ಇಳಿದ ನಟಿ ಆಲಿಯಾ ಭಟ್; ಇಲ್ಲಿದೆ ಟೀಸರ್

ನಟಿ ಆಲಿಯಾ ಭಟ್ ಸ್ಟಾರ್ ಕಿಡ್ ಆದರೂ, ತಮ್ಮ ಶ್ರಮದಿಂದ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಈಗ 'ಆಲ್ಫಾ' ಸಿನಿಮಾದಲ್ಲಿ ಆಕ್ಷನ್ ಅವತಾರ ತಾಳಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಭಾಗವಾಗಿರುವ ಈ ಮಹಿಳಾ ಪ್ರಧಾನ ಚಿತ್ರದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಬಾಬಿ ಡಿಯೋಲ್ ತಂದೆಯಾಗಿ ಆಲಿಯಾರನ್ನು ಮಿಷನ್‌ಗಾಗಿ ಸಿದ್ಧಪಡಿಸುವ ಕಥಾಹಂದರ ಕುತೂಹಲ ಮೂಡಿಸಿದೆ.

‘ಆಲ್ಫಾ’ ಚಿತ್ರದ ಮೂಲಕ ಆ್ಯಕ್ಷನ್​​ಗೆ ಇಳಿದ ನಟಿ ಆಲಿಯಾ ಭಟ್; ಇಲ್ಲಿದೆ ಟೀಸರ್
ಆಲಿಯಾ
ರಾಜೇಶ್ ದುಗ್ಗುಮನೆ
|

Updated on: Jun 10, 2026 | 2:48 PM

Share

ನಟಿ ಆಲಿಯಾ ಭಟ್ ಅವರು ಸ್ಟಾರ್ ಕಿಡ್ ಆಗಿರಬಹುದು, ಆದರೆ, ತಮ್ಮನ್ನು ತಾವು ಸ್ಟಾರ್ ಕಿಡ್ ರೀತಿ ತೋರಿಸಿಕೊಂಡಿಲ್ಲ. ಅವರು ಕೇವಲ ಪಕ್ಕದ ಮನೆ ಹುಡುಗಿ ಪಾತ್ರ ಮಾಡದೆ, ಆ್ಯಕ್ಷನ್ ಸಿನಿಮಾಗಳ ಮೂಲಕವೂ ಮಿಂಚುತ್ತಾರೆ. ಸಾಕಷ್ಟು ಶ್ರಮ ಹಾಕಿ ಈ ಹಂತಕ್ಕೆ ಬಂದಿದ್ದಾರೆ. ಈಗ ಇದಕ್ಕೆ ಹೊಸ ಸೇರ್ಪಡೆ ‘ಆಲ್ಫಾ’. ಈ ಮಹಿಳಾ ಪ್ರಧಾನ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸ್ಪೈ ಯೂನಿವರ್ಸ್ ರಚನೆ ಮಾಡಿದೆ. ಇದರ ಅಡಿಯಲ್ಲಿ‘ವಾರ್ 2’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್​​ನಲ್ಲಿ ‘ಆಲ್ಫಾ’ ಸಿನಿಮಾ ಬರಲಿದೆ ಎಂಬ ಸೂಚನೆ ನೀಡಲಾಗಿತ್ತು. ಈಗ ಟೀಸರ್ ಅನಾವರಣ ಮಾಡುವ ಮೂಲಕ ಆಲಿಯಾ ಭಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಾಗಿದೆ.

ಬಾಬಿ ಡಿಯೋಲ್ ಹಾಗೂ ಆಲಿಯಾ ಭಟ್ ತಂದೆ-ಮಗಳ ಪಾತ್ರ ಮಾಡಿದ್ದಾರೆ. ಆಲಿಯಾ 18ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಬಾಬಿ ಡಿಯೋಲ್ ಪಾರ್ಟಿ ನೀಡುತ್ತಾರೆ. ಇಷ್ಟು ವರ್ಷ ನಡೆಸಿದ ಸಿದ್ಧತೆಯ ಕಾರಣ ಏನು ಎಂಬುದು ಅಲ್ಲಿ ರಿವೀಲ್ ಆಗುತ್ತದೆ. ಮಿಷನ್ ಒಂದಕ್ಕಾಗಿ ಆಲಿಯಾ ಅವರನ್ನ ಬಾಬಿ ಈ ರೀತಿ ಸಿದ್ಧ ಮಾಡಿರುತ್ತಾರೆ.

‘ಈ ಜಗತ್ತಲ್ಲಿ ಕುರಿ ಹಾಗೂ ನರಿ ಎರಡೇ ರೀತಿಯ ಜನ ಇರುತ್ತಾರೆ. ನಾನು ನರಿ. ನಿನ್ನದು ಯಾವ ವರ್ಗ’ ಎಂದು ಆಲಿಯಾಗೆ ಬಾಬಿ ಕೇಳುತ್ತಾರೆ. ಇದಕ್ಕೆ ನೇರವಾಗಿ ಉತ್ತರಿಸೋ ಆಲಿಯಾ, ‘ನರಿಯ ಮಗಳು ನರಿಯೇ ಆಗಿರುತ್ತಾಳೆ’ ಎನ್ನುತ್ತಾರೆ.

ಇದನ್ನೂ ಓದಿ: ‘ಯಾರೂ ನಿನ್ನನ್ನು ಗಮನಿಸಲಿಲ್ಲ’ ಎಂದು ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಖಡಕ್ ಉತ್ತರ

ಟೀಸರ್ ಉದ್ದಕ್ಕೂ ಆಲಿಯಾ ಆ್ಯಕ್ಷನ್ ಮೆರೆದಿದ್ದಾರೆ. ಆಲ್ಫಾ ಅನ್ನೋದು ಸೀಕ್ರೇಟ್ ಮಿಷನ್ ಎಂಬ ರೀತಿಯಲ್ಲಿ ಟೀಸರ್ ತೋರಿಸಲಾಗಿದೆ. ವಿಶೇಷ ಎಂದರೆ ಜುಲೈ 3ರಂದು ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಶಿವ್ ರವೈಲ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ