2022 ರಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಯಾವ ಕಂಪನಿಯದ್ದು ಗೊತ್ತಾ? ಮಾರುತಿ ಸುಜುಕಿ ಎಷ್ಟನೇ ಸ್ಥಾನದಲ್ಲಿದೆ?

ಭಾರತದಲ್ಲಿ ಅತೀ ಹೆಚ್ಚು ಕಾರುಗಳನ್ನ ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಕಾರು ತನ್ನ ಪ್ರಾಬಲ್ಯವನ್ನ ಮುಂದುವರೆಸಿದ್ದು, ಅದರಂತೆ 2022 ರಲ್ಲಿ ಜಗತ್ತಿನಾದ್ಯಂತ ಅತೀ ಹೆಚ್ಚು ಮಾರಾಟವಾದ ಕಾರುಗಳ ವರದಿ ಇಲ್ಲಿದೆ ನೋಡಿ.

2022 ರಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಯಾವ ಕಂಪನಿಯದ್ದು ಗೊತ್ತಾ? ಮಾರುತಿ ಸುಜುಕಿ ಎಷ್ಟನೇ ಸ್ಥಾನದಲ್ಲಿದೆ?
ಪ್ರಾತಿನಿಧಿಕ ಚಿತ್ರ
Follow us
|

Updated on: May 11, 2023 | 1:40 PM

ಕಾರುಗಳ ಬಗ್ಗೆ ಯಾರಿಗೆ ತಾನೇ ಕ್ರೇಜ್​ ಇರೋದಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಕಾರುಗಳ ಬಗೆಗೆ ಆಸಕ್ತಿ ಇರುತ್ತದೆ. ಅದರಂತೆ ಭಾರತದಲ್ಲಿ ಅತೀ ಹೆಚ್ಚು ಕಾರುಗಳನ್ನ ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ (Maruti Suzuki) ಕಾರು ತನ್ನ ಪ್ರಾಬಲ್ಯವನ್ನ ಮುಂದುವರೆಸಿದೆ. ಹೌದು ಕಳೆದ 2022 ರ ನವೆಂಬರ್​ನಲ್ಲಿ ಮಾರುತಿ ಸುಜುಕಿಯವರ ಬಲೆನೋ ಕಾರು ಅತೀ ಹೆಚ್ಚು ಮಾರಾಟವಾಗಿತ್ತು. ಅದರಂತೆ 2022 ರಲ್ಲಿ ಜಗತ್ತಿನಾದ್ಯಂತ ಅತೀ ಹೆಚ್ಚು ಮಾರಾಟವಾದ ಕಾರುಗಳ ವರದಿ ಇಲ್ಲಿದೆ ನೋಡಿ.

1. ಟೊಯೋಟಾ (Toyota)

ಟೊಯೋಟಾ 2022 ರಲ್ಲಿ ವಿಶ್ವಾದಾದ್ಯಂತ ಸೇಲ್​ ಆದ ಕಾರುಗಳಲ್ಲಿ ನಂ.1 ಸ್ಥಾನದಲ್ಲಿದೆ. ಜಪಾನ್​ ಕಂಪನಿಯಾದ ಇದನ್ನ 1933 ರಲ್ಲಿ ಕಿಚಿರೋ ಟೊಯೋಡಾ ಅವರು ಪ್ರಾರಂಭಿಸಿದರು. 2020 ರಲ್ಲಿ ಜಗತ್ತಿನಾದ್ಯಂತ ಬರೊಬ್ಬರಿ 9,528,753 ಕಾರ್​ಗಳು ಸೇಲ್​ ಆಗಿದ್ದವು. ಬಳಿಕ 2021 ರಲ್ಲಿ 1% ಎರಿಕೆಯಾಗಿ 9,562,483 ಮಾರಾಟವಾಗಿದ್ದು, 2022 ರಲ್ಲಿಯೂ ಕೂಡ 1 ಪ್ರತಿಶತ ಎರಿಕೆಯಾಗಿ 9,566,961 ಕಾರುಗಳು ಮಾರಾಟವಾಗುವ ಮೂಲಕ ಜಗತ್ತೀನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿದೆ.

2.ವೋಕ್ಸ್​ವ್ಯಾಗನ್ (Volkswagen)

ಹೌದು 2022 ರಲ್ಲಿ ಜಗತ್ತೀನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಜರ್ಮನಿ ಮೂಲದ ವೋಕ್ಸ್​ವ್ಯಾಗನ್ ಎರಡನೇ ಸ್ಥಾನದಲ್ಲಿದೆ. ಜರ್ಮನ್ ಲೇಬರ್ ಫ್ರಂಟ್‌ನಿಂದ 1937 ರಲ್ಲಿ ಸ್ಥಾಪಿಸಲಾಯಿತು. 2020 ರಲ್ಲಿ 9,305,427 ಮತ್ತು 2021 ರಲ್ಲಿ 5% ಎರಿಕೆಯಾಗಿ ಬರೊಬ್ಬರಿ 8,882,346 ಕಾರುಗಳು ಮಾರಾಟವಾಗಿದ್ದವು. 2022ರಲ್ಲಿ ಮತ್ತೆ 7% ಪ್ರತಿಶತ ಎರಿಕೆಯಾಗುವ ಮೂಲಕ 8,263,104 ಕಾರುಗಳನ್ನ ಮಾರಾಟ ಮಾಡಿದವು.

ಇದನ್ನೂ ಓದಿ:Maruti Suzuki Offers: ಮಾರುತಿ ಸುಜುಕಿ ಇಂಡಿಯಾ ನೆಕ್ಸಾನಲ್ಲಿ 44,000 ರೂ.ವರೆಗೆ ರಿಯಾಯಿತಿ

3. ಹುಂಡೈ ಮತ್ತು ಕಿಯಾ (Hyundai Kia)

ಎರಡು ದಕ್ಷಿಣ ಕೊರಿಯಾ ಕಂಪನಿಗಳಾಗಿದ್ದು 1998 ರಲ್ಲಿ ಎರಡು ಸೇರಿಕೊಳ್ಳುತ್ತವೆ. ಕಿಯಾ ಕಂಪನಿಯನ್ನ 1944 ರಲ್ಲಿ ಸ್ಥಾಪನೆ ಮಾಡಿದರೆ, ಹುಂಡೈ ಕಂಪನಿಯು 1967 ರಲ್ಲಿ ಸ್ಥಾಪನೆ ಮಾಡಲಾಗುತ್ತದೆ. 2020 ರಲ್ಲಿ 6,353,514ಕಾರುಗಳನ್ನ ಮಾಡಿದರೆ, 2021 ರಲ್ಲಿ 5% ಪ್ರತಿಶತ ಎರಿಕೆಯೊಂದಿಗೆ 6,668,037 ಕಾರುಗಳು, ಹಾಗೂ 2022 ರಲ್ಲಿ ಮತ್ತೆ 3% ಪ್ರತಿಶತ ಏರಿಕೆಯಾಗಿ 6,848,198 ಕಾರುಗಳು ಮಾರಾಟವಾಗುತ್ತದೆ. ಈ ಮೂಲಕ ವಿಶ್ವದಾದ್ಯಂತ ಅತೀ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

4. ಸ್ಟೆಲ್ಲಂಟಿಸ್ (Stellantis)

ನೆದರ್​ಲ್ಯಾಂಡ್​ ಕಂಪನಿಯಾದ ಇದನ್ನ 2021 ಜನವರಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಸ್ಥಾಪನೆಯಾದ ಎರಡೆ ವರ್ಷಗಳಲ್ಲಿ ಜಗತ್ತೀನಾದ್ಯಂತ ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 2020 ರಲ್ಲಿ 6,205,996 ಕಾರುಗಳು, 2021 ರಲ್ಲಿ 1% ಪ್ರತಿಶತ ಹೆಚ್ಚಳದೊಂದಿಗೆ 6,142,200 ಕಾರುಗಳು ಮಾರಾಟವಾಗಿದ್ದವು, ಬಳಿಕ 2022 ರಲ್ಲಿ 2% ಪ್ರತಿಶತ ಹೆಚ್ಚಳದೊಂದಿಗೆ 6,002,900 ಕಾರುಗಳನ್ನು ಮಾರಾಟ ಮಾಡುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:Maruti Suzuki: ಮಾರುತಿ ಸುಜುಕಿ ಹೊಸ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿ ರಿವ್ಯೂ

5. ಜನರಲ್ ಮೋಟರ್ಸ್(GM)

ಜನರಲ್ ಮೋಟರ್ಸ್ ಅಮೆರಿಕ ದೇಶದ ಮಿಷಿಗನ್ ರಾಜ್ಯದ ಡೆಟ್ರಾಯ್ಟ್ ನಗರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಈ ಕಂಪನಿ 1908 ರಲ್ಲಿ ಸ್ಥಾಪಿಸಲಾಯಿತು. 2020ರಲ್ಲಿ 6,833,592 ಮಾತ್ರ ಕಾರು ಮಾರಾಟ ಮಾಡಿದ್ದ ಈ ಕಂಪನಿ ಬಳಿಕ ಬರೊಬ್ಬರಿ 8% ಪ್ರತಿಶತ ಎರಿಕೆ ಕಾಣುವ ಮೂಲಕ 6,294,385 ಕಾರುಗಳನ್ನ ಮಾರಾಟ ಮಾಡಿತು. ಇದಾದ ನಂತರ 2022 ರಲ್ಲಿ 6% ಇಳಿಕೆಯಾಗುವ ಮೂಲಕ 5,941,737 ಕಾರುಗಳನ್ನ ಮಾರಾಟ ಮಾಡುವ ಮೂಲಕ ಐದನೇ ಸ್ಥಾನದಲ್ಲಿದೆ.

ಮಾರುತಿ ಸುಜುಕಿ(Maruti Suzuki)

ಇನ್ನು ಮುಖ್ಯವಾಗಿ ಭಾರತದ ಪ್ರಮುಖ ಕಾರು ಕಂಪನಿಗಳಲ್ಲೊಂದಾದ ಮಾರುತಿ ಹಾಗೂ ಸುಜುಕಿ ಕಂಪನಿಯು 2012 ಜುಲೈ 12 ರಂದು ಎರಡು ಕಂಪನಿಗಳು ಸೇರಿಕೊಂಡವು, ಇನ್ನು ಮಾರುತಿ ಕಂಪನಿಯನ್ನ 1982 ರಲ್ಲಿ ಸ್ಥಾಪಿಸಲಾಯಿತು. 1955 ರಲ್ಲಿ ಸುಜುಕಿ ಕಂಪನಿಯು ಕಾರು ತಯಾರಿಸಲು ಶುರುಮಾಡಿತು. 2020 ರಲ್ಲಿ 1,457,861 ಕಾರುಗಳನ್ನ, 2021 ರಲ್ಲಿ 13% ಪ್ರತಿಶತ ಎರಿಕೆಯೊಂದಿಗೆ 1,652,653 ಕಾರುಗಳನ್ನ ಹಾಗೂ 2022 ರಲ್ಲಿ 13% ಏರಿಕೆಯಾಗಿ 1,940,067 ಕಾರುಗಳು ಮಾರಾಟವಾಗಿವೆ. ಈ ಮೂಲಕ ಜಗತ್ತೀನಾದ್ಯಂತ ಅತೀ ಹೆಚ್ಚು ಮಾರಾಟವಾದ ಕಾರು ಕಂಪನಿಗಳ ಪೈಕಿ 13ನೇ ಸ್ಥಾನದಲ್ಲಿದೆ. ಇನ್ನು ನಂತರದ ಸ್ಥಾನದಲ್ಲಿ ಚೀನಾದ ಗೀಲಿ, ಅಮೆರಿಕಾದ ಟೆಸ್ಲಾ ಕಂಪನಿಗಳು ಇವೆ.

ಇನ್ನಷ್ಟು ಆಟೋಮೊಬೈಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ