Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್, ಆಟೊಮೊಬೈಲ್ ವಲಯ ಜಿಗಿತ
01:15ಕ್ಕೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ BSE 1,511 ಅಂಶಗಳಷ್ಟು ಏರಿಕೆ ಕಂಡಿದ್ದು 47,796.96 ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ NIFTY 394.35 ಅಂಶಗಳಷ್ಟು ಏರಿಕೆ ದಾಖಲಿಸಿದೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಮಾರು ಎರಡು ಗಂಟೆ ಕಾಲ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಕೆಲ ಷೇರುಗಳ ಮೌಲ್ಯ ಭಾರೀ ಏರಿಕೆ ಕಂಡಿದೆ.
ಮಧ್ಯಾಹ್ನ 01:15ಕ್ಕೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ BSE 1,511 ಅಂಶಗಳಷ್ಟು ಏರಿಕೆ ಕಂಡಿದ್ದು 47,796.96 ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ NIFTY 394.35 ಅಂಶಗಳಷ್ಟು ಏರಿಕೆ ದಾಖಲಿಸಿದೆ. 14,042.95 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಇನ್ನು ನಿಫ್ಟಿ ಬ್ಯಾಂಕ್ 1725 ಅಂಕ ಏರಿಕೆ ಕಂಡು 32,241 ಆಗಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ ₹ 20 ಸಾವಿರ ಕೋಟಿ ಬಂಡವಾಳ ಮರುಪೂರಣ ಮಾಡುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಬ್ಯಾಂಕ್ ಷೇರುಗಳು ಭಾರೀ ಏರಿಕೆ ಕಂಡಿವೆ.
ಹಳೆಯದಾದ ಮತ್ತು ಮಾಲಿನ್ಯಕಾರಕ ವಾಹನಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಇಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಹೊಸ ನೀತಿ ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ ಆಟೋ ಮೊಬೈಲ್ ಷೇರುಗಳ ಬೆಲೆ ಹೆಚ್ಚಿದೆ.
Budget 2021 | ಹಳೆಯ, ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಲು ಹೊಸ ನೀತಿ ಘೋಷಿಸಿದ ನಿರ್ಮಲಾ ಸೀತಾರಾಮನ್
Budget 2021: ಬಜೆಟ್ ಮಂಡನೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಆರಂಭ




