Honda Cars: ಹೋಂಡಾ ಕಾರುಗಳ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಣೆ ಮಾಡಿದ್ದು, ಸಿಟಿ ಸೆಡಾನ್, ಅಮೇಜ್ ಮತ್ತು ಎಲಿವೇಟ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದೆ.
ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ (Honda Cars) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಮೇ ಅವಧಿಯ ಆಫರ್ ನೀಡುತ್ತಿದ್ದು, ಸಿಟಿ ಸೆಡಾನ್, ಅಮೇಜ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಎಲಿವೇಟ್ ಎಸ್ ಯುವಿ ಕಾರುಗಳ ಮೇಲೆ ವಿವಿಧ ಆಫರ್ ಗಳನ್ನು ನೀಡುತ್ತಿದೆ.
ಹೊಸ ಆಫರ್ ಗಳಲ್ಲಿ ಸಿಟಿ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು 1.15 ಲಕ್ಷ ಮೌಲ್ಯದ ಆಫರ್ ನೀಡುತ್ತಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದ್ದು, ಜೆಡ್ಎಕ್ಸ್ ವೆರಿಯೆಂಟ್ ಮೇಲೆ ಹೆಚ್ಚಿನ ಮಟ್ಟದ ಆಫರ್ ಪಡೆದುಕೊಳ್ಳಬಹುದಾಗಿದೆ. ಸಿಟಿ ಕಾರಿನ ಪೆಟ್ರೋಲ್ ಆವೃತ್ತಿಯ ಜೊತೆ ಹೈಬ್ರಿಡ್ ಮಾದರಿಯ ಮೇಲೂ ಹೋಂಡಾ ಕಂಪನಿಯು ವಿವಿಧ ಆಫರ್ ನೀಡುತ್ತಿದೆ.
ಸಿಟಿ ಹೈಬ್ರಿಡ್ ಖರೀದಿಸುವ ಗ್ರಾಹಕರಿಗೆ ರೂ. 65 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದ್ದು, ಸೆಡಾನ್ ಆವೃತ್ತಿ ಖರೀದಿಸುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.ಸದ್ಯ ಮಾರುಕಟ್ಟೆಯಲ್ಲಿ 1.5 ಲೀಟರ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿರುವ ಸಿಟಿ ಸೆಡಾನ್ ಕಾರು ಮಾದರಿಯು 121 ಹಾರ್ಸ್ ಪವರ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಸಿಟಿವಿ ಗೇರ್ ಬಾಕ್ಸ್ ಆಯ್ಕೆ ಲಭ್ಯವಿರುತ್ತದೆ.
ಇದನ್ನೂ ಓದಿ: 7 ಸೀಟರ್ ಸೌಲಭ್ಯದೊಂದಿಗೆ ಹೊಸ ಫೋರ್ಸ್ ಗೂರ್ಖಾ ಬಿಡುಗಡೆ
ಸಿಟಿ ಸೆಡಾನ್ ನಂತರ ಹೋಂಡಾ ಕಂಪನಿಯು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಉತ್ತಮ ಆಫರ್ ನೀಡುತ್ತಿದೆ. ಅಮೇಜ್ ಕಾರಿನ 2023ರ ಆವೃತ್ತಿಯ ಮೇಲೆ ರೂ. 96 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದ್ದರೆ 2024ರ ಆವೃತ್ತಿಯ ಇ, ಎಸ್, ವಿಎಕ್ಸ್ ವೆರಿಯೆಂಟ್ ಗಳ ಮೇಲೆ ರೂ. ರೂ.56 ಸಾವಿರದಿಂದ ರೂ. 66 ಸಾವಿರ ತನಕ ಆಫರ್ ನೀಡಲಾಗುತ್ತಿದೆ. ಅಮೇಜ್ ಕಾರು ಮಾದರಿಯು ಸದ್ಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 90 ಹಾರ್ಸ್ ಉತ್ಪಾದಿಸುವ ಉತ್ತಮ ಇಂಧನ ದಕ್ಷತೆ ಹೊಂದಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇನ್ನು ಹೋಂಡಾ ಕಂಪನಿಯ ಎಲಿವೇಟ್ ಕಾರಿನ ಮೇಲೂ ಉತ್ತಮ ಆಫರ್ ನೀಡುತ್ತಿದ್ದು, ಎಲೆವೇಟ್ ಕಾರು ಖರೀದಿಸುವ ಗ್ರಾಹಕರಿಗೆ ರೂ. 55 ಸಾವಿರ ಮೌಲ್ಯದ ಆಫರ್ ಸಿಗಲಿದೆ. ಎಲಿವೇಟ್ ಕಾರಿನ ವಿ ವೆರಿಯೆಂಟ್ ಮೇಲೆ ರೂ. 55 ಸಾವಿರ ಮೌಲ್ಯದ ಆಫರ್ ಗಳು ಲಭ್ಯವಿದ್ದರೆ ಜೆಡ್ಎಕ್ಸ್ ವೆರಿಯೆಂಟ್ ಮೇಲೆ ರೂ. 25 ಸಾವಿರ ಮೌಲ್ಯದ ಆಫರ್ ಪಡೆದುಕೊಳ್ಳಬಹುದಾಗಿದೆ.