ಭರ್ಜರಿ ಮೈಲೇಜ್ ಪ್ರೇರಿತ ಇಕ್ಯೂಎ ಮತ್ತು ಇಕ್ಯೂಬಿ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಹೊಸ ಇಕ್ಯೂಎ ಮತ್ತು ಇಕ್ಯೂಬಿ ಫೇಸ್ ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ಭರ್ಜರಿ ಮೈಲೇಜ್ ಪ್ರೇರಿತ ಇಕ್ಯೂಎ ಮತ್ತು ಇಕ್ಯೂಬಿ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್
ಮರ್ಸಿಡಿಸ್ ಬೆಂಝ್ ಇಕ್ಯೂಎ ಮತ್ತು ಇಕ್ಯೂಬಿ ಫೇಸ್ ಲಿಫ್ಟ್
Follow us
Praveen Sannamani
|

Updated on: Jul 08, 2024 | 7:04 PM

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ (Mercedes Benz) ತನ್ನ ಬಹುನೀರಿಕ್ಷಿತ ಇಕ್ಯೂಎ ಮತ್ತು ಇಕ್ಯೂಬಿ ಫೇಸ್ ಲಿಫ್ಟ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಎಕ್ಸ್ ಶೋರೂಂ ಪ್ರಕಾರ ಇಕ್ಯೂಎ ರೂ. 66 ಲಕ್ಷ ಮತ್ತು ಇಕ್ಯೂಬಿ ರೂ. 70.90 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಗಳು ಈ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ ಪ್ರೇರಿತ ಸುಧಾರಿತ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಐಷಾರಾಮಿ ಕಾರು ವಿಭಾಗದಲ್ಲಿ ಇವು ಹೊಸ ಸಂಚಲನ ಮೂಡಿಸಲಿವೆ.

ಮರ್ಸಿಡಿಸ್ ಬೆಂಝ್ ಇಕ್ಯೂಎ ಕುರಿತು ಹೇಳುವುದಾರರೇ, ಈ ಹೊಸ ಕಾರು ಮಾದರಿಯು ಮರ್ಸಿಡಿಸ್ ಬೆಂಝ್ ನಿರ್ಮಾಣದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಇದು 70.5kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಮೂಲಕ ಇದು 190 ಹಾರ್ಸ್ ಪವರ್ ಮತ್ತು 385 ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಪ್ರತಿ ಚಾರ್ಜ್ ಗೆ ಗರಿಷ್ಠ 560 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇಕ್ಯೂಎ ಇವಿ ಕಾರು ಮಾದರಿಯು 100kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಇದು 11kW ಎಸಿ ಚಾರ್ಜರ್ ಮೂಲಕ 7 ಗಂಟೆ 15 ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಹಾಗೆಯೇ ಹೊಸ ಕಾರು 8.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಲಿದ್ದು, ಇದು ಗಂಟೆಗೆ ಗರಿಷ್ಠ 160 ಕಿ.ಮೀ ಟಾಪ್ ಸ್ಪೀಡ್ ನಲ್ಲಿ ಚಾಲನೆಗೊಳ್ಳುತ್ತದೆ. ಇದರೊಂದಿಗೆ ಹೊಸ ಕಾರು ಮಾದರಿಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಿದ್ದು, ಹೊಸ ಕಾರಿನಲ್ಲಿ ಸ್ಪೋರ್ಟಿಯಾಗಿರುವ 19 ಇಂಚಿನ ಎಎಂಜಿ ಪ್ರೇರಿತ ಅಲಾಯ್ ವ್ಹೀಲ್ ಗಳು, ಮರ್ಸಿಡಿಸ್ ಹೊಸ ಆಪರೇಟಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಇನ್ನು ಮರ್ಸಿಡಿಸ್ ಬೆಂಝ್ ನಿರ್ಮಾಣದ ಇಕ್ಯೂಬಿ ಫೇಸ್ ಲಿಫ್ಟ್ ಕೂಡಾ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ಇಕ್ಯೂಬಿ ಮಾದರಿಯು ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಈ ಹಿಂದಿನ ಮಾದರಿಗಿಂತಲೂ 112 ಕಿ.ಮೀ ಹೆಚ್ಚುವರಿ ಮೈಲೇಜ್ ಖಾತ್ರಿಪಡಿಸುತ್ತದೆ. ಇಕ್ಯೂಬಿ ಕಾರಿನ ಆರಂಭಿಕ ಮಾದರಿಯಾದ 250 ಪ್ಲಸ್ ವೆರಿಯೆಂಟ್ 7 ಸೀಟರ್ ಸೌಲಭ್ಯದೊಂದಿಗೆ ರೂ. 70.90 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದರೆ 350 4 ಮ್ಯಾಟಿಕ್ 5 ಸೀಟರ್ ಹೊಂದಿರುವ ಟಾಪ್ ಎಂಡ್ ವೆರಿಯೆಂಟ್ ರೂ. 77.50 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿರುವ 250 ಪ್ಲಸ್ ವೆರಿಯೆಂಟ್ 7 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಹಲವು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ. ಆದರೆ 350 4 ಮ್ಯಾಟಿಕ್ 5 ಸೀಟರ್ ಹೊಂದಿರುವ ಟಾಪ್ ಎಂಡ್ ಮಾದರಿಯು 250 ಪ್ಲಸ್ ವೆರಿಯೆಂಟ್ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದು 4 ಮ್ಯಾಟಿಕ್ ಡ್ರೈವ್ ಸಿಸ್ಟಂ ಸೇರಿದಂತೆ ಮರ್ಸಿಡಿಸ್ ಹೊಸ ಎಂಬಿಯುಎಕ್ಸ್ ಇನ್ಪೋಟೈನ್ ಮೆಂಟ್ ಇಂಟರ್ ಫೇಸ್, ಬರ್ಮಸ್ಟೆರ್ ಸೌಂಡ್ ಸಿಸ್ಟಂ, ಡಾಬ್ಲಿ ಅಟಾಮಸ್, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕಂಟ್ರೋಲ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಹೊಂದಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ 200 ಐಷಾರಾಮಿ ಇವಿ ಕಾರುಗಳನ್ನು ವಿತರಿಸಿದ ಬಿವೈಡಿ

ಇಕ್ಯೂಬಿ ಕಾರಿನ 250 ಪ್ಲಸ್ ವೆರಿಯೆಂಟ್ 70.5kWh ಬ್ಯಾಟರಿ ಜೊತೆಗೆ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಇದು 190 ಹಾರ್ಸ್ ಪವರ್, 385 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 447 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ದೊಡ್ಡ ಗಾತ್ರ ಬ್ಯಾಟರಿ ಆಯ್ಕೆ ಹೊಂದಿರುವ 350 4 ಮ್ಯಾಟಿಕ್ ವೆರಿಯೆಂಟ್ 292 ಹಾರ್ಸ್ ಪವರ್, 520 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 535 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಕಾರು 100kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಇವು ವೊಲ್ವೊ ಎಕ್ಸ್ ಸಿ40 ರೀಚಾರ್ಜ್, ಬಿಎಂಡಬ್ಲ್ಯು ಎಕ್ಸ್1 ಸೇರಿದಂತೆ ವಿವಿಧ ಐಷಾರಾಮಿ ಇವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿವೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ