Top 10 Cars: 2022ರಲ್ಲಿ ಬಿಡುಗಡೆಯಾದ ಟಾಪ್ 10 ಜನಪ್ರಿಯ ಕಾರುಗಳಿವು!
2022ರ ಅವಧಿಯಲ್ಲಿ ಹಲವಾರು ಹೊಸ ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ಇದರಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಾಪ್ 10 ಕಾರುಗಳ ಮಾಹಿತಿ ಇಲ್ಲಿದೆ.
ಕೋವಿಡ್ ಪರಿಣಾಮ ತಗ್ಗಿದ್ದ ಹೊಸ ಕಾರುಗಳ(New Cars) ಮಾರಾಟ ಇದೀಗ ಸಾಕಷ್ಟು ಸುಧಾರಿಸಿದೆ. ಇದೇ ಕಾರಣಕ್ಕೆ ಹಲವಾರು ಹೊಸ ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ. 2022ರ ಅವಧಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಹೊಸ ಕಾರುಗಳು ಬಿಡುಗಡೆಗೊಂಡಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಸಿಎನ್ ಜಿ, ಹೈಬ್ರಿಡ್, ಎಲೆಕ್ಟ್ರಿಕ್ ಕಾರುಗಳ ಸಹ ಬಿಡುಗಡೆಗೊಂಡಿವೆ.
ಕಿಯಾ ಕಾರೆನ್ಸ್ ಎಂಪಿವಿ
ಕಾರೆನ್ಸ್ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದರಲ್ಲಿ 1.5 ಲೀಟರ್ ಎನ್ಎ ಪೆಟ್ರೋಲ್, 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಹೊಸ ಕಾರು ಮಾದರಿಯು ಎಂಪಿವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಸ್ಕೋಡಾ ಸ್ಲಾವಿಯಾ
ಸೆಡಾನ್ ಕಾರು ಮಾದರಿಗಳಲ್ಲಿ ಸ್ಕೋಡಾ ಸ್ಲಾವಿಯಾ ಕಾರು ಹೊಸ ಆಯ್ಕೆಯಾಗಿದೆ. ಇದು 1.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದು ಪ್ರಮುಖ ಸೆಡಾನ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಇದು ಫೋಕ್ಸ್ ವ್ಯಾಗನ್ ವರ್ಟಸ್ ಸೆಡಾನ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಎರಡು ಕಾರುಗಳಲ್ಲೂ ಒಂದೇ ಎಂಜಿನ್ ಆಯ್ಕೆಯಿದೆ.
ಇದನ್ನೂ ಓದಿ: ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರುಗಳಿವು!
ಹೋಂಡಾ ಸಿಟಿ ಹೈಬ್ರಿಡ್
ಹೊಸ ಕಾರುಗಳ ಮಾದರಿಯಲ್ಲಿ ಹೋಂಡಾ ಹೊಸ ಸಿಟಿ ಹೈಬ್ರಿಡ್ ಕೂಡಾ ಪ್ರಮುಖ ಮಾದರಿಯಾಗಿದೆ. ಇದು ಟಾಪ್-ಸ್ಪೆಕ್ ಜೆಡ್ಎಕ್ಸ್ ಆಧರಿಸಿ ಬಿಡುಗಡೆಯಾಗಿದ್ದು, ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಂಡಿದೆ. ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ಶೇ. 40 ರಷ್ಟು ಹೆಚ್ಚು ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಗೆ 26.5 ಕಿ.ಮೀ ಮೈಲೇಜ್ ನೀಡುತ್ತದೆ.
ಸಿಟ್ರನ್ ಸಿ3
ಸಿಟ್ರನ್ ಹೊಸ ಮೈಕ್ರೊ ಎಸ್‌ಯುವಿಯಾಗಿರುವ ಸಿ3 ಕಾರು ಎಂಟ್ರಿ ಲೆವಲ್ ಕಾರುಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಟಾಟಾ ಪಂಚ್ ಕಾರಿಗೆ ಉತ್ತಮ ಪೈಪೋಟಿಯಾಗಿದೆ. ಹೊಸ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಹೊಂದಿರುವ 1.2-ಲೀಟರ್ ಎನ್ಎ ಪೆಟ್ರೋಲ್ ಮತ್ತು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್
2022ರ ಹೊಸ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಹೊಸ ತಲೆಮಾರಿನ ಸ್ಕಾರ್ಪಿಯೋ ಎನ್ ಕೂಡಾ ಪ್ರಮುಖ ಕಾರು ಮಾದರಿಯಾಗಿದೆ. ಇದು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿದೆ. ಇದರಲ್ಲಿ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇದು ಮಧ್ಯಮ ಕ್ರಮಾಂಕದ ಎಸ್ ಯುವಿ ಗಳಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.
ಬಿವೈಡಿ ಅಟ್ಟೊ 3 ಇವಿ
ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಸದ್ಯ ಹೊಸ ಸಂಚಲನ ಮೂಡಿಸಿರುವ ಬಿವೈಡಿ ಕಂಪನಿಯು ಇದೀಗ ತನ್ನ ಎರಡನೇ ಇವಿ ಕಾರು ಮಾದರಿಯಾಗ ಅಟ್ಟೊ 3 ಬಿಡುಗಡೆ ಮಾಡಿದೆ. ಇದು 60.48 kWh ಬ್ಲೇಡ್ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 521 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಇದರಲ್ಲಿ ಎಡಿಎಎಸ್ ಸೌಲಭ್ಯ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ 1,500 ಕ್ಕೂ ಹೆಚ್ಚು ಯುನಿಟ್ ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ.
ಜೀಪ್ ಮೆರಿಡಿಯನ್
ಹೊಸ ಜೀಪ್ ಮೆರಿಡಿಯನ್ ಎಸ್ ಯುವಿಯು ಟೊಯೊಟಾ ಫಾರ್ಚೂನರ್ ಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಇದು ಮೂರು ಸಾಲಿನ ಆಸನ ಸೌಲಭ್ಯದೊಂದಿಗೆ 7 ಸೀಟರ್ ಮಾದರಿಯಾಗಿದೆ. ಇದರಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ. ಇದು ಲೈಫ್ ಸ್ಟೈಲ್ ಜೊತೆಗೆ ಆಫ್ ರೋಡ್ ಮಾದರಿಯಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಡಿಸ್ಕೌಂಟ್
ಟೊಯೊಟಾ ಹೈಲಕ್ಸ್
ಈ ವರ್ಷ ಬಿಡುಗಡೆಯಾದ ಪ್ರಮುಖ ಕಾರುಗಳಲ್ಲಿ ಟೊಯೊಟಾ ಹೈಲಕ್ಸ್ ಕೂಡಾ ಒಂದಾಗಿದೆ. ಇದು ಸ್ಟ್ಯಾಂಡರ್ಡ್ ಮತ್ತು 4×4 ಹೈ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಪಿಕ್ಅಪ್ ನಲ್ಲಿ ಫಾರ್ಚೂನರ್ ಮಾದರಿಯಲ್ಲಿರುವ 2.8 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇದು ಅತ್ಯುತ್ತಮ ಆಫ್ ರೋಡ್ ಕಾರು ಮಾದರಿಯಾಗಿದ್ದು, ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿದೆ.
ಲ್ಯಾಂಡ್ ರೋವರ್ ಹೊಸ ರೇಂಜ್ ರೋವರ್
ಬಿಡುಗಡೆಯಾದ ಹೊಸ ಎಸ್‍ಯುವಿ ಕಾರುಗಳಲ್ಲಿ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ ಕೂಡಾ ಒಂದಾಗಿದೆ. ಹೊಸ ಕಾರಿನಲ್ಲಿ 3.0 ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 3.0 ಲೀಟರ್ ಟರ್ಬೊ ಡೀಸೆಲ್ ಮತ್ತು 4.4 ಲೀಟರ್ ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳಿವೆ.
ಟಾಟಾ ಟಿಗೋರ್ ಮತ್ತು ಟಿಯಾಗೋ ಸಿಎನ್ ಜಿ
ಹೊಸ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಿಎನ್ ಜಿ ಆವೃತ್ತಿಗಳ ಮೇಲೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಹೊಸ ಸಿಎನ್ ಜಿ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಹೊಸ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್ ಜಿ ಕಿಟ್ ಹೊಂದಿದ್ದು, ಈ ಮೂಲಕ ಎರಡು ಕಾರುಗಳು ಪ್ರತಿ ಕೆಜಿ ಸಿಎನ್ ಜಿ ಗೆ 26 ರಿಂದ 29 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.
Published On - 5:58 pm, Thu, 22 December 22