Scrapping Policy: ಸರ್ಕಾರಕ್ಕಿಲ್ಲ ಮುತುವರ್ಜಿ; ಹಳೆಯ ವಾಹನಗಳ ಸ್ಕ್ರ್ಯಾಪಿಂಗ್ ಯೋಜನೆಗೆ ರಹದಾರಿ ಯಾವುದಯ್ಯಾ!?
ಇಡೀ ಕರ್ನಾಟಕದಲ್ಲಿ ಫಿಟ್‌ನೆಸ್ ಪ್ರಮಾಣ ಪತ್ರಗಳನ್ನು ಹೊಂದಿರದ, ಜೀವಿತಾವಧಿ ಕೊನೆಗೊಂಡ 14.3 ಲಕ್ಷ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಯೋಗ್ಯವಾಗಿವೆ. ಮತ್ತು 2027 ರ ವೇಳೆಗೆ ಇನ್ನೂ 66 ಲಕ್ಷ ವಾಹನಗಳು 15 ವರ್ಷ ಅಥವಾ ಅದಕ್ಕಿಂತ ಹಳೆಯದ್ದಾಗುತ್ತವೆ ಎಂದು ಅಂದಾಜಿಸಲಾಗಿದೆ. ಗಮನಾರ್ಹವೆಂದರೆ ಸರ್ಕಾರಿ ವಾಹನಗಳಿಗೆ ಮಾತ್ರವೇ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಕಡ್ಡಾಯಗೊಳಿಸಲಾಗಿದೆ.

ಹಳೆಯ ವಾಹನಗಳು ಇಡಿಯಾಗಿ ಮತ್ತು ಅವುಗಳ ಹಳತಾದ ಇಂಜಿನ್‌ಗಳು ಮಾಲಿನ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಡಿಸೆಂಬರ್ 2022 ರಲ್ಲಿ ರಾಜ್ಯ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಬಿಡುಗಡೆ ಮಾಡಿತು. ಆದಾಗ್ಯೂ, ಬೆಂಗಳೂರಿನಲ್ಲಿರುವ ಲಕ್ಷಗಟ್ಟಲೆ ವಾಹನಗಳು ಸ್ಕ್ರ್ಯಾಪಿಂಗ್ ವಿಲೇವಾರಿಗೆ ಅರ್ಹವಾಗಿದ್ದರೂ ಕೆಲವೇ ಸಾವಿರ ವಾಹನಗಳು ಮಾತ್ರ ಸ್ಕ್ರ್ಯಾಪ್ ಆಗಿವೆಯಷ್ಟೆ. ಮಾರ್ಚ್ 31, 2023 ರಂತೆ 15 ವರ್ಷಕ್ಕಿಂತ ಮೇಲ್ಪಟ್ಟ 91,58,577 ವಾಹನಗಳಲ್ಲಿ 33,00,558 ಕ್ಕೂ ಹೆಚ್ಚು ಹಳೆಯ ವಾಹನಗಳು ಬೆಂಗಳೂರು ನಗರದಲ್ಲಿವೆ. ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿಯು (Registered Vehicle Scrapping Policy of Karnataka 2022) ಅಯೋಗ್ಯ, ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ಸಂಚಾರದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಅವುಗಳ ಜಾಗದಲ್ಲಿ ಸುರಕ್ಷಿತ, ಇಂಧನ-ಸಮರ್ಥ ವಾಹನಗಳಿಗೆ ಅವಕಾಶ ನೀಡಲಾಗುವುದು. ಇದು 15 ವರ್ಷಗಳಿಗಿಂತ ಹಳೆಯದಾದ, ಜೀವಿತಾವಧಿ ಅಂತ್ಯಗೊಂಡ ವಾಹನಗಳಿಂದ ಉಂಟಾಗುವ ಮಾಲಿನ್ಯ ಹೊರಸೂಸುವಿಕೆಯನ್ನು ನಿಭಾಯಿಸಲು ಮಾತ್ರವಷ್ಟೇ ಅಲ್ಲ. ಹಳೆಯ ವಾಹನಗಳಿಗಾಗಿ ಲಭ್ಯವಿರುವ ಮರುಬಳಕೆ ಸೇವೆಗಳನ್ನು ಹೆಚ್ಚು ಪ್ರಸ್ತುತಗೊಳಿಸಲು, ಅಥವಾ ಸಮರ್ಥವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇಡೀ ಕರ್ನಾಟಕದಲ್ಲಿ ಫಿಟ್‌ನೆಸ್ ಪ್ರಮಾಣ ಪತ್ರಗಳನ್ನು ಹೊಂದಿರದ, ಜೀವಿತಾವಧಿ ಕೊನೆಗೊಂಡ 14.3 ಲಕ್ಷ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಯೋಗ್ಯವಾಗಿವೆ. ಮತ್ತು 2027 ರ ವೇಳೆಗೆ ಇನ್ನೂ 66 ಲಕ್ಷ ವಾಹನಗಳು 15 ವರ್ಷ ಅಥವಾ ಅದಕ್ಕಿಂತ ಹಳೆಯದ್ದಾಗುತ್ತವೆ ಎಂದು ಅಂದಾಜಿಸಲಾಗಿದೆ. ಗಮನಾರ್ಹವೆಂದರೆ ಸರ್ಕಾರಿ ವಾಹನಗಳಿಗೆ ವಾಹನ ಸ್ಕ್ರ್ಯಾಪಿಂಗ್ ನೀತಿಯು ಕಡ್ಡಾಯಗೊಳಿಸಲಾಗಿದೆ. ಆದರೆ ಖಾಸಗಿ ವಾಹನಗಳ ಸ್ಕ್ರ್ಯಾಪಿಂಗ್ ಅನ್ನು ಕಡ್ಡಾಯಗೊಳಿಸಿಲ್ಲ. ಅದು ಇನ್ನೂ ವಾಹನ ಮಾಲೀಕರ ಮರ್ಜಿಯಲ್ಲಿದೆ. ರಾಜ್ಯದಲ್ಲಿರುವ ಎರಡು...
Published On - 10:36 am, Sat, 13 July 24