ತೆರಿಗೆ ಭಯೋತ್ಪಾದನೆ, ಅಧಿಕ ಆದಾಯ ತೆರಿಗೆ, ಕಡಿಮೆ ವೇತನ ಸಮಸ್ಯೆ ಎತ್ತಿಹಿಡಿದ ಮೋಹನ್​ದಾಸ್ ಪೈ

Mohandas Pai speaks: ತೆರಿಗೆ ಭಯೋತ್ಪಾದನೆ, ದುಬಾರಿ ಆದಾಯ ತೆರಿಗೆ ಮತ್ತು ಹೆಚ್ಚಿನ ಉದ್ಯೋಗಗಳಲ್ಲಿ ಕಡಿಮೆ ವೇತನ ಇತ್ಯಾದಿ ಸಮಸ್ಯೆಗಳ ಬಗ್ಗೆ ಮೋಹನ್ ದಾಸ್ ಪೈ ಮಾತನಾಡಿದ್ದಾರೆ. ಮಧ್ಯಮವರ್ಗದ ಜನರು ಅಸಮಾಧಾನಗೊಂಡಿದ್ದಾರೆ. ಅತಿಹೆಚ್ಚು ತೆರಿಗೆ ಕಟ್ಟುತ್ತಿರುವ ಅವರಿಗೆ ಟ್ಯಾಕ್ಸ್ ಡಿಡಕ್ಷನ್ ಇಲ್ಲ. ಈ ಬಜೆಟ್​ನಲ್ಲಿ ಒಂದಷ್ಟು ತೆರಿಗೆ ರಿಯಾಯಿತಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಜಿ ಇನ್ಫೋಸಿಸ್ ಸಿಎಫ್​ಒ ಆದ ಅವರು ಹೇಳಿದ್ದಾರೆ.

ತೆರಿಗೆ ಭಯೋತ್ಪಾದನೆ, ಅಧಿಕ ಆದಾಯ ತೆರಿಗೆ, ಕಡಿಮೆ ವೇತನ ಸಮಸ್ಯೆ ಎತ್ತಿಹಿಡಿದ ಮೋಹನ್​ದಾಸ್ ಪೈ
ಮೋಹನ್​ದಾಸ್ ಪೈ
Follow us
|

Updated on:Jul 19, 2024 | 2:09 PM

ನವದೆಹಲಿ, ಜುಲೈ 19: ಉದ್ಯಮಿ ಹಾಗೂ ಮಾಜಿ ಇನ್ಫೋಸಿಸ್ ಸಿಎಫ್​ಒ ಮೋಹನ್​ದಾಸ್ ಪೈ ಅವರು ಮುಂಬರುವ ಬಜೆಟ್​ನಿಂದ ತೆರಿಗೆ ಹೊರೆ ಇಳಿಸುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಮಿಂಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ದೇಶದಲ್ಲಿ ತೆರಿಗೆ ಭಯೋತ್ಪಾದನೆ, ಅಧಿಕ ಆದಾಯ ತೆರಿಗೆ ಮತ್ತು ಕಡಿಮೆ ವೇತನದ ಸಮಸ್ಯೆಗಳ ಬಗ್ಗೆ ತಮ್ಮ ಮೊನಚು ಮಾತುಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಸರ್ಕಾರ ಈ ಮೂರು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನೀತಿ ರೂಪಿಸಬೇಕು ಎಂದೂ ಆಗ್ರಹಿಸಿದ್ದಾರೆ.

‘ಅತಿಹೆಚ್ಚು ತೆರಿಗೆ ನೀಡುತ್ತಿರುವ ಮಧ್ಯಮ ವರ್ಗದವರು ಅಸಂತುಷ್ಟಿಗಳಾಗಿದ್ದಾರೆ. ಅವರಿಗೆ ಟ್ಯಾಕ್ಸ್ ಡಿಡಕ್ಷನ್ ಇಲ್ಲ. ಹಣದುಬ್ಬರ ಅತಿಯಾಗಿದೆ. ಜೀವನ ವೆಚ್ಚ ಅಧಿಕ ಇದೆ. ಶಿಕ್ಷಣ ವೆಚ್ಚ ಹೆಚ್ಚಿದೆ. ಟ್ರಾಫಿಕ್ ಇತ್ಯಾದಿ ಸಮಸ್ಯೆಯಿಂದ ಜೀವನ ಗುಣಮಟ್ಟ ಹೀನವಾಗಿದೆ’ ಎಂದು ಹೇಳಿದ ಪೈ, ಮಧ್ಯಮ ವರ್ಗದವರು ತೆರಿಗೆ ದರದಲ್ಲಿ ಇಳಿಕೆ ಆಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕದ ಶ್ರೀಮಂತರಿಂದ ಹಣ ಪಡೆದು ಭಾರತದ ಶ್ರೀಮಂತರನ್ನು ನಿಂದಿಸುತ್ತಾರೆ: ಆಕ್ಸ್​ಫ್ಯಾಮ್, ಪಿಕೆಟ್ಟಿ ವಿರುದ್ಧ ಸಂಜೀವ್ ಸಾನ್ಯಾಲ್ ಗುಡುಗು

ತೆರಿಗೆ ಸಂಗ್ರಹ ಹೆಚ್ಚುತ್ತಿದೆ, ಸ್ವಲ್ಪ ರಿಯಾಯಿತಿ ಕೊಡಿ

ಕಳೆದ ಎರಡು ಬಜೆಟ್​ನಲ್ಲಿ ಸರ್ಕಾರ ತಂದ ಟ್ಯಾಕ್ಸ್ ಸ್ಲ್ಯಾಬ್ ನಿಯಮಗಳು ಮೋಹನ್​ದಾಸ್ ಪೈಕಿ ಸಮಾಧಾನ ತಂದಿಲ್ಲ. ತೆರಿಗೆ ಸಂಗ್ರಹ ಶೇ. 20ರಿಂದ 22ರಷ್ಟು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ಗಳನ್ನು ಏರಿಸುವುದು, ಗೃಹಸಾಲಗಳಿಗೆ ಮಾತ್ರ ತೆರಿಗೆ ರಿಯಾಯಿತಿ ಕೊಡುವುದು ಇತ್ಯಾದಿ ಬದಲು ಒಟ್ಟಾರೆ ತೆರಿಗೆಯಲ್ಲಿ ಕಡಿಮೆ ಮಾಡುವುದರಿಂದ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತದೆ ಎಂದು ಪೈ ವಾದಿಸಿದ್ದಾರೆ.

ನಿಕೃಷ್ಟ ವೇತನದ ಸಮಸ್ಯೆ…

ದೇಶದಲ್ಲಿರುವ ಶೇ. 80ರಷ್ಟು ಉದ್ಯೋಗಗಳು 20,000 ರೂಗಿಂತ ಕಡಿಮೆ ಸಂಬಳ ಕೊಡುತ್ತವೆ. ಇದು ನಿಜಕ್ಕೂ ಸವಾಲಿನ ವಿಚಾರ. ಸರ್ಕಾರ ಇದನ್ನು ಗಮನಿಸಬೇಕು. ಹಾಗೆಯೇ, ಕೆಳಗಿನ ಸ್ತರದ ಜನರಲ್ಲಿ ಖರೀದಿ ಶಕ್ತಿ ಹೆಚ್ಚಿಸಬೇಕು. ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಆಗಬೇಕು ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ.

ಇದನ್ನೂ ಓದಿ: ಅರ್ಧದಷ್ಟು ಭಾರತೀಯ ಕುಟುಂಬಗಳ ಆದಾಯ ಮತ್ತು ಉಳಿತಾಯ ಇಳಿಕೆ; ಬಜೆಟ್​ನಲ್ಲಿ ರಿಲೀಫ್ ಸಿಗುವ ಅಪೇಕ್ಷೆ

ತೆರಿಗೆ ಭಯೋತ್ಪಾದನೆ ನಿಲ್ಲಲಿ…

ತೆರಿಗೆ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ನಡೆದುಕೊಳ್ಳುತ್ತಿರುವ ರೀತಿಗೆ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಂಸ್ಥೆಗಳು ತನಿಖೆ ನಡೆಸುವ ಪ್ರಕರಣಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಭಾರತದಲ್ಲಿ ಟ್ಯಾಕ್ಸ್ ಟೆರರಿಸಂ ಬಹಳ ಅಪಾಯಕಾರಿ ಆಗಿದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Fri, 19 July 24