Arvind Panagariya: ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯದ ಆರೋಪ: 16ನೇ ಹಣಕಾಸು ಆಯೋಗದ ಮುಖ್ಯಸ್ಥರು ಹೇಳೋದಿದು

16th Finance Commission Chairman Arvind Panagariya Speaks: ಕೇಂದ್ರ ಮತ್ತು ರಾಜ್ಯಗಳಿಗೆ ತೆರಿಗೆ ಹಂಚಿಕೆ ಸೂತ್ರ ನೀಡಲಿರುವ 16ನೇ ಹಣಕಾಸು ಆಯೋಗದ ಮುಖ್ಯಸ್ಥ ಅರವಿಂದ್ ಪನಗರಿಯಾ, ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗುತ್ತಿದೆ ಎನ್ನುವ ವಿಚಾರದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಹಣಕಾಸು ಆಯೋಗ ವಿವಿಧ ರಾಜ್ಯಗಳಿಗೆ ತೆರಳಿ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದು ಆ ಬಳಿಕ ತೆರಿಗೆ ಹಂಚಿಕೆ ಸೂತ್ರ ಮುಂದಿಡಲಿದೆ.

Arvind Panagariya: ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯದ ಆರೋಪ: 16ನೇ ಹಣಕಾಸು ಆಯೋಗದ ಮುಖ್ಯಸ್ಥರು ಹೇಳೋದಿದು
ಅರವಿಂದ್ ಪನಗರಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2024 | 12:29 PM

ನವದೆಹಲಿ, ಫೆಬ್ರುವರಿ 19: ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ (Tax devolution) ತಮಗೆ ಅನ್ಯಾಯ ಆಗುತ್ತಿದೆ ಎಂದು ದಕ್ಷಿಣದ ರಾಜ್ಯಗಳು ಗಟ್ಟಿಯಾಗಿ ಆರೋಪಿಸುತ್ತಿವೆ. ಅದರಲ್ಲೂ ಕರ್ನಾಟಕ ಸರ್ಕಾರ ಸಾಕಷ್ಟು ಟೀಕಾ ಪ್ರಹಾರ ನಡೆಸುತ್ತಿದೆ. ಈಗ 16ನೇ ಹಣಕಾಸು ಆಯೋಗ ರಚನೆಯಾಗಿದೆ. ವಿವಿಧ ರಾಜ್ಯಗಳಿಗೆ ತೆರಳಿ ಸಂಬಂಧಿತ ಎಲ್ಲರೊಂದಿಗೂ ಆಯೋಗ ಅಭಿಪ್ರಾಯ ಸಂಗ್ರಹಿಸಿ ತೆರಿಗೆ ಹಂಚಿಕೆ ಸೂತ್ರವನ್ನು ಪ್ರಸ್ತುತಪಡಿಸಲಿದೆ. ಮಾಜಿ ನೀತಿ ಆಯೋಗ್ ಮುಖ್ಯಸ್ಥ ಅರವಿಂದ್ ಪನಗರಿಯಾ (Arvind Panagariya) ಈ 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಪನಗರಿಯ ಅವರಿಗೆ ಕರ್ನಾಟಕದ ವಿಚಾರದ ಬಗ್ಗೆ ಪ್ರಶ್ನೆ ಎದುರಾಯಿತು. ಸದ್ಯ ಈ ವಿಚಾರದ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಅನುಚಿತ ಎಂದು ಅವರು ಹೇಳಿದ್ದಾರೆ.

‘ಈ ವಿಚಾರ (ತೆರಿಗೆ ಹಂಚಿಕೆಯದ್ದು) ಹಣಕಾಸು ಆಯೋಗದ ಕಾರ್ಯ ವ್ಯಾಪ್ತಿಗೆ ಬರುವಂಥದ್ದೇ. ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ 15ನೇ ಹಣಕಾಸು ಆಯೋಗ ಬೇರೆ ಮಾನದಂಡವನ್ನೂ ತರಲು ಯತ್ನಿಸಿತ್ತು. ಹೀಗಾಗಿ, ನಾವು ಆ ಸಂಗತಿಯನ್ನೂ ಅವಲೋಕಿಸಿ ಬಳಿಕ ನಿರ್ಧರಿಸಬೇಕಿದೆ,’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿರುವ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 16th Finance Commission: ಅರವಿಂದ್ ಪನಗರಿಯ ನೇತೃತ್ವದಲ್ಲಿ ದೆಹಲಿಯಲ್ಲಿ 16ನೇ ಹಣಕಾಸು ಆಯೋಗದ ಚೊಚ್ಚಲ ಸಭೆ

ಈ 16ನೇ ಹಣಕಾಸು ಆಯೋಗದಲ್ಲಿ ಅರವಿಂದ್ ಪನಗರಿಯಾ ಅವರಲ್ಲದೇ ಇನ್ನೂ ನಾಲ್ವರು ಸದಸ್ಯರಿರುತ್ತಾರೆ. ಜೊತೆಗೆ ನೆರವು ಒದಗಿಸಲು ಹಣಕಾಸು ಇಲಾಖೆಯ ಕೆಲ ಅಧಿಕಾರಿಗಳು ಇರುತ್ತಾರೆ. ಈ ಆಯೋಗದ ಸದಸ್ಯರು ದೇಶದ ಎಲ್ಲಾ ರಾಜ್ಯಗಳಿಗೂ ತೆರಳಿ ಅಲ್ಲಿನ ಸಿಎಂ, ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿ ತೆರಿಗೆ ಪಾಲು ಎಷ್ಟು ಸಿಗಬೇಕೆಂದು ಅಭಿಪ್ರಾಯ ಸಂಗ್ರಹಿಸುತ್ತದೆ. ಕೇಂದ್ರದ ಅಭಿಪ್ರಾಯವನ್ನೂ ಪಡೆದು, ಅಂತಿಮವಾಗಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹೇಗೆ ತೆರಿಗೆ ಹಂಚಿಕೆ ಆಗಬೇಕು, ಹಾಗು ರಾಜ್ಯ ರಾಜ್ಯಗಳ ಮಧ್ಯೆ ಹೇಗೆ ತೆರಿಗೆ ವಿತರಣೆ ಆಗಬೇಕು ಎಂಬ ಸೂತ್ರವನ್ನು ಶಿಫಾರಸು ಮಾಡುತ್ತದೆ. ಆಯೋಗಕ್ಕೆ 2025ರ ಅಕ್ಟೋಬರ್ 31ರವರೆಗೂ ಕಾಲಾವಕಾಶ ಇರುತ್ತದೆ.

ಭಾರತಕ್ಕೆ ಶೇ. 10ರಷ್ಟು ಬೆಳವಣಿಗೆ ತೋರುವ ಸಾಮರ್ಥ್ಯ ಇದೆ…

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅರವಿಂದ್ ಪನಗರಿಯಾ ಕೇವಲ ಜಿಎಸ್​ಟಿ ಹಂಚಿಕೆ ಮಾತ್ರವಲ್ಲ, ಭಾರತದ ಆರ್ಥಿಕ ಬೆಳವಣಿಗೆ ವಿಚಾರದ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಕಳೆದ 10 ವರ್ಷದಲ್ಲಿ ಮಾತ್ರವಲ್ಲ, 20 ವರ್ಷದಿಂದಲೂ ಭಾರತದ ಆರ್ಥಿಕತೆ ಸ್ಥಿರ ಪ್ರದರ್ಶನ ನೀಡುತ್ತಿದೆ. ಕೋವಿಡ್ ಸಂದರ್ಭವನ್ನು ತೆಗೆದಿರಿಸಿದರೆ ಕಳೆದ 20 ವರ್ಷದಲ್ಲಿ ಭಾರತದ ಆರ್ಥಿಕತೆ ಸರಾಸರಿಯಾಗಿ ಶೇ. 7.9ರ ದರದಲ್ಲಿ ಬೆಳೆದಿದೆ. ಭಾರತಕ್ಕೆ ಶೇ. 10ರಷ್ಟು ಬೆಳೆಯುವ ಶಕ್ತಿ ಇದೆ. ಸದ್ಯ ಶೇ. 7ರಷ್ಟು ಬೆಳವಣಿಗೆ ಇದ್ದು, ಇನ್ನೂ ಹೆಚ್ಚುವರಿ 3 ಪ್ರತಿಶತ ಬೆಳವಣಿಗೆ ಸಾಧ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ ಪನಗರಿಯ.

ಇದನ್ನೂ ಓದಿ: ಪ್ರಪಂಚದಲ್ಲೇ ಅತಿದೊಡ್ಡ ಸುಳ್ಳು ಅಂದ್ರೆ ರೈತರ ಆದಾಯ ಡಬಲ್ ಮಾಡ್ತೀನಿ ಅನ್ನೋದು: ನವಜೋತ್ ಸಿಂಗ್ ಸಿಧು

ಸರ್ಕಾರಕ್ಕೆ ಪನಗರಿಯಾ 3 ಸಲಹೆಗಳು

ನಮ್ಮ ನೀತಿಗಳಲ್ಲಿ ಇನ್ನೂ ಬಹಳಷ್ಟು ಸುಧಾರನೆಗಳು ಆಗಬೇಕು. ವ್ಯಾಪಾರವನ್ನು ಇನ್ನಷ್ಟು ಉದಾರೀಕರಣಗೊಳಿಸಬೇಕು. ನಮ್ಮ ಉದ್ಯಮಗಳು ಜಾಗತಿಕವಾಗಿ ಪೈಪೋಟಿ ನೀಡಬಲ್ಲವಾ ಎಂಬ ಭಯ ಬೇಡ. ಎರಡನೆಯದು, ಕಾರ್ಮಿಕ ಕಾನೂನುಗಳಲ್ಲಿ ತಂದಿರುವ ಸುಧಾರಣೆಗಳನ್ನು ಎಲ್ಲಾ ರಾಜ್ಯಗಳು ಅನುಷ್ಠಾನಕ್ಕೆ ತರುವಂತೆ ಮಾಡಬೇಕು. ಖಾಸಗೀಕರಣ ನೀತಿಯೂ ದೃಢವಾಗಿ ಜಾರಿಯಾಗಬೇಕು ಎಂದು ಅರವಿಂದ್ ಪನಗರಿಯಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ