AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ

Bengaluru, World's Fastest-Growing City by 2035: ಜಾಗತಿಕ ರಿಯಲ್ ಎಸ್ಟೇಟ್ ಸಂಸ್ಥೆ ಸಾವಿಲ್ಸ್ ವರದಿ ಪ್ರಕಾರ, 2035ರ ವೇಳೆಗೆ ಬೆಂಗಳೂರು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುವ ಮಹಾನಗರವಾಗಲಿದೆ. ಐಟಿ ಪ್ರತಿಭೆಗಳು, ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳು ಮತ್ತು ಉದ್ಯೋಗ ವಲಸೆ ಇದಕ್ಕೆ ಮುಖ್ಯ ಕಾರಣ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಭಾರೀ ಜಿಗಿತ ನಿರೀಕ್ಷಿಸಲಾಗಿದೆ. ಏಷ್ಯಾ ಪೆಸಿಫಿಕ್ ಮತ್ತು ಭಾರತೀಯ ನಗರಗಳ ಪ್ರಾಬಲ್ಯವನ್ನು ಈ ವರದಿ ಎತ್ತಿ ತೋರಿಸಿದೆ. ಬೆಂಗಳೂರು ಜಾಗತಿಕ ಆರ್ಥಿಕತೆಗೆ ಪ್ರಮುಖ ಕೇಂದ್ರವಾಗಲಿದೆ.

ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ
ಬೆಂಗಳೂರುImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2026 | 4:58 PM

Share

ಬೆಂಗಳೂರು, ಮೇ 5: ಭಾರತದ ಐಟಿ ಹಬ್ ಹಾಗೂ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು ನಗರದ (Bengaluru city) ಕಿರೀಟಕ್ಕೆ ಮತ್ತೊಂದು ಐತಿಹಾಸಿಕ ಗರಿ ಸಿಕ್ಕಿದೆ. ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ‘ಸಾವಿಲ್ಸ್’ (Savills) ನಡೆಸಿರುವ ಸಂಶೋಧನಾ ವರದಿಯ ಪ್ರಕಾರ, 2035ರ ವೇಳೆಗೆ ಬೆಂಗಳೂರು ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ಮಹಾನಗರವಾಗಿ (World’s Fastest-Growing Major City) ಹೊರಹೊಮ್ಮಲಿದೆ. ವಿಶ್ವದ ಪ್ರಮುಖ 245 ನಗರಗಳನ್ನು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಹಲವು ನಗರಗಳು ಮೊದಲ 20 ಸ್ಥಾನಗಳಲ್ಲಿ ಗುರುತಿಸಿಕೊಂಡು ಭಾರತದ ಆರ್ಥಿಕ ಬಲವನ್ನು ಪ್ರದರ್ಶಿಸಿವೆ.

ಬೆಂಗಳೂರು ಮೊದಲ ಸ್ಥಾನ ಪಡೆಯಲು ಕಾರಣಗಳೇನು?

  • ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ಸ್ (GCC): ವಿಶ್ವದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ತಂತ್ರಜ್ಞಾನ, ಹಣಕಾಸು ಮತ್ತು ಕಾರ್ಯಾಚರಣೆಗಾಗಿ ಬೆಂಗಳೂರಿನಲ್ಲಿ ತಮ್ಮ ‘ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್’ಗಳನ್ನು (GCC) ಸ್ಥಾಪಿಸುತ್ತಿವೆ. ಇದು ನಗರದ ಬೆಳವಣಿಗೆಗೆ ಮುಖ್ಯ ಇಂಧನವಾಗಿದೆ.
  • ಉನ್ನತ ಐಟಿ ಪ್ರತಿಭೆಗಳು: ಬೆಂಗಳೂರಿನಲ್ಲಿರುವ ಅಪಾರ ಸಂಖ್ಯೆಯ ತಾಂತ್ರಿಕ ನೈಪುಣ್ಯತೆ ಹೊಂದಿದ ಯುವ ಸಮೂಹ ಮತ್ತು ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಜಾಗತಿಕ ಕಂಪನಿಗಳನ್ನು ಆಕರ್ಷಿಸುತ್ತಿವೆ.
  • ಸ್ಥಳಾಂತರ ಮತ್ತು ಜನಸಂಖ್ಯೆ: ದೇಶದ ಮೂಲೆ ಮೂಲೆಗಳಿಂದ ಉದ್ಯೋಗ ಅರಸಿ ಬರುವ ಯುವ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಶ್ರೀಮಂತ ಕುಟುಂಬಗಳ (ವರ್ಷಕ್ಕೆ ಸುಮಾರು 70,000 ಡಾಲರ್​ಗಿಂತ ಹೆಚ್ಚು ಗಳಿಸುವ ಕುಟುಂಬಗಳು) ಸಂಖ್ಯೆ ವೃದ್ಧಿಸುತ್ತಿರುವುದು ನಗರದ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ.

ಇದನ್ನೂ ಓದಿ: ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

ರೇಸ್‌ನಲ್ಲಿ ಏಷ್ಯಾ ಪೆಸಿಫಿಕ್ ದೇಶಗಳು ಮತ್ತು ಭಾರತದ ಪ್ರಾಬಲ್ಯ

ಸಾವಿಲ್ಸ್ ವರದಿಯ ಪ್ರಕಾರ, ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊದಲ 20 ನಗರಗಳ ಪೈಕಿ ಶೇಕಡಾ 85 ರಷ್ಟು ನಗರಗಳು ಏಷ್ಯಾ ಪೆಸಿಫಿಕ್ ವಲಯಕ್ಕೆ ಸೇರಿವೆ. ಮೊದಲ 50 ನಗರಗಳಲ್ಲಿ ಮುಕ್ಕಾಲು ಭಾಗ ಏಷ್ಯಾದ್ದಾಗಿದ್ದು, ಇದರಲ್ಲಿ ಭಾರತ, ವಿಯೆಟ್ನಾಂ ಮತ್ತು ಚೀನಾ ದೇಶಗಳು ಮುಂಚೂಣಿಯಲ್ಲಿವೆ. ಭಾರತದ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳು ಸಹ ಅಗ್ರ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರಿ ಜಿಗಿತ

ಬೆಂಗಳೂರಿನ ಈ ಅಭೂತಪೂರ್ವ ಬೆಳವಣಿಗೆಯಿಂದಾಗಿ ಮುಂದಿನ ಒಂದು ದಶಕದಲ್ಲಿ ನಗರದ ರಿಯಲ್ ಎಸ್ಟೇಟ್ ಉದ್ಯಮವು ಸಂಪೂರ್ಣವಾಗಿ ಬದಲಾಗಲಿದೆ ಎಂದು ವರದಿ ಹೇಳಿದೆ.

  • ಕಚೇರಿ ಜಾಗಕ್ಕೆ ಭಾರಿ ಬೇಡಿಕೆ: ಜಾಗತಿಕ ಸಂಸ್ಥೆಗಳ ವಿಸ್ತರಣೆಯಿಂದಾಗಿ ಅತ್ಯಾಧುನಿಕ ಹಾಗೂ ಪರಿಸರಸ್ನೇಹಿ (Grade-A workspaces) ಆಫೀಸ್ ಸ್ಪೇಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
  • ವಿದೇಶಿ ಬಂಡವಾಳ: ಭಾರತದ ರಿಯಲ್ ಎಸ್ಟೇಟ್ ವಲಯಕ್ಕೆ ಖಾಸಗಿ ಈಕ್ವಿಟಿ (Private Equity) ಹೂಡಿಕೆಯು ಶೇಕಡಾ 66 ರಷ್ಟು ಹೆಚ್ಚಾಗಿದ್ದು, ಭಾರಿ ಪ್ರಮಾಣದ ವಿದೇಶಿ ಹಣ ಹರಿದುಬರುತ್ತಿದೆ.
  • ವಸತಿ ವಲಯದ ವಿಸ್ತರಣೆ: ಐಟಿ ಉದ್ಯೋಗಿಗಳ ವಲಸೆ ಹೆಚ್ಚಾಗುತ್ತಿದ್ದಂತೆ ವಸತಿ ಸಮುಚ್ಚಯಗಳು, ಲಗ್ಜರಿ ಅಪಾರ್ಟ್‌ಮೆಂಟ್‌ಗಳು ಮತ್ತು ಮೂಲಸೌಕರ್ಯ ಯೋಜನೆಗಳು ವೇಗವಾಗಿ ವಿಸ್ತರಣೆಯಾಗುತ್ತಿವೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ವರದಿಯ ಮಾನದಂಡಗಳು ಏನಾಗಿದ್ದವು?

ಈ ಜಾಗತಿಕ ಸೂಚ್ಯಂಕವನ್ನು ತಯಾರಿಸಲು ಸಾವಿಲ್ಸ್ ಸಂಸ್ಥೆಯು 2035ರವರೆಗಿನ ನಗರದ ಜಿಡಿಪಿ (GDP) ಬೆಳವಣಿಗೆ, ವೈಯಕ್ತಿಕ ಆದಾಯದ ವೃದ್ಧಿ, ಯುವ ಉದ್ಯೋಗಿಗಳ ಅನುಪಾತ (Population dependency ratio), ನಗರಕ್ಕೆ ಆಗುವ ವಲಸೆ ಮತ್ತು ಶ್ರೀಮಂತ ಕುಟುಂಬಗಳ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿತ್ತು.

ಒಟ್ಟಾರೆ, ಮುಂದಿನ ದಿನಗಳಲ್ಲಿ ಕೇವಲ ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ, ಆರ್ಥಿಕತೆ, ನಗರೀಕರಣ ಮತ್ತು ಹೂಡಿಕೆಯಲ್ಲೂ ಬೆಂಗಳೂರು ಇಡೀ ಜಗತ್ತಿಗೆ ‘ಬಾಸ್’ ಆಗಿ ನಿಲ್ಲಲಿದೆ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ