ಕ್ರಿಪ್ಟೋ ವಿನಿಮಯ ಕೇಂದ್ರ ವಾಜಿರ್ಎಕ್ಸ್ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿದ ಇಡಿ
WazirX ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ವಾಜಿರ್ಎಕ್ಸ್ ಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಇಡಿ ತನಿಖೆ ನಡೆಸುತ್ತಿದೆ ಎಂದು ವಿತ್ತ ಸಚಿವಾಲಯದ ರಾಜ್ಯಖಾತೆ ಸಚಿವ ಪಂಕಜ್ ಚೌಧರಿ ಅವರು ಸಂಸತ್ ನಲ್ಲಿ ತಿಳಿಸಿದ ಬೆನ್ನಲ್ಲೇ ಇಡಿ ಈ ಕ್ರಮ ಕೈಗೊಂಡಿದೆ.
ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ (Crypto Exchange) ವಾಜಿರ್ಎಕ್ಸ್ (WazirX) ನಡೆಸುತ್ತಿರುವ ಝಾನ್ಮೈ ಲ್ಯಾಬ್ ನಿರ್ದೇಶಕರಿಗೆ ಸೇರಿದ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (Enforcement Directorate) ಶೋಧ ನಡೆಸಿದ್ದು, ₹64.67 ಕೋಟಿ ಹಣವಿದ್ದ ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ. ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ವಾಜಿರ್ಎಕ್ಸ್ ಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಇಡಿ ತನಿಖೆ ನಡೆಸುತ್ತಿದೆ ಎಂದು ವಿತ್ತ ಸಚಿವಾಲಯದ ರಾಜ್ಯಖಾತೆ ಸಚಿವ ಪಂಕಜ್ ಚೌಧರಿ ಅವರು ಸಂಸತ್ ನಲ್ಲಿ ತಿಳಿಸಿದ ಬೆನ್ನಲ್ಲೇ ಇಡಿ ಈ ಕ್ರಮ ಕೈಗೊಂಡಿದೆ.ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ 1999 (FEMA) ಅಡಿಯಲ್ಲಿ ವಾಜಿರ್ ಎಕ್ಸ್ ವಿರುದ್ಧ ಎರಡು ಪ್ರಕರಣ ದಾಖಲಿದ್ದು ಇಡಿ ಅದರ ವಿಚಾರಣೆ ನಡೆಸುತ್ತಿದೆ. ಇದಕ್ಕಿಂತ ಮುನ್ನ ₹2,790 ಕೋಟಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಅಪರಿಚಿತ ಮೂಲಗಳಿಗೆ ವರ್ಗಾಯಿಸಲು ಅನುಮತಿ ನೀಡುವ ಮೂಲಕ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ವಿರುದ್ಧದ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ವಾಜಿರ್ ಎಕ್ಸ್ ಗೆ ಶೋಕಾಸ್ ನೋಟಿಸ್ ನೀಡಲಾಯಿತು.
ಭಾರತದ ಪ್ರಮುಖ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾಗಿರುವ ವಾಜಿರ್ ಎಕ್ಸ್ 70 ಕಡೆ ಇದೆ. ಈ ವರ್ಷ ವಾಜಿರ್ ಎಕ್ಸ್ ಸಹ ಸಂಸ್ಥಾಪಕ ನಿಶ್ಚಲ್ ಶೆಟ್ಟಿ ಮತ್ತು ಸಿದ್ದಾರ್ಥ್ ಮೆನನ್ ಭಾರತದಿಂದ ದುಬೈಗೆ ತಮ್ಮ ನೆಲೆ ಬದಲಿಸಿಕೊಂಡಿದ್ದರು.
ವಾಜಿರ್ ಎಕ್ಸ್ ಕ್ರಿಪ್ಟೋ ವಿನಿಮಯ ಕೇಂದ್ರದ ಒಡೆತನ ಹೊಂದಿರುವ ಝಾನ್ಮೈ ಲ್ಯಾಬ್ಸ್ ಪ್ರೈವೆಟ್ ಲಿಮಿಟೆಡ್ ಅಮೆರಿಕಗ ಕ್ರೌಡ್ ಫಯರ್ ಇಂಕ್, ಬಿನಾನ್ಸ್ (ಕೇಮನ್ ಐಲ್ಯಾಂಡ್), ಜೆಟ್ಟಾಯಿ ಪ್ರೈ ಲಿ, ಸಿಂಗಾಪುರ ಜತೆ ವೆಬ್ ಒಪ್ಪಂದ ಮಾಡಿಕೊಡಿತ್ತು. ಈ ಒಪ್ಪಂದ ಕ್ರಿಪ್ಟೋ ವಿನಿಮಯ ಕೇಂದ್ರದ ಒಡೆತನಕ್ಕೆ ಸಂಬಂಧಿಸಿದ್ದಾಗಿದೆ. ಈ ಹಿಂದೆ ಮ್ಯಾನೇಜಿಂಗ್ ಡೈರೆಕ್ಟರ್ ನಿಶ್ಚಲ್ ಶೆಟ್ಟಿ, ವಾಜಿರ್ ಎಕ್ಸ್ ಭಾರತೀಯ ವಿನಿಮಯ ಕೇಂದ್ರವಾಗಿದ್ದು, ಇದು ಎಲ್ಲ ಕ್ರಿಪ್ಟೋ-ಕ್ರಿಪ್ಟೋ ಮತ್ತು ಭಾರತೀಯ ಕರೆನ್ಸಿ- ಕ್ರಿಪ್ಟೋ ವಿನಿಮಯವನ್ನು ಮಾತ್ರ ನಿಯಂತ್ರಿಸುತ್ತದೆ. ಇದು ಬಿನಾನ್ಸ್ ಜತೆ ಐಪಿ ಮತ್ತು ಆದ್ಯತೆಯ ಒಪ್ಪಂದವನ್ನು ಮಾತ್ರ ಹೊಂದಿದೆ ಎಂದಿದ್ದರು.
ಆದರೆ ಈಗ ಝಾನ್ಮೈ ನಾವು ಭಾರತದ ಕರೆನ್ಸಿ -ಕ್ರಿಪ್ಟೋ ವಹಿವಾಟು ಮಾತ್ರ ಮಾಡುತ್ತಿದ್ದು ಇನ್ನುಳಿದ ಎಲ್ಲ ವಹಿವಾಟುಗಳನ್ನು ವಾಜಿರ್ ಎಕ್ಸ್ ನಲ್ಲಿ ಬಿನಾನ್ಸ್ ಮಾಡುತ್ತದೆ. ಭಾರತೀಯ ನಿಯಂತ್ರಕ ಏಜೆನ್ಸಿಗಳ ಮೇಲ್ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ನೇರವಲ್ಲದ ಮತ್ತು ಅಸ್ಪಷ್ಟ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಇಡಿ ಹೇಳಿದೆ.
ವಾಜಿರ್ ಎಕ್ಸ್, ಕ್ಲೌಡ್ ಆಧಾರಿತ ಸಾಫ್ಟ್ ವೇರ್ ಬಳಸಿ ಕಾರ್ಯನಿರ್ವಹಿಸುತ್ತಿದ್ದು, ಇದರ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಾರೆ. ಹಲವಾರು ಅವಕಾಶಗಳನ್ನು ನೀಡಲಾಗಿದ್ದರೂ ಶಂಕಿತ ಫಿನ್ಟೆಕ್ ಎಪಿಪಿ ಕಂಪನೀಸ್ಗೆ ಮಾಡಿದ ಕ್ರಿಪ್ಟೋ ವಹಿವಾಟುಗಳ ಮಾಹಿತಿ ನೀಡಲು ಮತ್ತು ಕೆವೈಸಿ ನೀಡಲು ವಾಜಿರ್ ಎಕ್ಸ್ ವಿಫಲವಾಗಿದೆ. ಹೆಚ್ಚಿನ ವಹಿನಾಟುಗಳ ಬಗ್ಗೆ ದಾಖಲೆಯೇ ಇಲ್ಲ ಎಂದು ಇಡಿ ಹೇಳಿದೆ.
ಜುಲೈ 2020 ರ ಮೊದಲು, ಕ್ರಿಪ್ಟೋ ಸ್ವತ್ತುಗಳನ್ನು ಖರೀದಿಸಲು ವಿನಿಮಯಕ್ಕೆ ಹಣ ಬರುತ್ತಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಅವರು ದಾಖಲಿಸಿರಲಿಲ್ಲ ಎಂದು ವಾಜಿರ್ ಎಕ್ಸ್ ಮಾಹಿತಿ ನೀಡಿರುವುದಾಗಿ ಇಡಿ ಹೇಳಿದೆ. ವಾಜಿರ್ ಎಕ್ಸ್ ಎಕ್ಸ್‌ಚೇಂಜ್‌ನ ನಿರ್ದೇಶಕರ ಅಸಹಕಾರ ನಿಲುವಿನಿಂದಾಗಿ, ಆಗಸ್ಟ್ 3 ರಂದು ಇಡಿ ಪಿಎಂಎಲ್‌ಎ ಅಡಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿತು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Fri, 5 August 22