
ನವದೆಹಲಿ, ಆಗಸ್ಟ್ 17: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 8 ರಂದು ಪ್ರಾರಂಭಿಸಿದ್ದ ಎಫ್‌ಸಿಎನ್‌ಆರ್‌ಬಿ – Foreign Currency Non-Resident (Bank) ವಿಶೇಷ ಫೊರೆಕ್ಸ್ ಸ್ವ್ಯಾಪ್ ಸೌಲಭ್ಯದ ಮುಕ್ತಾಯದ ದಿನಾಂಕವನ್ನು ಸೆಪ್ಟೆಂಬರ್ 30 ರಿಂದ ಆಗಸ್ಟ್ 31 ಕ್ಕೆ ಹಿಂದೂಡಲಾಗಿದೆ. ಈ ರಿಯಾಯಿತಿ ಸ್ವ್ಯಾಪ್ ಸೌಲಭ್ಯಕ್ಕೆ ಬ್ಯಾಂಕುಗಳು ಮತ್ತು ಅನಿವಾಸಿ ಭಾರತೀಯರಿಂದ (NRI) ಅತ್ಯದ್ಭುತ ಸ್ಪಂದನೆ ದೊರೆತಿದ್ದು, ಬೃಹತ್ ಪ್ರಮಾಣದ ವಿದೇಶಿ ವಿನಿಮಯ (Forex) ಭಾರತಕ್ಕೆ ಹರಿದುಬಂದಿದೆ. ಈ ಕಾರಣಕ್ಕೆ ಈ ವಿಂಡೋವನ್ನು ಒಂದು ತಿಂಗಳು ಬೇಗನೇ ಅಂತ್ಯಗೊಳಿಸಲು ಆರ್ಬಿಐ ನಿರ್ಧರಿಸಿದೆ ಎನ್ನಲಾಗಿದೆ.
ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ ಡೆಪಾಸಿಟ್ ಎಂದರೆ, ಅನಿವಾಸಿ ಭಾರತೀಯರ ಕರೆನ್ಸಿ ಠೇವಣಿ ಯೋಜನೆ. ಅನಿವಾಸಿ ಭಾರತೀಯರು ಅವರ ಹಾಲಿ ದೇಶಗಳ ಕರೆನ್ಸಿ ಹಣವನ್ನೇ ಭಾರತೀಯ ಬ್ಯಾಂಕುಗಳಲ್ಲಿ ಠೇವಣಿ ಇಡುವ ಅವಕಾಶ ಇದು. ಅವರ ದೇಶಗಳ ಬ್ಯಾಂಕುಗಳಿಗಿಂತ ಬಹಳ ಹೆಚ್ಚಾದ ಬಡ್ಡಿದರವನ್ನು ಭಾರತೀಯ ಬ್ಯಾಂಕುಗಳು ಆಫರ್ ಮಾಡುತ್ತಿವೆ. ಈ ಸ್ಕೀಮ್ನಿಂದ ಆರ್ಬಿಐಗೆ ಆಗುವ ದೊಡ್ಡ ಅನುಕೂಲವೆಂದರೆ, ವಿದೇಶೀ ಕರೆನ್ಸಿಗಳ ಹರಿವು.
ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ
ಎನ್ಆರ್ಐಗಳಿಂದ ಬಂದ ಕರೆನ್ಸಿಗಳನ್ನು ಬ್ಯಾಂಕುಗಳು ಆರ್ಬಿಐಗೆ ಮಾರುತ್ತವೆ. ನಿರ್ದಿಷ್ಟ ಅವಧಿ ಬಳಿಕ ಪೂರ್ವನಿಗದಿತ ದರಕ್ಕೆ ಈ ಬ್ಯಾಂಕುಗಳು ಮತ್ತೆ ಆ ಕರೆನ್ಸಿಗಳನ್ನು ಖರೀದಿಸಬೇಕು. ಇದು ಕರೆನ್ಸಿ ಸ್ವಾಪಿಂಗ್ ಕ್ರಿಯೆ. ಆರ್ಬಿಐ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಡೆಪಾಸಿಟ್ಗು ಬಂದಿದ್ದರಿಂದ ಕರೆನ್ಸಿ ಸ್ವಾಪಿಂಗ್ ವಿಂಡೋ ಮುಚ್ಚಲು ನಿರ್ಧರಿಸಿದೆ.
ಆರ್ಬಿಐ ಜಾರಿಗೊಳಿಸಿದ ವಿಶೇಷ ಯೋಜನೆಗಳ ಮೂಲಕ ಒಟ್ಟು $56.85 ಬಿಲಿಯನ್ ಹರಿದುಬಂದಿದೆ. 2013ರಲ್ಲಿ ಆರ್‌ಬಿಐ ನಡೆಸಿದ್ದ ಇಂಥದ್ದೇ ಪ್ರಯತ್ನದಲ್ಲಿ ಸಿಕ್ಕಿದ್ದ ಹಣಕ್ಕಿಂತ ಎರಡಕ್ಕೂ ಹೆಚ್ಚು ಪಟ್ಟು ಅಧಿಕವಾಗಿದೆ.
ಪ್ರಮುಖ ನಿಯಮಗಳು ಮತ್ತು ದಿನಾಂಕಗಳು
ಇದನ್ನೂ ಓದಿ: ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು
FCNR(B) ಯೋಜನೆ ನಿಲ್ಲುತ್ತಿಲ್ಲ: ಆರ್‌ಬಿಐ ಮುಚ್ಚುತ್ತಿರುವುದು ತನ್ನ ವಿಶೇಷ ಸ್ವ್ಯಾಪ್ ರಿಯಾಯಿತಿ ಸೌಲಭ್ಯವನ್ನು ಮಾತ್ರ, FCNR(B) ಠೇವಣಿ ಖಾತೆಗಳನ್ನಲ್ಲ. ಆಗಸ್ಟ್ 31ರ ನಂತರವೂ ಎನ್‌ಆರ್‌ಐಗಳು ಸಾಮಾನ್ಯ ನಿಯಮಗಳ ಅಡಿಯಲ್ಲಿ ಎಫ್‌ಸಿಎನ್‌ಆರ್‌ಬಿ ಠೇವಣಿಗಳನ್ನು ಮಾಡಬಹುದು.
ಬ್ಯಾಂಕುಗಳಿಗೆ ಸೌಲಭ್ಯ: ಆರ್‌ಬಿಐ ಬ್ಯಾಂಕುಗಳಿಗೆ ನೀಡುತ್ತಿದ್ದ ಹೆಡ್ಜಿಂಗ್ (Hedging) ವೆಚ್ಚದ ಬೆಂಬಲ ಹಾಗೂ ವಿನಾಯಿತಿಗಳಿಂದಾಗಿ ಬ್ಯಾಂಕುಗಳು ಎನ್‌ಆರ್‌ಐಗಳಿಗೆ ಶೇ. 7% ವರೆಗೆ ಆಕರ್ಷಕ ಬಡ್ಡಿ ದರಗಳನ್ನು ನೀಡಲು ಸಾಧ್ಯವಾಗಿತ್ತು. ಆಗಸ್ಟ್ 31ರ ನಂತರ ಆರ್‌ಬಿಐನ ಈ ವಿಶೇಷ ಸ್ವ್ಯಾಪ್ ಬೆಂಬಲ ಸಿಗದ ಕಾರಣ, ಬ್ಯಾಂಕುಗಳು ನೀಡುವ FCNR ಬಡ್ಡಿ ದರಗಳು ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ.
ರೂಪಾಯಿ ಮತ್ತು ಫೊರೆಕ್ಸ್ ಮೀಸಲು: ಈ ಭಾರಿ ಡಾಲರ್ ಹರಿವಿನಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹಣೆ (Forex Reserves) $707 ಬಿಲಿಯನ್ ದಾಟಿ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಲು ನೆರವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ