AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG: 14.2 ಕಿಲೋ ಬದಲು 10 ಕಿಲೋ ಎಲ್​ಪಿಜಿ ಗ್ಯಾಸ್ ವಿತರಿಸುವ ಸಾಧ್ಯತೆ

Govt may distribute 10 KG LPG refill instead of regular 14.2 KG cylinder for households: ಗೃಹಬಳಕೆಗೆ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬದಲು 10 ಕಿಲೋ ಎಲ್​ಪಿಜಿ ರೀಫಿಲ್ ಇರುವ ಸಿಲಿಂಡರ್ ವಿತರಿಸಲು ಸರ್ಕಾರ ಯೋಜಿಸಿದೆ. ಎಲ್​ಪಿಜಿ ಪೂರೈಕೆ ಕಡಿಮೆ ಇರುವುದರಿಂದ, ಹೆಚ್ಚೆಚ್ಚು ಮನೆಗಳಿಗೆ ಎಲ್​ಪಿಜಿ ಲಭ್ಯ ಹೆಚ್ಚಿಸಲು ತೈಲ ಮಾರುಕಟ್ಟೆ ಕಂಪನಿಗಳು ಈ ಉಪಾಯ ಮಾಡಿವೆ. 14.2 ಕಿಲೋ ಎಲ್​ಪಿಜಿ ಸಿಲಿಂಡರ್​ನಲ್ಲೇ 10 ಕಿಲೋ ರೀಫಿಲ್ ತುಂಬಿಸಿ ವಿತರಿಸಬಹುದು.

LPG: 14.2 ಕಿಲೋ ಬದಲು 10 ಕಿಲೋ ಎಲ್​ಪಿಜಿ ಗ್ಯಾಸ್ ವಿತರಿಸುವ ಸಾಧ್ಯತೆ
ಎಲ್​ಪಿಜಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 23, 2026 | 3:29 PM

Share

ನವದೆಹಲಿ, ಮಾರ್ಚ್ 23: ಹೆಚ್ಚೆಚ್ಚು ಜನರಿಗೆ ಎಲ್​ಪಿಜಿ ಪೂರೈಕೆ (LPG distribution) ಸಿಗುವಂತಾಗಲು ಸರ್ಕಾರ ಹೊಸ ತಂತ್ರ ಯೋಜಿಸಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಗೆ ಕಡಿಮೆ ಎಲ್​ಪಿಪಿ ಇರುವ ಸಿಲಿಂಡರ್​ಗಳನ್ನು ವಿತರಿಸಲು ಆಲೋಚಿಸಿವೆ. ಎಕನಾಮಿಕ್ ಟೈಮ್ಸ್​ನಲ್ಲಿ ಬಂದಿರುವ ವರದಿ ಪ್ರಕಾರ, ಈಗಿರುವ 14.2 ಕಿಲೋ ಎಲ್​ಪಿಜಿ ಬದಲು 10 ಕಿಲೋ ಎಲ್​ಪಿಜಿ ಸಿಲಿಂಡರ್​ಗಳ ವಿತರಣೆ ಮಾಡಲಾಗಬಹುದು.

ಕಡಿಮೆ ಪ್ರಮಾಣದ ಎಲ್​ಪಿಜಿ ಪೂರೈಕೆಯಿಂದ ಏನು ಲಾಭ?

ಎಲ್​ಪಿಜಿ ಲಭ್ಯತೆ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇರುವುದು. ಹೀಗಾಗಿ, ಗೃಹಬಳಕೆಗೆ ಎಲ್​ಪಿಜಿ ಕಡಿಮೆ ಪ್ರಮಾಣದ ಇರುವ ಸಿಲಿಂಡರ್ ಅನ್ನು ನೀಡಿದರೆ ಹೆಚ್ಚೆಚ್ಚು ಮನೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಒಂದು ಆಲೋಚನೆ. ಪಶ್ಚಿಮ ಏಷ್ಯಾದ ಯುದ್ಧದ ಸ್ಥಿತಿ ದೀರ್ಘಕಾಲ ಮುಂದುವರಿಯದೇ ಇದ್ದರೆ ಈ ತಂತ್ರ ಕೆಲಸ ಮಾಡುತ್ತದೆ.

ಇದನ್ನೂ ಓದಿ: PM Modi on Fertilizers: ಭಾರತದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ, ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ: ಮೋದಿ ಭರವಸೆ

ಭಾರತದ ಶೇ. 60ರಷ್ಟು ಎಲ್​ಪಿಜಿ ಅಗತ್ಯವನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಅದರ ಶೇ. 80ಕ್ಕಿಂತಲೂ ಹೆಚ್ಚು ಆಮದು ಹಾರ್ಮುಜ್ ಜಲಸಂಧಿ ಮಾರ್ಗದಿಂದ ಬರುತ್ತದೆ. ಹೀಗಾಗಿ, ಭಾರತಕ್ಕೆ ಎಲ್​ಪಿಜಿ ಬಿಕ್ಕಟ್ಟು ಬಹಳವೇ ಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇಂದು ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ, ಮಧ್ಯಪ್ರಾಚ್ಯ ಯುದ್ಧ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ಗೃಹಬಳಕೆಗೆ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ಒಂದು ಸಣ್ಣ ಕುಟುಂಬಕ್ಕೆ ಈ ಸಿಲಿಂಡರ್​ನಲ್ಲಿರುವ ಗ್ಯಾಸ್ ಒಂದರಿಂದ ಮೂರು ತಿಂಗಳವರೆಗೆ ಬಾಳಿಕೆ ಬರುತ್ತದೆ. 10 ಕಿಲೋ ಎಲ್​ಪಿಜಿ ರೀಫಿಲ್ ಆಗಿರುವ ಸಿಲಿಂಡರ್ ಸಾಮಾನ್ಯವಾಗಿ ಒಂದರಿಂದ ಎರಡು ತಿಂಗಳು ಬರಬಹುದು.

ಇದನ್ನೂ ಓದಿ: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

10 ಕಿಲೋ ಎಲ್​ಪಿಜಿ ಎಂದರೆ ಸಿಲಿಂಡರ್ ಬದಲಾಗಲ್ಲ. 14.2 ಕಿಲೋ ಎಲ್​ಪಿಜಿ ಸಿಲಿಂಡರ್​ನಲ್ಲೇ 10 ಕಿಲೋ ಎಲ್​ಪಿಜಿ ರೀಫಿಲ್ ಮಾಡಲಾಗುತ್ತದೆ. ಸಿಲಿಂಡರ್ ಮೇಲೆ ಹೊಸ ಲೇಬಲ್ ಹಾಕಲಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್