Stock Recommendation: ಈ 5 ಸ್ಟಾಕ್ಗಳು 1 ವರ್ಷದಲ್ಲಿ ಶೇ 34ರ ತನಕ ರಿಟರ್ನ್ಸ್ ನೀಡಬಹುದು ಅಂತಾರೆ ವಿಶ್ಲೇಷಕರು
ಷೇರು ವಿಶ್ಲೇಷಕರು 1 ವರ್ಷದ ಅವಧಿಗೆ ಖರೀದಿಸಲು, ಶೇ 34ರ ತನಕ ರಿಟರ್ನ್ಸ್ ನೀಡುವಂಥ 5 ಸ್ಟಾಕ್ಗಳನ್ನು ಶಿಫಾರಸು ಮಾಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟು (Russia- Ukraine Crisis), ಹೆಚ್ಚುತ್ತಿರುವ ಹಣದುಬ್ಬರ, ಕಚ್ಚಾ ತೈಲ ಬೆಲೆ ಏರಿಕೆ, ಕೇಂದ್ರ ಬ್ಯಾಂಕ್ನಿಂದ ಬಿಗಿಯಾದ ಹಣಕಾಸು ನೀತಿ, ಪೂರೈಕೆ ಕಡೆ ಸಮಸ್ಯೆ ಇವೆಲ್ಲದರ ಮಧ್ಯೆಯೂ 2022ನೇ ಇಸವಿಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಎರಡಂಕಿಯ ರಿಟರ್ನ್ಸ್ ನೀಡುವ ಸಾಧ್ಯತೆ ಇದೆ. ಕಾರ್ಪೊರೇಟ್ ಗಳಿಕೆ ಸಾಮರ್ಥ್ಯದ ಆಧಾರದ ಮೇಲೆ ರಿಟರ್ನ್ಸ್ ಅವಲಂಬನೆ ಆಗಿರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಬಹಳ ಮಂದಿ ರೀಟೇಲ್ ಹೂಡಿಕೆದಾರರಿಗೆ ಪ್ರಶ್ನೆ ಇರುತ್ತದೆ; ಒಂದು ವರ್ಷದ ತನಕ ಹೂಡಿಕೆ ಮಾಡುವ ಉದ್ದೇಶ ಇದೆ. ಯಾವ ಸ್ಟಾಕ್ನಲ್ಲಿ ಹೂಡಿಕೆ ಮಾಡಬಹುದು ಎನ್ನುತ್ತಾರೆ. ಏಂಜೆಲ್ ಒನ್ ಲಿಮಿಟೆಡ್ನ ಈಕ್ವಿಟಿ ರೀಸರ್ಚ್ ಅನಲಿಸ್ಟ್ ಯಶ್ ಗುಪ್ತಾ 5 ಸ್ಟಾಕ್ಗಳನ್ನು ಖರೀದಿಗೆ ಶಿಫಾರಸು ಮಾಡಿದ್ದಾರೆ. ಇಲ್ಲಿರುವುದು ಅವರ ವೈಯಕ್ತಿಕ ಶಿಫಾರಸು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಶೇ 34ರ ತನಕ ಏರಿಕೆ ನೀಡಬಹುದಾದ ಈ ಸ್ಟಾಕ್ ಬಗ್ಗೆ ತಿಳಿಯಿರಿ.
ಎಚ್ಡಿಎಫ್ಸಿ ಬ್ಯಾಂಕ್: ಬೆಲೆಯ ಗುರಿ- ರೂ. 1859; ಏರಿಕೆ ಸಾಧ್ಯತೆ- ಶೇ 26.24 ಇದು ದೇಶದಲ್ಲೇ ಅತಿ ದೊಡ್ಡ ಖಾಸಗಿ ಬ್ಯಾಂಕ್. ಸಾಲ ನೀಡಿರುವುದು 12 ಲಕ್ಷ ಕೋಟಿ ರೂಪಾಯಿ. 2022ರ ಹಣಕಾಸು ವರ್ಷದ ದ್ವಿತೀಯಾರ್ಧಕ್ಕೆ ಈ ಲೆಕ್ಕ ಮತ್ತು ಠೇವಣಿ ಮೊತ್ತ 14 ಲಕ್ಷ ಕೋಟಿ ರೂಪಾಯಿ. ಹಣಕಾಸು ವರ್ಷ 2023ರಲ್ಲಿ ಬೆಳವಣಿಗೆ ಮರುಕಳಿಸುವ ನಿರೀಕ್ಷೆ ಇದೆ. ಎಚ್ಡಿಎಫ್ಸಿ ಬ್ಯಾಂಕ್ ಷೇರಿನ ಬೆಲೆ 1859 ರೂಪಾಯಿ ತಲುಪಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಇನ್ಫೋಸಿಸ್: ಬೆಲೆಯ ಗುರಿ- ರೂ. 2205; ಏರಿಕೆ ಸಾಧ್ಯತೆ- ಶೇ 15.59 ಇನ್ಫೋಸಿಸ್ಗೆ ಪ್ರಬಲವಾದ ಹೊಸ ವ್ಯವಹಾರಗಳು ಬಂದಿರುವ ಬಗ್ಗೆ ವರದಿ ಮಾಡಲಾಗಿದೆ. ಅದು ಹಣಕಾಸು ವರ್ಷದ ಮೂರನೇ ತ್ರೈಮಾಸಿಕಕ್ಕೆ 253 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ್ದು ವ್ಯವಹಾರ ಬರಬೇಕಿದೆ. ಬಹಳ ದೀರ್ಘಕಾಲ ಸಮಯಕ್ಕೆ ಅತಿ ಹೆಚ್ಚಿನ ಮಟ್ಟದ್ದು ಇದಾಗಿದೆ. ಲಾರ್ಜ್ ಕ್ಯಾಪ್ ಸ್ಟಾಕ್ಗಳ ಪೈಕಿ ಟಾಪ್ ಪರ್ಫಾರ್ಮರ್ಗಳಲ್ಲಿ ಇನ್ಫೋಸಿಸ್ ಒಂದಾಗಲಿದೆ. 2205 ರೂಪಾಯಿಗಳ ಗುರಿಯೊಂದಿಗೆ ಇನ್ಫೋಸಿಸ್ ಖರೀದಿಸಬಹುದು ಎನ್ನಲಾಗಿದೆ.
ಡಿವೀಸ್ ಲ್ಯಾಬೋರೇಟರೀಸ್: ಬೆಲೆಯ ಗುರಿ- ರೂ. 5200; ಏರಿಕೆ ಸಾಧ್ಯತೆ- ಶೇ 14.14 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕಕ್ಕೆ ಈ ಸ್ಟಾಕ್ ಅತ್ಯುತ್ತಮ ಫಲಿತಾಂಶ ನೀಡಿದೆ. ದೀರ್ಘ ಕಾಲಕ್ಕೆ ಇದರಿಂದ ಎರಡಂಕಿಯ ಮಾರಾಟವನ್ನು ತಲುಪಬಹುದು ಎಂಬ ನಿರೀಕ್ಷೆ ಇದೆ. ಫಾರ್ಮಾಸ್ಯುಟಿಕಲ್ ವಲಯದಲ್ಲಿ ಡಿವೀಸ್ ಟಾಪ್ ಪರ್ಫಾರ್ಮರ್ ಆಗುವ ಭರವಸೆ ಇದ್ದು, ಈ ಸ್ಟಾಕ್ ಬೆಲೆ 5200 ರೂಪಾಯಿ ಎಂದು ಗುರಿ ಇಟ್ಟುಕೊಳ್ಳಲಾಗಿದೆ.
ಐಸಿಐಸಿಐ ಬ್ಯಾಂಕ್: ಬೆಲೆಯ ಗುರಿ- ರೂ. 900; ಏರಿಕೆ ಸಾಧ್ಯತೆ- ಶೇ 23.28 ಭಾರತದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್. ಅದರ ಸಾಲ ನೀಡಿದ ಪ್ರಮಾಣ 2022ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ 7.6 ಲಕ್ಷ ಕೋಟಿ ಇದ್ದು, ಠೇವಣಿ 9.8 ಲಕ್ಷ ಕೋಟಿ ರೂ. ಇದೆ. ಕಳೆದ ಕೆಲವು ವರ್ಷಗಳಲ್ಲಿ ಐಸಿಐಸಿಐ ಬ್ಯಾಂಕ್ ಕಾರ್ಯ ನಿರ್ವಹಣೆಯಲ್ಲಿ ಮಹತ್ತರ ಬದಲಾವಣೆ ಆಗಿದೆ. ಈ ಸ್ಟಾಕ್ನ ಬೆಲೆ 900 ರೂಪಾಯಿ ಆಗಬಹುದು ಎಂದು ಗುರಿ ಇರಿಸಿಕೊಳ್ಳಲಾಗಿದೆ.
ಒಬೇರಾಯ್ ರಿಯಾಲ್ಟೀಸ್: ಬೆಲೆಯ ಗುರಿ- ರೂ. 1250; ಏರಿಕೆ ಸಾಧ್ಯತೆ- ಶೇ 33.83 ಒಬೇರಾಯ್ ರಿಯಾಲ್ಟಿ ಎಂಬುದು ರಿಯಲ್ ಎಸ್ಟೇಟ್ ಕಂಪೆನಿ. ವಸತಿ ಹಾಗೂ ವಾಣಿಜ್ಯ ಎರಡೂ ಬಗೆಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತದೆ. ಇದಕ್ಕೆ ವೈವಿಧ್ಯಮಯವಾದ ಮೂಲಗಳ ಮೂಲಕ ಆದಾಯ ಬರುತ್ತದೆ. ಈ ಷೇರಿನ ಏರಿಕೆ ಗುರಿ ರೂ. 1250 ಎಂದು ಅಂದಾಜಿಸಲಾಗಿದೆ.
(ಎಚ್ಚರಿಕೆ: ಸ್ಟಾಕ್ ಖರೀದಿ ಶಿಫಾರಸು ಆಯಾ ಬ್ರೋಕರೇಜ್ ಹೌಸ್ ಮತ್ತು ವಿಶ್ಲೇಷಕರದು. ಹಣಕಾಸಿನ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಜತೆಗೆ ವೈಯಕ್ತಿಕ ನಿರ್ಧಾರ ಮಾಡಬೇಕಾಗುತ್ತದೆ)
ಇದನ್ನೂ ಓದಿ: Paytm: ಪೇಟಿಎಂಗೆ ಗ್ರಾಹಕರು ಸಿಕ್ಕಿರುವುದು ಕ್ಯಾಶ್ಬ್ಯಾಕ್ಗಳಿಂದಲೇ ಹೊರತು ಸೇವೆಯಿಂದಲ್ಲ ಎಂದ ಹಿರಿಯ ಬ್ಯಾಂಕರ್