ಮಧ್ಯಮವರ್ಗದ ಸಂಖ್ಯೆ ಎರಡು ದಶಕದಲ್ಲಿ ಎರಡು ಪಟ್ಟು ಹೆಚ್ಚಳ ಸಾಧ್ಯತೆ; ಭಾರತದ ಆರ್ಥಿಕ ಪರಾಮರ್ಶೆ ಬಿಚ್ಚಿಟ್ಟ ಹಣಕಾಸು ಇಲಾಖೆ
2023 July Economic review report: ಸರ್ಕಾರದ ಬಂಡವಾಳ ವೆಚ್ಚವು ಮುಂಬರುವ ವರ್ಷಗಳಲ್ಲಿ ಆರ್ಥಿಕ ಪ್ರಗತಿಗೆ ಪುಷ್ಟಿ ಕೊಡುತ್ತದೆ. 2030ಕ್ಕಿಂತ ಬಹಳ ಮೊದಲೇ ಬಡತನ ನಿವಾರಣೆಯ ಗುರಿ ತಲುಪುತ್ತೇವೆ ಎಂದು ಕೇಂದ್ರ ವಿತ್ತ ಸಚಿವಾಲಯ ತನ್ನ ಜುಲೈ ತಿಂಗಳ ಮಾಸಿಕ ಆರ್ಥಿಕ ವಿಮರ್ಶಾ ವರದಿಯಲ್ಲಿ ತಿಳಿಸಿದೆ. ಈ ವರದಿಯ ಹೈಲೈಟ್ಸ್ ಇಲ್ಲಿವೆ...
ನವದೆಹಲಿ, ಆಗಸ್ಟ್ 22: ಭಾರತದಲ್ಲಿ ನಿರೀಕ್ಷೆಗಿಂತ ವೇಗದಲ್ಲಿ ಬಡತನ (Multidimensional Poverty) ನಿವಾರಣೆ ಆಗುತ್ತದೆ ಎಂದು ಕೇಂದ್ರ ಹಣಕಾಸು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಜುಲೈ ತಿಂಗಳ ಮಾಸಿಕ ಆರ್ಥಿಕ ವಿಮರ್ಶಾ ವರದಿಯನ್ನು (Monthly Economic Review) ಬಿಡುಗಡೆ ಮಾಡಿರುವ ಹಣಕಾಸು ಸಚಿವಾಲಯ, ಮುಂದಿನ 23 ವರ್ಷಗಳಲ್ಲಿ ಭಾರತದಲ್ಲಿ ಮಧ್ಯಮವರ್ಗದ ಸಂಖ್ಯೆ ಎರಡು ಪಟ್ಟು ಹೆಚ್ಚುವ ಸಾಧ್ಯತೆಯನ್ನು ತೋರಿಸಿದೆ. ಹಾಗೆಯೇ, ಸದ್ಯ ಹಣದುಬ್ಬರಕ್ಕೆ ಕಾರಣವಾಗಿರುವ ಆಹಾರವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಣಕಾಸು ಇಲಾಖೆ ತನ್ನ ವರದಿಯಲ್ಲಿ ಮಾಹಿತಿ ನೀಡಿದೆ. ಈ ಬಾರಿ ಮುಂಗಾರು ಬೆಳೆಗಳು ಉತ್ತಮವಾಗಿ ಬರುವ ಸಾಧ್ಯತೆ ಇರುವುದರಿಂದ ಆಹಾರ ಭದ್ರತೆಗೆ ಸಹಾಯವಾಗುತ್ತದೆ ಎಂದು ಹೇಳಿದೆ.
ಕೇಂದ್ರ ಹಣಕಾಸು ಸಚಿವಾಲಯದ 2023 ಜುಲೈನ ಮಾಸಿಕ ವಿಮರ್ಶಾ ವರದಿಯ ಮುಖ್ಯಾಂಶಗಳು:
- ಬಂಡವಾಳ ವೆಚ್ಚಕ್ಕೆ ಸರ್ಕಾರದ ಆದ್ಯತೆ ಮುಂದುವರಿದಿರುವುದು ಮುಂದಿನ ವರ್ಷಗಳಲ್ಲಿ ಪ್ರಗತಿಗೆ ಪುಷ್ಟಿ ಕೊಡುತ್ತದೆ.
- ಪಿಎಂ ಗತಿಶಕ್ತಿ ಯೋಜನೆ ಮತ್ತು ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ಲೈನ್ ಸಮನ್ವಯತೆಯಲ್ಲಿ ಹೊಸ ಇನ್ಫ್ರಾಸ್ಟ್ರಕ್ಚರ್ ರೂಪಿಸಲು ಖಾಸಗಿ ವಲಯಕ್ಕೆ ಉತ್ತೇಜನ ಸಿಗುತ್ತದೆ.
ಇದನ್ನೂ ಓದಿ: Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್
Ministry of Finance @FinMinIndia releases Monthly Economic Review #MER for July 2023.
For full report ➡️ https://t.co/1roVzBXVo7
Key highlights 👇 pic.twitter.com/OB5ZIVjKgL
— Ministry of Finance (@FinMinIndia) August 22, 2023
- ಸರ್ಕಾರದ ಇತ್ತೀಚಿನ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಕಾರಣವಾಗಬಹುದು.
- ಆಹಾರ ವಸ್ತುಗಳ ಬೆಲೆ ಒತ್ತಡ ಸ್ಥಿತಿ ತಾತ್ಕಾಲಿಕ ಆಗಿರಬಹುದು. ಕೃಷಿ ವಲಯದ ಸ್ಥಿರ ಸಾಧನೆ ಇದಕ್ಕೆ ನಿದರ್ಶನ.
- ಆಹಾರ ಭದ್ರತೆಗಾಗಿ ಆಹಾರಧಾನ್ಯಗಳ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಗೋಧಿ ಮತ್ತು ಅಕ್ಕಿ ಖರೀದಿಸುವ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದೆ.
- ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಿಸಿರುವುದು ಮತ್ತು ಆರೋಗ್ಯಯುತ ಮುಂಗಾರು ಬೆಳೆ ಸಾಧ್ಯತೆಯು ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಬಲ ಒದಗಿಸುತ್ತವೆ.
- ಸರ್ವಿಸ್ ಸೆಕ್ಟರ್ ವಲಯದ ರಫ್ತು ಹೆಚ್ಚಳ ಜೊತೆ ಭಾರತದ ಬಾಹ್ಯ ವಲಯವೂ ಬಲ ತೋರಿಸಿದೆ. ಭಾರತದಲ್ಲಿ ಹೂಡಿಕೆಗಳು ಹರಿದುಬರುತ್ತಿರುವುದು ಆರ್ಥಿಕ ಪ್ರಗತಿ ಬಗ್ಗೆ ಹೂಡಿಕೆದಾರರಿಗೆ ಇರುವ ವಿಶ್ವಾಸವನ್ನು ತೋರಿಸುತ್ತಿದೆ.
ಇದನ್ನೂ ಓದಿ: ಇನ್ಫೋಸಿಸ್ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್ನ ಯಶೋಗಾಥೆ
- ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚಿ (Multi-dimensional poverty index) 2025-16ರಿಂದ 2019-21ರ ಅವಧಿಯಲ್ಲಿ ಅರ್ಧದಷ್ಟು ಕಡಿಮೆ ಆಗಿದೆ. ಮಲ್ಟಿಡೈಮೆನ್ಷನಲ್ ಪಾವರ್ಟಿ ವಿಚಾರದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ (SDG- Sustainable development Target) ಈಡೇರಿಸಲು ನಿಗದಿ ಮಾಡಿರುವ 2030ರ ಟೈಮ್ಲೈನ್ಗಿಂತ ಬಹಳ ಮುಂಚೆಯೇ ಭಾರತ ತನ್ನ ಎಸ್ಡಿಜಿ ಗುರಿ ತಲುಪುತ್ತದೆ.
- 2046-47ರಲ್ಲಿ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಮಧ್ಯಮವರ್ಗದ ಪ್ರಮಾಣ ಶೇ. 31ರಿಂದ ಶೇ. 61ಕ್ಕೆ ಹೆಚ್ಚುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ