ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನ ಖರೀದಿ; 21 ವರ್ಷದಲ್ಲಿ ಸರಾಸರಿ ರಿಟರ್ನ್ಸ್ ಶೇ. 15ಕ್ಕಿಂತಲೂ ಅಧಿಕ

ಕಳೆದ 21 ವರ್ಷಗಳಿಂದ ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನ ಖರೀದಿಸಿದರೆ ನಿಮ್ಮ ಬಳಿ ಇರುವ ಚಿನ್ನದ ಈಗಿನ ಮೌಲ್ಯ ಎಷ್ಟಿರಬಹುದು? 21 ವರ್ಷದಲ್ಲಿ 21 ಗ್ರಾಮ್ ಚಿನ್ನ ಖರೀದಿಸಲು ನೀವು ವ್ಯಯಿಸುವ ಹಣ 76,246 ರೂ. 21 ಗ್ರಾಮ್ ಚಿನ್ನದ ಈಗಿನ ಮೌಲ್ಯ 3 ಲಕ್ಷ ರೂಗಿಂತಲೂ ಅಧಿಕ. 21 ವರ್ಷದಲ್ಲಿ ಚಿನ್ನ ಶೇ. 15ಕ್ಕಿಂತಲೂ ಹೆಚ್ಚು ಸರಾಸರಿ ರಿಟರ್ನ್ಸ್ ಕೊಟ್ಟಿದೆ.

ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನ ಖರೀದಿ; 21 ವರ್ಷದಲ್ಲಿ ಸರಾಸರಿ ರಿಟರ್ನ್ಸ್ ಶೇ. 15ಕ್ಕಿಂತಲೂ ಅಧಿಕ
ಚಿನ್ನ
Image Credit source: PTI

Updated on: Nov 08, 2026 | 4:42 PM

ನವದೆಹಲಿ, ನವೆಂಬರ್ 8: ದೀಪಾವಳಿ ವೇಳೆ ಬರುವ ಧನತ್ರಯೋದಶಿ ಅಥವಾ ಧಂತೇರಾಸ್ ದಿನದಂದು ಚಿನ್ನ ಇತ್ಯಾದಿ ವಸ್ತುವನ್ನು ಖರೀದಿಸಿದರೆ ಶುಭವೆನ್ನುವ ನಂಬಿಕೆ ಭಾರತೀಯರಲ್ಲಿದೆ. ಅಂತೆಯೇ, ಆ ದಿನ ಲಕ್ಷಾಂತರ ಜನರು ಚಿನ್ನವನ್ನು ಖರೀದಿಸುವುದುಂಟು. ಪ್ರತೀ ವರ್ಷವೂ ಜನರು ಶಾಸ್ತ್ರೋಕ್ತವಾಗಿಯಾದರೂ ಚಿನ್ನವನ್ನು ಖರೀದಿಸುತ್ತಾರೆ. ಹೀಗೆ ಪ್ರತೀ ವರ್ಷ ಒಂದು ಗ್ರಾಮ್ ಚಿನ್ನವನ್ನು ಖರೀದಿಸಿದರೆ ಹೇಗೆ? ಕಳೆದ 21 ವರ್ಷಗಳಿಂದ ಪ್ರತೀ ವರ್ಷ ಒಂದು ಗ್ರಾಮ್ ಚಿನ್ನವನ್ನು ಯಾರಾದರೂ ಖರೀದಿಸಿದ್ದರೆ ಅವರ ಹೂಡಿಕೆಗೆ ಸಿಗುವ ರಿಟರ್ನ್ ಶೇ. 15ಕ್ಕಿಂತ ಮೇಲ್ಪಟ್ಟಾಗುತ್ತದೆ.

2005ರಿಂದ 2025ರವರೆಗೆ ವರ್ಷಕ್ಕೆ 1 ಗ್ರಾಮ್ ಚಿನ್ನ ಖರೀದಿಸಿದರೆ…

  • ವರ್ಷಕ್ಕೆ 1 ಗ್ರಾಮ್​ನಂತೆ 21 ವರ್ಷಕ್ಕೆ 21 ಗ್ರಾಮ್
  • ಹೂಡಿಕೆಯಾದ ಹಣ: 76,246 ರೂ
  • 21 ಗ್ರಾಮ್​ಗೆ ಇವತ್ತಿನ ಮೌಲ್ಯ: 3.02 ಲಕ್ಷ ರೂ
  • ವಾರ್ಷಿಕ ರಿಟರ್ನ್: ಶೇ. 15.40

ಇದನ್ನೂ ಓದಿ: Gold Rates 08 November: ಚಿನ್ನದ ಬೆಲೆ ಈ ವಾರ 430 ರೂ ಏರಿಕೆ; ಇಲ್ಲಿದೆ ದರಪಟ್ಟಿ

Loading...

ಈ ವೇಳೆ, ಹೂಡಿಕೆಯಾದ ಹಣಕ್ಕೆ ಬಹುತೇಕ 4 ಪಟ್ಟು ಹೆಚ್ಚು ಮೌಲ್ಯ ಸಿಕ್ಕಿದೆ. ವಾರ್ಷಿಕವಾಗಿ ಹೂಡಿಕೆ ಮೌಲ್ಯ ಶೇ. 15.40ರಷ್ಟು ಹೆಚ್ಚಾಗಿದೆ.

ಪ್ರತಿ ವರ್ಷ 100 ಗ್ರಾಮ್ ಬೆಳ್ಳಿ ಖರೀದಿಸಿದರೆ…

ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನದಂತೆ 100 ಗ್ರಾಮ್ ಬೆಳ್ಳಿಯನ್ನೂ ಖರೀದಿಸುತ್ತಾ ಬಂದಿದ್ದರೆ 21 ವರ್ಷದಲ್ಲಿ 2.1 ಕಿಲೋ ಬೆಳ್ಳಿ ನಿಮ್ಮೊಂದಿಗೆ ಇರುತ್ತದೆ.

ಇದಕ್ಕೆ ನೀವು ಮಾಡುವ ಹೂಡಿಕೆ 1.05 ಲಕ್ಷ ರೂ ಆಗಿದ್ದರೆ, ಅದರ ಮೌಲ್ಯ ಇವತ್ತು 3.94 ಲಕ್ಷ ರೂ ಆಗಿರುತ್ತಿತ್ತು. ಚಿನ್ನವು ಶೇ. 15.40 ವಾರ್ಷಿಕ ದರದಲ್ಲಿ ಮೌಲ್ಯ ಹೆಚ್ಚಿಸಿಕೊಂಡರೆ, ಬೆಳ್ಳಿಯ ವಾರ್ಷಿಕ ದರ ಶೇ. 13.80 ಆಗುತ್ತದೆ.

ಇದನ್ನೂ ಓದಿ: ಹೊಸ ವರ್ಷದಿಂದ ಹೊಸ ಚೆಕ್​ಬುಕ್ ನಿಯಮಗಳು ಬರುತ್ತವಾ? ವದಂತಿ ತಳ್ಳಿಹಾಕಿದ ಆರ್​ಬಿಐ

ಚಿನ್ನ ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ನಷ್ಟ ತಂದಿದ್ದೇ ಇಲ್ಲ. ಆದರೆ, ನಿಮ್ಮ ಎಲ್ಲಾ ಹೂಡಿಕೆಯನ್ನೂ ಚಿನ್ನದ ಮೇಲೆ ಕೇಂದ್ರೀಕರಿಸಬೇಡಿ ಎಂದು ಹಲವು ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us