ಹೊಸ ವರ್ಷದಿಂದ ಹೊಸ ಚೆಕ್ಬುಕ್ ನಿಯಮಗಳು ಬರುತ್ತವಾ? ವದಂತಿ ತಳ್ಳಿಹಾಕಿದ ಆರ್‌ಬಿಐ
2027ರ ಜನವರಿ 1ರಿಂದ ಹೊಸ ಚೆಕ್ ಬುಕ್ ನಿಯಮಗಳು ಜಾರಿಗೆ ಬರಲಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಯೊಂದು ವೈರಲ್ ಆಗುತ್ತಿದೆ. ಇದು ಕೇವಲ ವದಂತಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟವಾಗಿ ತಳ್ಳಿಹಾಕಿದೆ. ಪ್ರಸ್ತುತ ಬಳಕೆಯಲ್ಲಿರುವ ಚೆಕ್ ಬುಕ್‌ಗಳು ಎಂದಿನಂತೆ ಮುಂದುವರಿಯಲಿವೆ. ಹೊಸ ಚೆಕ್ ಬುಕ್‌ಗಳು ಕಡ್ಡಾಯವಿಲ್ಲ ಎಂದು ಹೇಳಿದೆ.

ನವದೆಹಲಿ, ನವೆಂಬರ್ 8: ಹೊಸ ವರ್ಷದಿಂದ ಹೊಸ ಸೆಕ್ಯೂರಿಟಿ ಫೀಚರ್ಸ್ ಇರುವ ಹೊಸ ‘ಚೆಕ್ ಟ್ರಂಕೇಶನ್ ಸಿಸ್ಟಮ್’ (CTS) ಚೆಕ್ ಬುಕ್‌ಗಳು ಕಡ್ಡಾಯವಾಗಿ ಬರಲಿವೆ ಎಂಬ ಸಂದೇಶಗಳು ಹರಿದಾಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸುದ್ದಿಯನ್ನು ತಳ್ಳಿಹಾಕಿದೆ. ಇಂಥ ಯಾವುದೇ ಪ್ರಸ್ತಾಪ ಆರ್‌ಬಿಐ ಬಳಿ ಇಲ್ಲ. ಇದು ಸದ್ಯಕ್ಕೆ ದೂರವಾದ ಮತ್ತು ದಾರಿ ತಪ್ಪಿಸುವ ಸುಳ್ಳು ವರದಿ ಎಂದು ಸ್ಪಷ್ಟಪಡಿಸಿದೆ.
ಹಳೆಯ ಚೆಕ್ ಬುಕ್ ನಿಯಮಗಳೇ ಮುಂದುವರಿಕೆ
ಪ್ರಸ್ತುತ ಚಾಲ್ತಿಯಲ್ಲಿರುವ ಚೆಕ್ ಬುಕ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಡಿಸೆಂಬರ್ 31, 2026 ರ ನಂತರ ಹಳೆಯ ಚೆಕ್ ಬುಕ್‌ಗಳು ಅಮಾನ್ಯವಾಗುತ್ತವೆ ಎಂಬ ವಾದಗಳು ಸಂಪೂರ್ಣವಾಗಿ ತಪ್ಪು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ: ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ
ಅಧಿಕೃತ ಮಾಹಿತಿಯಷ್ಟೇ ನಂಬಲು ಮನವಿ: ಬ್ಯಾಂಕಿಂಗ್ ನಿಯಮಗಳು ಮತ್ತು ಚೆಕ್ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬದೆ, ಕೇವಲ ಆರ್‌ಬಿಐನ ಅಧಿಕೃತ ಪ್ರಕಟಣೆಗಳು ಮತ್ತು ವೆಬ್‌ಸೈಟ್ ಮೂಲಕ ಬರುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಆರ್‌ಬಿಐ ಎಚ್ಚರಿಸಿದೆ.
ಸುಳ್ಳು ಸುದ್ದಿಯಲ್ಲಿ ತಿಳಿಸಿರುವ ಹೊಸ ನಿಯಮಗಳೇನು?
- 2027ರ ಜನವರಿ 1ರಿಂದ ಹೊಸ ಚೆಕ್ ಸಿಸ್ಟಂ ಜಾರಿಗೆ ಬರುತ್ತದೆ. ಹಳೆಯ ಚೆಕ್ಗೆ 50,000 ರೂ ಮಿತಿ ಇರುತ್ತದೆ.
- ಹೊಸ ಚೆಕ್ನಲ್ಲಿ ಅಕ್ಷರ ಅಂಕಿ ಸಂಯೋಜನೆಯ ಸಂಖ್ಯೆ, ಹೊಸ ಎಂಐಸಿಆರ್ ಕೋಡ್ ಇರುತ್ತದೆ.
- ಕೋಡ್ವೊಂದನ್ನು ಮರೆಮಾಚಲಾಗಿರುತ್ತದೆ. ಅದು ಯುವಿ ಮೂಲಕವಷ್ಟೇ ಕಾಣುಬಲ್ಲುದು.
- ಪ್ರತೀ ಚೆಕ್ ಹಾಳೆಯೂ ಅರ್ಬಿಐ ಸಿಸ್ಟಂ ಜೊತೆ ನೇರವಾಗಿ ಲಿಂಕ್ ಆಗಿರುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ ಆರ್‌ಬಿಐ ಟ್ವೀಟ್
It has come to the notice of the Reserve Bank of India that a message is circulating on social media claiming that the standard Cheque Truncation System (CTS) cheque books currently in use will change from December 31, 2026 and the new cheque books featuring updated security standards will come into effect from January 1, 2027.
It is clarified that at present Reserve Bank of India is not introducing any such measures with regard to the CTS cheque books. As such, the message is factually incorrect and misleading.
Members of public are requested to rely only on the information published by RBI from time to time in such matters.
— ReserveBankOfIndia (@RBI) November 7, 2026
ಈ ಮೇಲಿನ ಅಂಶಗಳನ್ನೊಳಗೊಂಡ ನೋಟೀಸ್ ಅನ್ನು ಆರ್‌ಬಿಐ ಹೆಸರಿನಲ್ಲಿ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ. ಇದೆಲ್ಲಾ ವದಂತಿ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




