Savings Account Interest: ಭಾರತದ ಪ್ರಮುಖ ಬ್ಯಾಂಕ್​ಗಳ ಪೈಕಿ ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿ ದರ ಎಲ್ಲಿ ಗೊತ್ತಾ?

ಭಾರತದ ಪ್ರಮುಖ ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಈ ಲೇಖನದಲ್ಲಿದೆ. ಗರಿಷ್ಠ ಶೇ 6ರ ತನಕ ಸೇವಿಂಗ್ಸ್ ಅಕೌಂಟ್ ಬಡ್ಡಿ ದೊರೆಯುತ್ತದೆ.

Savings Account Interest: ಭಾರತದ ಪ್ರಮುಖ ಬ್ಯಾಂಕ್​ಗಳ ಪೈಕಿ ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿ ದರ ಎಲ್ಲಿ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 15, 2022 | 11:59 AM

ಬ್ಯಾಂಕ್​ಗಳಲ್ಲಿ ಶುರು ಮಾಡುವ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (Savings Bank Account) ಅಥವಾ ಉಳಿತಾಯ ಖಾತೆ ಎಂಬುದು ಪ್ರಾಥಮಿಕವಾದ ಬ್ಯಾಂಕ್ ಖಾತೆ. ಸ್ವ ಉದ್ಯೋಗಿಗಳು, ಸಂಬಳದಾರರು ಹೀಗೆ ಒಂದು ಬಗೆಯಲ್ಲಿ ಆದಾಯ ಇರುವಂಥವರು ತಮ್ಮ ಹಣವನ್ನು ಉಳಿತಾಯ ಮಾಡುವುದಕ್ಕೆ ಹಾಗೂ ಅಗತ್ಯ ಬಿದ್ದಾಗ ವಿಥ್​ಡ್ರಾ ಮಾಡುವುದಕ್ಕೆ ಬಳಸಬಹುದು. ತಕ್ಷಣವೇ ಹಣ ಬೇಕೆಂದಾಗ ದೊರೆಯುತ್ತದೆ ಮತ್ತು ಬಡ್ಡಿ ಸಿಗುತ್ತದೆ ಎಂಬುದು ಇದರ ಅನುಕೂಲ. ಆ ಉಳಿತಾಯ ಖಾತೆಯಲ್ಲಿ ಇರುವ ಮೊತ್ತದ ಮೇಲೆ ಬಡ್ಡಿ ಅಂತೂ ಸಿಗುತ್ತದೆ. ಹಿರಿಯ ಪೆನ್ಷನರ್​ಗಳ ಮಧ್ಯದಲ್ಲಿ ಉಳಿತಾಯ ಖಾತೆ ಬಹಳ ಜನಪ್ರಿಯವಾದದ್ದು. ಅಥವಾ ಕೆಲವು ತಿಂಗಳ ವೇತನವನ್ನು ಕೈಯಲ್ಲಿ ಇಟ್ಟುಕೊಳ್ಳಲು ಬಯಸುವವರಿಗೂ ಇದು ಸೂಕ್ತ. ಬ್ಯಾಂಕ್​ಗಳಲ್ಲಿ ವಿವಿಧ ಬಗೆಯ ಉಳಿತಾಯ ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುತ್ತವೆ.

ವೇತನ ಖಾತೆ, ಹಿರಿಯ ನಾಗರಿಕರ ಉಳಿತಾಯ ಖಾತೆ, ಶೂನ್ಯ ಬ್ಯಾಲೆನ್ಸ್ ಖಾತೆ ಇವೆಲ್ಲ ಬಹಳ ಪ್ರಖ್ಯಾತವಾದವು. ಉಳಿತಾಯ ಖಾತೆ ಮೇಲೆ ಬಡ್ಡಿ ದರವನ್ನು ಸಾಮಾನ್ಯವಾಗಿ ದೈನಂದಿನ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಆ ದಿನದ ಕೊನೆಗೆ ಎಷ್ಟು ಬಾಕಿ ಇರುತ್ತದೆ ಎಂಬುದರ ಆಧಾರದ ಮೇಲೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಆ ನಂತರ ಮೊತ್ತವನ್ನು ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಅದು ಶೇ 4ರಿಂದ 7.1ರ ಮಧ್ಯೆ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಭಾರತದ ಬ್ಯಾಂಕ್​ಗಳು ವಿದೇಶೀ ಬ್ಯಾಂಕ್​ಗಳು ಉಳಿತಾಯ ಖಾತೆ ಮೇಲೆ ನೀಡುವ ಬಡ್ಡಿ ದರದ ಹೋಲಿಕೆಯನ್ನು ಇಲ್ಲಿ ನಿಮ್ಮೆದುರು ಇಡಲಾಗಿದೆ.

DBS ಬ್ಯಾಂಕ್ * ರೂ. 1 ಲಕ್ಷವರೆಗಿನ ಬಾಕಿಗೆ ಶೇ 3.25ರ ಬಡ್ಡಿದರಗಳನ್ನು ಪಡೆಯುತ್ತದೆ* ರೂ. 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಹಾಗೂ ರೂ. 2 ಲಕ್ಷದವರೆಗೆ ಹೆಚ್ಚಿನ ಮೊತ್ತದ ಮೇಲೆ ಶೇ 3.5 ಪಡೆಯುತ್ತವೆ** ರೂ 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಹಾಗೂ ರೂ. 5 ಲಕ್ಷಗಳ ತನಕ ಹೆಚ್ಚಿನ ಮೊತ್ತದ ಮೇಲೆ ಶೇ 4 ಅನ್ನು ಪಡೆಯುತ್ತವೆ** ರೂ. 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಹಾಗೂ ರೂ. 5 ಕೋಟಿಗಳು ಅದರ ಮೇಲೆ ಹೆಚ್ಚಿನ ಮೊತ್ತದ ಮೇಲೆ ಶೇ 3 ಅನ್ನು ಪಡೆಯುತ್ತವೆ** ರೂ. 5 ಕೋಟಿಗಳು ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಅದರ ಮೇಲೆ ಹೆಚ್ಚಿನ ಮೊತ್ತದ ಮೇಲೆ ಶೇ 3.75 ದೊರೆಯುತ್ತದೆ.

ಎಚ್​ಎಸ್​ಬಿಸಿ ಬ್ಯಾಂಕ್ 10 ಕೋಟಿ ರೂಪಾಯಿವರೆಗಿನ ಮೊತ್ತದ ಮೇಲೆ ಶೇ 2 ರೂ. 10 ಕೋಟಿಗಿಂತ ಹೆಚ್ಚಿನ ಠೇವಣಿಗಳ ಮೇಲೆ ಶೇ 2.50

ಸ್ಟ್ಯಾಂಡರ್ಡ್ ಚಾರ್ಟರ್ಡ್ * 50 ಲಕ್ಷ ರೂಪಾಯಿವರೆಗಿನ ಬಾಕಿಗೆ ಶೇ 2.75 * 50 ಲಕ್ಷಕ್ಕಿಂತ ಹೆಚ್ಚಿನ ಮತ್ತು 40 ಕೋಟಿ ರೂಪಾಯಿವರೆಗಿನ ಬಾಕಿ ಮೇಲೆ ಶೇ 3.25 * ರೂ 40 ಕೋಟಿಗಿಂತ ಹೆಚ್ಚಿನ ಠೇವಣಿಗಳಿಗೆ ಶೇ 0.50

ಇದನ್ನೂ ಓದಿ:Small Savings Account: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಯಥಾ ಸ್ಥಿತಿ ಉಳಿಸಿದ ಕೇಂದ್ರ ಹಣಕಾಸು ಸಚಿವಾಲಯ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್