AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

RBI Under Pressure as India's Retail Inflation Jumps: ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ 3.93% ಕ್ಕೆ ಏರಿ, ಸತತ ಐದನೇ ತಿಂಗಳು ಹೆಚ್ಚಳ ಕಂಡಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ, ಸಾರಿಗೆ ವೆಚ್ಚ ಮತ್ತು ಚಿನ್ನದ ದರಗಳ ಜಿಗಿತವೇ ಇದಕ್ಕೆ ಪ್ರಮುಖ ಕಾರಣ. ಗ್ರಾಮೀಣ ಪ್ರದೇಶಗಳಲ್ಲಿ ಬೆಲೆ ಏರಿಕೆಯ ಬಿಸಿ ತೀವ್ರವಾಗಿದೆ. ಆರ್‌ಬಿಐ ತನ್ನ ಗುರಿಯ ಸಮೀಪ ಹಣದುಬ್ಬರವನ್ನು ತಲುಪುತ್ತಿದ್ದು, ಮುಂಗಾರು ವೈಫಲ್ಯ ಅಥವಾ ಕಚ್ಚಾ ತೈಲ ಏರಿಕೆಯಾದರೆ ಬಡ್ಡಿದರ ಹೆಚ್ಚಳದ ಸವಾಲು ಎದುರಿಸಲಿದೆ.

ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು
ಹಣದುಬ್ಬರImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2026 | 6:15 PM

Share

ನವದೆಹಲಿ, ಜೂನ್ 12: ಭಾರತದ ಚಿಲ್ಲರೆ ಹಣದುಬ್ಬರ (Retail Inflation) ಸತತವಾಗಿ ಏರುವುದು ಮುಂದುವರಿದಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೇ ತಿಂಗಳಲ್ಲಿ ರೀಟೇಲ್ ಇನ್​ಫ್ಲೇಶನ್ ಏಪ್ರಿಲ್​ನದಕ್ಕಿಂತ 45 ಮೂಲಾಂಕಗಳಷ್ಟು ಹೆಚ್ಚಳಗೊಂಡಿದೆ. ಏಪ್ರಿಲ್ ತಿಂಗಳಲ್ಲಿದ್ದ ಶೇ. 3.48 ರಿಂದ ಮೇ ತಿಂಗಳಲ್ಲಿ ಶೇ. 3.93 ಕ್ಕೆ ವೇಗ ಪಡೆದುಕೊಂಡಿದೆ. ಇದು ಸತತ ಐದನೇ ತಿಂಗಳ ಹೆಚ್ಚಳವಾಗಿದ್ದು, ಕಳೆದೆರಡು ತಿಂಗಳುಗಳಿಗೆ ಹೋಲಿಸಿದರೆ ಬೆಲೆ ಏರಿಕೆಯ ಒತ್ತಡ ತೀವ್ರವಾಗುತ್ತಿರುವುದನ್ನು ತೋರಿಸುತ್ತದೆ.

ಆಹಾರ ಪದಾರ್ಥಗಳ ಬೆಲೆಯೇ ಪ್ರಮುಖ ಕಾರಣ

ಹಣದುಬ್ಬರ ಹೆಚ್ಚಾಗಲು ಪ್ರಮುಖ ಕಾರಣ ಆಹಾರ ಪದಾರ್ಥಗಳ ಬೆಲೆ ಏರಿಕೆ (Food Inflation). ಆಹಾರ ಹಣದುಬ್ಬರವು ಏಪ್ರಿಲ್‌ನಲ್ಲಿದ್ದ ಶೇ. 4.2 ರಿಂದ ಮೇ ತಿಂಗಳಲ್ಲಿ ಶೇ. 4.78 ಕ್ಕೆ ಏರಿದೆ. ಗ್ರಾಮೀಣ ಭಾಗದಲ್ಲಿ ಆಹಾರ ಹಣದುಬ್ಬರ ಶೇ. 4.85 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಶೇ. 4.66 ರಷ್ಟಿದೆ. ಅಂದರೆ ನಗರಗಳಿಗಿಂತ ಗ್ರಾಮೀಣ ಭಾಗದಲ್ಲಿ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದೆ.

ಇದನ್ನೂ ಓದಿ: ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು?

ಕೇವಲ ಹಸಿ ಆಹಾರ ಧಾನ್ಯಗಳು ಮಾತ್ರವಲ್ಲದೆ, ಸಿದ್ಧ ಆಹಾರದ ಮೇಲೂ ಇದರ ಪ್ರಭಾವ ಬೀರಿದೆ. ರೆಸ್ಟೋರೆಂಟ್‌ಗಳು ಮತ್ತು ವಸತಿ ಸೇವೆಗಳ ದರಗಳು ಶೇಕಡಾ 5.75 ರಷ್ಟು ದುಬಾರಿಯಾಗಿವೆ.

ಸಾರಿಗೆ ವೆಚ್ಚ ಮತ್ತು ಚಿನ್ನದ ಬೆಲೆಯ ಪ್ರಭಾವ

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಬೆಲೆಯ ಏರಿಳಿತದ ಕಾರಣ ಸರಕು ಸಾಗಣೆ ವೆಚ್ಚವು ವಾರ್ಷಿಕವಾಗಿ ಶೇಕಡಾ 7.63 ರಷ್ಟು ಹೆಚ್ಚಾಗಿದೆ. ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದ ಹಿನ್ನೆಲೆಯಲ್ಲಿ, ಆಭರಣ ಮತ್ತು ಅಮೂಲ್ಯ ಲೋಹಗಳನ್ನೊಳಗೊಂಡ ವಲಯದಲ್ಲಿ ಶೇ. 56.35 ರಷ್ಟು ಭಾರಿ ಹಣದುಬ್ಬರ ದಾಖಲಾಗಿದೆ. ಇದು ಗ್ರಾಹಕ ಬೆಲೆ ಸೂಚ್ಯಂಕ (CPI) ಬುಟ್ಟಿಯಲ್ಲೇ ಅತ್ಯಂತ ವೇಗವಾಗಿ ಬೆಳೆದ ಅಂಶವಾಗಿದೆ.

ಶಿಕ್ಷಣವೂ ದುಬಾರಿ: ಉನ್ನತ ಶಿಕ್ಷಣದ ವೆಚ್ಚಗಳು ಶೇ. 3.64 ರಷ್ಟು ಮತ್ತು ಒಟ್ಟಾರೆ ಶಿಕ್ಷಣ ಸೇವೆಗಳ ದರ ಶೇ. 2.99 ರಷ್ಟು ಹೆಚ್ಚಾಗಿದ್ದು, ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬಿದ್ದಿದೆ.

ಆರ್‌ಬಿಐ (RBI) ಮುಂದಿರುವ ಸವಾಲುಗಳು

ಪ್ರಸ್ತುತ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ ಗುರಿಯಾದ ಶೇಕಡಾ 2 ರಿಂದ 6 ರ ಒಳಗಿನ ಮಿತಿಯಲ್ಲೇ ಇದ್ದರೂ, ಅದು 4 ರ ಸನಿಹಕ್ಕೆ ತಲುಪುತ್ತಿರುವುದು ಕಳವಳ ಮೂಡಿಸಿದೆ. ಒಂದು ವೇಳೆ ಮುಂಗಾರು (Monsoon) ದುರ್ಬಲಗೊಂಡರೆ ಅಥವಾ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಮತ್ತೆ ಏರಿಕೆಯಾದರೆ ಹಣದುಬ್ಬರವು ಶೇಕಡಾ 5 ರ ಗಡಿ ದಾಟಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದರಿಂದಾಗಿ ಆರ್‌ಬಿಐ ಮುಂದಿನ ದಿನಗಳಲ್ಲಿ ಬಡ್ಡಿದರಗಳನ್ನು (Repo Rate) ಶೇಕಡಾ 0.25 ರಿಂದ 0.50 ರಷ್ಟು ಹೆಚ್ಚಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಡವರ ಪಟ್ಟಿಗೆ 6 ವರ್ಷದಲ್ಲಿ 2.7 ಕೋಟಿ ಜನರ ಸೇರ್ಪಡೆ; ಬಡತನ ಶೇ. 7ರಷ್ಟು ಹೆಚ್ಚಳ

ವರ್ಷದ ಆರಂಭದಲ್ಲಿ (ಜನವರಿಯಲ್ಲಿ ಶೇ. 2.74) ನಿಯಂತ್ರಣದಲ್ಲಿದ್ದ ಹಣದುಬ್ಬರವು, ಕಳೆದ 5 ತಿಂಗಳುಗಳಿಂದ ನಿರಂತರವಾಗಿ ಏರುತ್ತಾ ಮೇ ತಿಂಗಳಲ್ಲಿ ಶೇ. 3.93 ಕ್ಕೆ ತಲುಪಿದೆ. ತರಕಾರಿ, ಆಹಾರ ಧಾನ್ಯಗಳು ಮತ್ತು ಸಾಗಣೆ ವೆಚ್ಚದ ಏರಿಕೆಯೇ ಇದಕ್ಕೆ ಮುಖ್ಯ ಕಾರಣ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ