AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು?

Indian Stock Market Surges: ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ಏರಿಕೆ ಕಂಡಿದೆ, ಸೆನ್ಸೆಕ್ಸ್ 1,700 ಅಂಕ, ನಿಫ್ಟಿ 23,600 ದಾಟಿದೆ. ಹೂಡಿಕೆದಾರರ ಸಂಪತ್ತು ₹7 ಲಕ್ಷ ಕೋಟಿ ಹೆಚ್ಚಾಗಿದೆ. ಯುಎಸ್-ಇರಾನ್ ಶಾಂತಿ ಭರವಸೆ, ಕಚ್ಚಾ ತೈಲ ಬೆಲೆ ಇಳಿಕೆ, ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಟ್ರೆಂಡ್, ಬಲಗೊಂಡ ರೂಪಾಯಿ ಮತ್ತು ಆರ್‌ಬಿಐ ಕ್ರಮಗಳು ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಬ್ಯಾಂಕಿಂಗ್, ಐಟಿ ಸೇರಿದಂತೆ ಎಲ್ಲಾ ವಲಯಗಳು ಲಾಭ ಕಂಡಿವೆ.

ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು?
ಷೇರು ಮಾರುಕಟ್ಟೆImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2026 | 4:37 PM

Share

ನವದೆಹಲಿ, ಜೂನ್ 12: ಭಾರತೀಯ ಷೇರು ಮಾರುಕಟ್ಟೆ (India Stock Market) ಇಂದು ಶುಕ್ರವಾರ ಭಾರಿ ಏರಿಕೆ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ (BSE Sensex) ಸುಮಾರು 1,700 ಅಂಕಗಳಷ್ಟು ಜಿಗಿತ ಸಾಧಿಸಿದರೆ, ಎನ್‌ಎಸ್‌ಇ ನಿಫ್ಟಿ (NSE Nifty 50) ಮತ್ತೆ 23,600 ರ ಮಟ್ಟವನ್ನು ದಾಟಿದೆ. ಈ ಭರ್ಜರಿ ಚೇತರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಸುಮಾರು 7 ಲಕ್ಷ ಕೋಟಿ ರೂಗಿಂತಲೂ ಹೆಚ್ಚು ಹೆಚ್ಚಾಗಿದೆ. ಮಾರುಕಟ್ಟೆ ಇವತ್ತು ಶೇ. 2ರಷ್ಟು ಜಿಗಿತ ಕಂಡಿರುವುದು ವಿಶೇಷ. ಸೆನ್ಸೆಕ್ಸ್ 75,527 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿದೆ. ನಿಫ್ಟಿ ಸೂಚ್ಯಂಕ 23,622 ಅಂಕಗಳೊಂದಿಗೆ ಅಂತ್ಯಗೊಂಡಿದೆ. ಭಾರತದ ಷೇರು ಮಾರುಕಟ್ಟೆ ಈ ಪರಿ ಭರ್ಜರಿ ಏರಿಕೆಗೆ ಏನು ಕಾರಣ? ಇಲ್ಲಿದೆ ಡೀಟೇಲ್ಸ್.

ಯುಎಸ್-ಇರಾನ್ ಶಾಂತಿ ಒಪ್ಪಂದದ ಭರವಸೆ

ಜಾಗತಿಕವಾಗಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಲು ಪ್ರಮುಖ ಕಾರಣ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ. ಅಮೆರಿಕ ಮತ್ತು ಇರಾನ್ ನಡುವೆ ಈ ವಾರಾಂತ್ಯದಲ್ಲೇ ಶಾಂತಿ ಒಪ್ಪಂದ ಏರ್ಪಡಬಹುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಭರವಸೆ ಮೂಡಿಸಿದೆ.

ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಯುದ್ಧದ ಆತಂಕ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ (Crude Oil) ಬೆಲೆ ಬ್ಯಾರೆಲ್‌ಗೆ 88.80 ಡಾಲರ್‌ಗೆ ಕುಸಿದಿದೆ. ಇದು ಕಳೆದ ಎರಡು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ತೈಲ ಬೆಲೆ ಇಳಿಕೆಯು ಭಾರತದಂತಹ ದೊಡ್ಡ ಆಮದು ದೇಶದ ಆರ್ಥಿಕತೆಗೆ ವರದಾನವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಡವರ ಪಟ್ಟಿಗೆ 6 ವರ್ಷದಲ್ಲಿ 2.7 ಕೋಟಿ ಜನರ ಸೇರ್ಪಡೆ; ಬಡತನ ಶೇ. 7ರಷ್ಟು ಹೆಚ್ಚಳ

ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಟ್ರೆಂಡ್

ಟ್ರಂಪ್ ಅವರ ಶಾಂತಿ ಸಂಕೇತದಿಂದಾಗಿ ಏಷ್ಯಾದ ಪ್ರಮುಖ ಷೇರು ಮಾರುಕಟ್ಟೆಗಳಾದ ಜಪಾನ್‌ನ ಟೋಪಿಕ್ಸ್ (Topix), ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಶೇಕಡಾ 1 ರಿಂದ 1.5 ರಷ್ಟು ಏರಿಕೆ ಕಂಡವು. ಯುಎಸ್ ಮಾರುಕಟ್ಟೆಯ ಫ್ಯೂಚರ್ಸ್ ಕೂಡ ಲಾಭದಲ್ಲಿದ್ದವು.

ಬಲಗೊಂಡ ಭಾರತೀಯ ರೂಪಾಯಿ

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 60 ಪೈಸೆಗಿಂತಲೂ ಹೆಚ್ಚು ಜಿಗಿತ ಕಂಡು 95.25 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿತು. ರೂಪಾಯಿ ಬಲಗೊಂಡಿರುವುದು ವಿದೇಶಿ ಹೂಡಿಕೆದಾರರಲ್ಲಿ (FIIs) ಭಾರತೀಯ ಮಾರುಕಟ್ಟೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.

ಆರ್‌ಬಿಐ (RBI) ತೆಗೆದುಕೊಂಡ ಮಹತ್ವದ ಕ್ರಮಗಳು

ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ರೂಪಾಯಿ ಮೌಲ್ಯಕ್ಕೆ ಬೆಂಬಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೆಲವು ಪ್ರಮುಖ ನೀತಿ ಕ್ರಮಗಳನ್ನು ಪ್ರಕಟಿಸಿದೆ. ಇದು ಕೂಡ ಮಾರುಕಟ್ಟೆಯ ಇಂದಿನ ಮುನ್ನಡೆಗೆ ಮತ್ತೊಂದು ಪ್ರಮುಖ ಶಕ್ತಿಯಾಗಿದೆ.

ಇದನ್ನೂ ಓದಿ: ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ

ಬ್ಯಾಂಕಿಂಗ್, ಆಟೋಮೊಬೈಲ್, ಮೆಟಲ್ ಮತ್ತು ಐಟಿ ಸೇರಿದಂತೆ ಎಲ್ಲಾ ವಲಯದ ಷೇರುಗಳೂ ಇಂದು ಹಸಿರು ನಿಶಾನೆ (ಲಾಭ) ಕಂಡಿವೆ. ಶ್ರೀರಾಮ್ ಫೈನಾನ್ಸ್, ಟ್ರೆಂಟ್, ಎಲ್‌ಆಂಡ್‌ಟಿ ಮತ್ತು ಬಜಾಜ್ ಫೈನಾನ್ಸ್ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ. ನಿಫ್ಟಿ ಬ್ಯಾಂಕ್ ಬಹುತೇಕ ಶೇ. 3ರ ಸಮೀಪದಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಫಿನಾನ್ಷಿಯಲ್ ಸರ್ವಿಸ್ ಇಂಡೆಕ್ಸ್ ಸಾಧಿಸಿದ ಹೆಚ್ಚಳವು ಶೇ. 3 ಅನ್ನು ದಾಟಿ ಹೋಗಿದೆ. ಬಿಎಸ್​ಇನಲ್ಲೂ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕಗಳು ಸಖತ್ ಹಿಗ್ಗಿವೆ. ಹೆಚ್ಚಿನ ಇಂಡೆಕ್ಸ್​ಗಳು ಪಾಸಿಟಿವ್ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ