ಕ್ಯೂಐಪಿ ಮೂಲಕ ಈ ವರ್ಷ ಒಂದು ಲಕ್ಷ ಕೋಟಿ ರೂ ದಾಟಿದ ಕಾರ್ಪೊರೇಟ್ ಫಂಡಿಂಗ್; ಇತಿಹಾಸದಲ್ಲೇ ಇದು ದೊಡ್ಡ ಮೊತ್ತ

Record fund raising through QIP: ಈ ಕ್ಯಾಲಂಡರ್ ವರ್ಷದಲ್ಲಿ ಭಾರತದ ಕಂಪನಿಗಳು ಕ್ಯುಐಪಿ ಮೂಲಕ ಹೊಸ ದಾಖಲೆಯ ಮೊತ್ತದ ಬಂಡವಾಳ ಪಡೆಯಲು ಯಶಸ್ವಿಯಾಗಿವೆ. ಜನವರಿಯಿಂದ ನವೆಂಬರ್​ವರೆಗೆ 80 ಕಂಪನಿಗಳು ಕ್ವಾಲಿಫೈಡ್ ಇನ್ಸ್​ಟಿಟ್ಯೂಶನಲ್ ಪ್ಲೇಸ್​ಮೆಂಟ್ ಮೂಲಕ 1.13 ಲಕ್ಷ ಕೋಟಿ ರೂ ಬಂಡವಾಳ ಪಡೆದಿವೆ. ಯಾವುದೇ ವರ್ಷದಲ್ಲಿ ಕ್ಯುಐಪಿ ಮೂಲಕ 1 ಲಕ್ಷ ಕೋಟಿ ರೂ ಬಂಡವಾಳ ಸಂಗ್ರಹದ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು.

ಕ್ಯೂಐಪಿ ಮೂಲಕ ಈ ವರ್ಷ ಒಂದು ಲಕ್ಷ ಕೋಟಿ ರೂ ದಾಟಿದ ಕಾರ್ಪೊರೇಟ್ ಫಂಡಿಂಗ್; ಇತಿಹಾಸದಲ್ಲೇ ಇದು ದೊಡ್ಡ ಮೊತ್ತ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 02, 2024 | 3:02 PM

ನವದೆಹಲಿ, ಡಿಸೆಂಬರ್ 2: ಕ್ಯೂಐಪಿ ಅಥವಾ ಕ್ವಾಲಿಫೈಡ್ ಇನ್ಸ್​ಟಿಟ್ಯೂಶನಲ್ ಪ್ಲೇಸ್​ಮೆಂಟ್ ಮಾರ್ಗದಲ್ಲಿ ಈ ಕ್ಯಾಲಂಡರ್ ವರ್ಷದಲ್ಲಿ ಭಾರತೀಯ ಕಂಪನಿಗಳು ಪಡೆದ ಹಣದ ನೆರವು ಒಂದು ಲಕ್ಷ ಕೋಟಿ ರೂ ಗಡಿದಾಟಿದೆ. ಯಾವುದೇ ವರ್ಷದಲ್ಲಿ ಕಂಪನಿಗಳು ಒಂದು ವರ್ಷದಲ್ಲಿ ಇಷ್ಟೊಂದು ಮತ್ತದ ಫಂಡಿಂಗ್ ಪಡೆದದ್ದಿಲ್ಲ. ಆ ಮಟ್ಟಿಗೆ ಕ್ಯುಐಪಿ ಹೊಸ ಇತಿಹಾಸ ಸೃಷ್ಟಿಸಿದೆ.

ಮೊನ್ನೆ ಬಿಡುಗಡೆಯಾದ ದತ್ತಾಂಶದ ಪ್ರಕಾರ 80 ಕಂಪನಿಗಳು ಈ ವರ್ಷ (ಜನವರಿಯಿಂದ ಈಚೆಗೆ) ಕ್ಯುಐಪಿ ಮೂಲಕ ದಾಖಲೆಯ 1.13 ಲಕ್ಷ ಕೋಟಿ ರೂ ಫಂಡಿಂಗ್ ಪಡೆದಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 35 ಕಂಪನಿಗಳು 38,220 ಕೋಟಿ ರೂ ಫಂಡ್​ಗಳನ್ನು ಪಡೆದಿದ್ದವು. ಅದಕ್ಕೆ ಹೋಲಿಸಿದರೆ ಫಂಡಿಂಗ್ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. ಕಂಪನಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ 1.82 ಲಕ್ಷ ಕೋಟಿ ರೂ; ಶೇ. 8.5ರಷ್ಟು ಹೆಚ್ಚಳ

2020ರ ಕ್ಯಾಲಂಡರ್ ವರ್ಷದಲ್ಲಿ 25 ಕಂಪನಿಗಳು 80,816 ಕೋಟಿ ರೂ ಫಂಡಿಂಗ್ ಅನ್ನು ಕ್ಯೂಐಪಿ ಮೂಲಕ ಪಡೆದಿದ್ದವು. ಅದು ಹೊಸ ದಾಖಲೆ ಎನಿಸಿತ್ತು. ಈ ವರ್ಷ ಆ ದಾಖಲೆಯನ್ನು ಮುರಿದುಹಾಕಲಾಗಿದೆ. ಈ ಕ್ಯಾಲಂಡರ್ ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದೆ.

ರಿಯಲ್ ಎಸ್ಟೇಟ್ ಕಂಪನಿಯಾದ ಗೋದ್ರೇಜ್ ಪ್ರಾಪರ್ಟೀಸ್, ಮತ್ತು ಕೇಬಲ್ ವೈರ್ ಸಂಸ್ಥೆಯಾದ ಕೆಇಐ ಇಂಡಸ್ಟ್ರೀಸ್ ಈಗಾಗಲೇ ಕ್ಯುಐಪಿಯಲ್ಲಿ ಬಂಡವಾಳ ಸಂಗ್ರಹಿಸುವ ಕಾರ್ಯದಲ್ಲಿವೆ. 8,000 ಕೋಟಿ ರೂ ಮೊತ್ತದಷ್ಟು ಬಂಡವಾಳಕ್ಕೆ ಇವು ಯತ್ನಿಸುತ್ತಿವೆ. ಇದು ಸಾಧ್ಯವಾದಲ್ಲಿ ಈ ಕ್ಯಾಲಂಡರ್ ವರ್ಷದಲ್ಲಿ, ಅಂದರೆ ಜನವರಿಯಿಂದ ಡಿಸೆಂಬರ್​ವರೆಗೆ ಕ್ಯೂಐಪಿಯಿಂದ ಪಡೆಯಲಾದ ಒಟ್ಟು ಬಂಡವಾಳ 1.21 ಲಕ್ಷ ಕೋಟಿ ರೂ ಆಗಬಹುದು.

ಇದನ್ನೂ ಓದಿ: ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಗಮನ; ಶೇ. 25ರಷ್ಟು ಬಂಡವಾಳ ವೆಚ್ಚ ಹೆಚ್ಚುವ ನಿರೀಕ್ಷೆ: ಜೆಫರೀಸ್

ಏನಿದು ಕ್ಯೂಐಪಿ?

ಕ್ಯೂಐಪಿ ಅಥವಾ ಕ್ವಾಲಿಫೈಡ್ ಇನ್ಸ್​ಟಿಟ್ಯೂಶನಲ್ ಪ್ಲೇಸ್​ಮೆಂಟ್ ಎಂಬುದು ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳ ಸಂಗ್ರಹಿಸಲು ಇರುವ ಒಂದು ಮಾರ್ಗ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಷೇರು ಅಥವಾ ಕನ್ವರ್ಟಬಲ್ ಸೆಕ್ಯೂರಿಟಿಗಳನ್ನು ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ) ವಿತರಿಸಿ, ಆ ಮೂಲಕ ಸಾಲ ಪಡೆಯುತ್ತವೆ. ಇಲ್ಲಿ ಸಾಂಸ್ಥಿಕ ಖರೀದಿದಾರರೆಂದರೆ, ಮ್ಯೂಚುವಲ್ ಫಂಡ್​ಗಳು, ಇನ್ಷೂರೆನ್ಸ್ ಕಂಪನಿಗಳು ಮತ್ತು ಬ್ಯಾಂಕುಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 2 December 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ